ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ಡಿಜೆ ಜ್ಞಾನವೇಲ್ ಕಾಂಬೀನೇಷನ್ನ ಬಹು ನಿರೀಕ್ಷಿತ ವೆಟ್ಟೈಯಾನ್(Vettaiyan) ಸಿನಿಮಾದ ಟ್ರೇಲರ್ ಬುಧವಾರ(ಅಕ್ಟೋಬರ್ 2) ಬಿಡುಗಡೆಯಾಗಿದೆ. ರಜನಿಕಾಂತ್ ಅವರ 170ನೇ ಸಿನಿಮಾ ಹಾಗೂ ದಿಗ್ಗಜರನ್ನು ಒಂದೇ ಸ್ಕ್ರೀನ್‌ನಲ್ಲಿ ನೋಡುಲು ಕಾಯುತ್ತಿದ್ದ ಅಭಿಮಾನಿಗಳು ಕಾಯುತ್ತಿದ್ದರು. ಸದ್ಯ ಬಿಡುಗಡೆಯಾಗಿರುವ 2 ನಿಮಿಷ 39 ಸೆಕೆಂಡುಗಳ ವಿಡಿಯೋ ಚಿತ್ರದ ಬಗ್ಗೆ ಇನ್ನಷ್ಟು ಹೈಪ್ ಕ್ರಿಯೆಟ್ ಮಾಡಿದೆ.
ಇದನ್ನು ಓದಿ: ಮದುವೆ ಬಳಿಕ ನಟನೆ ಮುಂದುವರಿಸಲು ಇಷ್ಟವಿರಲಿಲ್ಲ ಆದರೆ..; ಶರಣ್ಯಾ ಪೊನ್ವಣ್ಣನ್ ಹೇಳಿಕೆ ವೈರಲ್ | Saranya Ponvannan
ಟ್ರೇಲರ್‌ನಲ್ಲಿ ಸಾಕಷ್ಟು ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಆಕ್ಷನ್ ಇರುವುದನ್ನು ಕಾಣಬಹುದು. ರಜನಿಕಾಂತ್ ಶಾಂತ, ಆದರೆ ವೀರ, ವಿವೇಚನಾಯುಕ್ತ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದರೆ, ಚಿತ್ರದಲ್ಲಿ ನಟಿಸಿರುವ ಅಮಿತಾಭ್, ರಾಣಾ, ಬಹದ್, ತುಳಸಿ ಮುಂತಾದವರು ಕೂಡ ಟ್ರೇಲರ್ ನಲ್ಲಿ ಬಂದು ಹೋಗುತ್ತಾರೆ.
ಗಲ್ಲಿಗೇರಿಸಿ ಗಲ್ಲಿಗೇರಿಸಿ ಅಪರಾಧಿಗಳನ್ನು ಗಲ್ಲಿಗೇರಿಸಿ ಎಂದು ಆರಂಭವಾಗುವ ಟ್ರೇಲರ್ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದರೊಂದಿಗೆ ಮುಂದುವರಿಯುತ್ತದೆ. ಮಹಿಳೆಯ ವಿರುದ್ಧ ಎಸಗಿದ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ವೇಳೆ ರಜನಿಕಾಂತ್ ಅವರೆಲ್ಲರನ್ನೂ ಮೂರು ದಿನದಲ್ಲಿ ಎನ್‌ಕೌಂಟರ್ ಮಾಡುತ್ತೇನೆಂದು ಎಂಟ್ರಿ ಕೊಡುತ್ತಾರೆ. ಇತ್ತ ಅನ್ಯಾಯದ ವಿರುದ್ಧ ನ್ಯಾಯ ಸಿಗಬೇಕು. ಆದರೆ, ಅನ್ಯಾಯದ ವಿರುದ್ಧ ಮತ್ತೊಂದು ಅನ್ಯಾಯ ಆಗಬಾರದು ಎಂದು ಅಮಿತಾಭ್ ಬಚ್ಚನ್ ಪಾಠ ಮಾಡುವ ದೃಶ್ಯವಿದೆ. ಇದು ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ನಡುವೆ ಜಿದ್ದಾಜಿದ್ದಿ ಎಂಬುದನ್ನು ಖಚಿತ ಪಡಿಸುತ್ತದೆ.
ಸತ್ಯವನ್ನು ಹೊರತರುವ ಪ್ರಯತ್ನ, ಸುಳ್ಳನ್ನು ಹತ್ತಿಕ್ಕುವ ಹೋರಾಟ, ರಜನಿಕಾಂತ್ ಅಥವಾ ಅಮಿತಾಭ್ ಯಾರು ಗೆಲ್ಲುತ್ತಾರೆ, ಯಾರು ಸೋಲನ್ನು ಎದುರಿಸಬೇಕಾಗುತ್ತದೆ ಎಂಬುದು ಚಿತ್ರ ಬಿಡುಗಡೆಯ ನಂತರವೇ ತಿಳಿಯಲಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಟಿಸುತ್ತಿರುವುದೇ ಸಿನಿಮಾದ ಪ್ಲಸ್ ಪಾಯಿಂಟ್. ಬಹಳ ದಿನಗಳ ಬಳಿಕ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1991ರಲ್ಲಿ ತೆರೆಕಂಡ ‘ಹಮ್’ ಚಿತ್ರದಲ್ಲಿ ಈ ಇಬ್ಬರೂ ಕೊನೆಯದಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ವೆಟ್ಟೈಯಾನ್ ಸಿನಿಮಾ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಜತೆಗೆ ಮಂಜು ವಾರಿಯರ್, ರಿತಿಕಾ ಸಿಂಗ್, ದುಶ್ರಾ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್)
ತಂದೆಯ ಸಾವಿನ ಬಳಿಕ ಮಲೈಕಾ ಅರೋರಾ ನ್ಯೂಲುಕ್ ರಿವೀಲ್; ನೆಟ್ಟಿಗರ ರಿಯಾಕ್ಷನ್ ಹೀಗಿದೆ..| Malaika Arora