ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​

ನವದೆಹಲಿ: ಸೂಪರ್ ಸ್ಟಾರ್​ ರಜನಿಕಾಂತ್​ ಇಂದು 68ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಅವರ ಮಿತ್ರರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ದಿಗ್ಗಜರಾದ ಅಮಿತಾಬ್​ಬಚ್ಚನ್​, ಅಕ್ಷಯ್​ ಕುಮಾರ್​, ಮೋಹನ್​ಲಾಲ್​, 2.0 ಸಿನಿಮಾ ನಿರ್ದೇಶಕ ಎಸ್​.ಶಂಕರ್​ ಸೇರಿ ಹಲವರು ಶುಭಕೋರಿದ್ದಾರೆ.

ಅಭಿಮಾನಿಗಳು ಸಹ ಟ್ವಿಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ​ಗಳ ಮೂಲಕ ತಮ್ಮ ನೆಚ್ಚಿನ ನಟನಿಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ.
ಅಮಿತಾಬ್​ಬಚ್ಚನ್​ ಟ್ವೀಟ್ ಮಾಡಿದ್ದು, ನನ್ನ ಸ್ನೇಹಿತ, ಆತ್ಮೀಯ, ಸಹೋದ್ಯೋಗಿ ರಜನೀಕಾಂತ್​…ಹ್ಯಾಪಿ ಬರ್ತ್​ ಡೇ ಎಂದು ವಿಶ್​ ಮಾಡಿ, ಜತೆಗೆ ತಾವು ರಜನೀಕಾಂತ್ ಜತೆಗೆ ಇರುವ ಹಲವು ಫೋಟೋಗಳನ್ನೂ ಶೇರ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್​​, ಅಮಿತ್​ ಜೀ ನೀವು ನನಗೆ ಸ್ಫೂರ್ತಿ, ನಿಮ್ಮ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 2.0 ಸಿನಿಮಾದಲ್ಲಿ ರಜನೀ ಜತೆ ಅಭಿನಯ ಮಾಡಿರುವ ಅಕ್ಷಯ್​ ಕುಮಾರ್​ ಕೂಡ ಇನ್​ಸ್ಟಾಗ್ರಾಂ​ ಮೂಲಕ ವಿಶ್​ ಮಾಡಿದ್ದು, ನಿಮ್ಮೊಂದಿಗೆ ನಟನೆ ಮಾಡುವುದು ನನ್ನ ಕನಸಾಗಿತ್ತು. ನೀವು ಸರಳತೆಯ ಪ್ರತೀಕ. ನಿಮ್ಮ ಜತೆ ಕೆಲಸ ಮಾಡುವುದೇ ನನಗೆ ಗೌರವ ಎಂದು ಬರೆದಿದ್ದಾರೆ.

ನಟ ಕಮಲ್​ ಹಾಸನ್, ಕ್ರಿಕೆಟ್​ ದಂತಕತೆ ಸಚಿನ್​ ತೆಂಡುಲ್ಕರ್​​ ಸೇರಿ ಹಲವು ಗಣ್ಯರು ರಜನೀಕಾಂತ್​ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ.