ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಇಂದು ನಟ, ರಾಜಕಾರಣಿ ಕಮಲ್ ಹಾಸನ್ ಅವರನ್ನು ಚೆನ್ನೈನಲ್ಲಿ ಭೇಟಿಯಾಗಿ ತಮ್ಮ ಮಗಳು ಸೌಂದರ್ಯ ಅವರ ವಿವಾಹಕ್ಕೆ ಆಮಂತ್ರಣ ನೀಡಿದರು.
ಫೆ. 11ರಂದು ಉದ್ಯಮಿ ಮತ್ತು ನಟ ವಿಶಾಗನ್ ವನಂಗಮುದಿ ಅವರೊಂದಿಗೆ ನಡೆಯಲಿರುವ ವಿವಾಹಕ್ಕೆ ಆಗಮಿಸುವಂತೆ ರಜನಿಕಾಂತ್ ಕಮಲ್ಹಾಸನ್ರನ್ನು ಆಹ್ವಾನಿಸಿದ್ದಾರೆ.
ಸೌಂದರ್ಯ ಅವರು ಈ ಮೊದಲು ಕೈಗಾರಿಕೋದ್ಯಮಿ ರಾಮ್ಕುಮಾರ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಬಳಿಕ 2016ರಲ್ಲಿ ವಿಚ್ಛೇದನ ನೀಡಿದ್ದರು. ದಂಪತಿಗೆ ವೇದ್ ಎಂಬ ಪುತ್ರನಿದ್ದಾನೆ.
ಗುರುವಾರವಷ್ಟೇ ಸೌಂದರ್ಯ ಅವರ ತಂಡವು ಸೌಂದರ್ಯ ಮತ್ತು ವನಂಗಾಮುಡಿ ಒಟ್ಟಿಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಗ್ರಾಫಿಕ್ ಡಿಸೈನರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಸೌಂದರ್ಯ, ಬಾಬಾ, ಮಜಾ, ಸಂದಕೋಜಿ ಮತ್ತು ಶಿವಾಜಿ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿರುವ ಅವರು, ರಜನಿಕಾಂತ್ ಅಭಿನಯದ ಕೊಚ್ಚಾಡಿಯನ್ ಚಿತ್ರವನ್ನು ನಿರ್ದೇಶಿಸಿದ್ದರು. ಪೊನ್ನಿಯಿನ್ ಸೆಲ್ವಂ ಎಂಬ ವೆಬ್ ಸರಣಿಯನ್ನು ಕೂಡ ಆರಂಭಿಸಿದ್ದರು. (ಏಜೆನ್ಸೀಸ್)