36 ಕೋಟಿ ರೂ. ಬಾಚಿದ ಪೆಟ್ಟಾ?

ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶ್ಯಾದ್ಯಂತ ‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯದ ‘ಪೆಟ್ಟಾ’ ಮತ್ತು ಅಜಿತ್​ಕುಮಾರ್ ನಟನೆಯ ‘ವಿಶ್ವಾಸಂ’ ಚಿತ್ರಗಳು ತೆರೆಕಂಡಿದ್ದವು. ಇವೆರಡೂ ಸ್ಟಾರ್ ನಟರ ಸಿನಿಮಾಗಳಾಗಿದ್ದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿತ್ತು. ಅಂತೆಯೇ ಈ ಎರಡರಲ್ಲಿ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಯಾವುದು? ಗಲ್ಲಾ ಪೆಟ್ಟಿಗೆ ಮೂಲಗಳ ಪ್ರಕಾರ, ‘ಪೆಟ್ಟಾ’ ಮೊದಲ ದಿನ ವಿಶ್ವಾದ್ಯಂತ 36 ಕೋಟಿ ರೂ. ಬಾಚಿಕೊಂಡಿದೆ! ಇನ್ನು, ‘ವಿಶ್ವಾಸಂ’ ವಿಶ್ವಾದ್ಯಂತ ಫಸ್ಟ್ ಡೇ 25 ಕೋಟಿ ರೂ. ಕಮಾಯಿ ಮಾಡಿದೆ. ವಿಶೇಷವೆಂದರೆ, ‘ಪೆಟ್ಟಾ’ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ತೆರೆಕಂಡಿತ್ತು. ಆದರೆ, ‘ವಿಶ್ವಾಸಂ’ ಬರೀ ತಮಿಳಿನಲ್ಲಿ ತೆರೆಗೆ ಬಂದಿದೆ. ಜತೆಗೆ ‘ವಿಶ್ವಾಸಂ’ಗಿಂತ ಹೆಚ್ಚು ತೆರೆಗಳ ಮೇಲೆ ‘ಪೆಟ್ಟಾ’ ಪ್ರದರ್ಶನ ಕಾಣುತ್ತಿದೆ. ಆದ್ದರಿಂದ ರಜನಿ ಚಿತ್ರದ ಕಲೆಕ್ಷನ್ ಹೆಚ್ಚಿದೆ ಎಂಬ ವಿಶ್ಲೇಷಣೆ ಬಾಕ್ಸ್ ಆಫೀಸ್ ಪಂಡಿತರದ್ದು.ಇನ್ನು, ರಜನಿಕಾಂತ್ ಅವರ ಹಿಂದಿನ ಸಿನಿಮಾಗಳು ಉತ್ತಮ ಗಳಿಕೆ ಮಾಡಿದ್ದರೂ, ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಪಡೆದುಕೊಂಡಿರಲಿಲ್ಲ. ಅದರ ಪರಿಣಾಮ ‘ಪೆಟ್ಟಾ’ ಗಳಿಕೆ ಮೇಲೆ ಬೀರಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ರಜನಿ ಅಭಿಮಾನಿಗಳಿಗೆ ಇಷ್ಟವಾಗುವಂತಹ ಅಂಶಗಳು ಚಿತ್ರದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ‘ಪೆಟ್ಟಾ’ ಗಳಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. -ಏಜೆನ್ಸೀಸ್