ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಟಿ.ಜೆ.ಜ್ಞಾನವೇಲ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ವೆಟ್ಟೈಯನ್’. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸಿನಿಮಾ ಇದೇ ಅ. 10ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಮಧ್ಯೆ, ಚಿತ್ರದ ಮೊದಲ ‘ಮನಸಿಲಾಯೋ’ ಎಂಬ ಹಾಡನ್ನು ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ‘ಅಣ್ಣ ಬಂದವ್ನೇ, ಆಳಲಿಕೆ ಬಂದವ್ನೇ, ಮುಗಿಸಲಿಕೆ ಬಂದವ್ನೇ. ಸ್ಕೆಚ್ಚೇ ಹಾಕವ್ನೇ’ ಎಂದು ಆರಂಭವಾಗುವ ಕನ್ನಡ ಅವತರಣಿಕೆಯ ಗೀತೆಯನ್ನು ವರದರಾಜ ಚಿಕ್ಕಬಳ್ಳಾಪುರ ರಚಿಸಿದ್ದು, ನಕಾಶ್ ಅಜೀಜ್, ಅರುಣ್ ಕೌಂಡಿನ್ಯ, ದೀಪ್ತಿ ಸುರೇಶ್ ಧ್ವನಿಯಾಗಿದ್ದಾರೆ. ಕಲರ್‌ುಲ್ ಸೆಟ್‌ನಲ್ಲಿ, ನೂರಾರು ಡಾನ್ಸರ್‌ಗಳ ಜತೆ ರಜಿನಿಕಾಂತ್ ಮತ್ತು ಮಂಜು ವಾರಿಯರ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಗೀತೆಗೆ ಅನಿರುದ್ಧ ರವಿಚಂದರ್ ಸಂಗೀತ, ದಿನೇಶ್ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಮೂಲಕ ಅಮಿತಾಭ್ ಬಚ್ಚನ್ ಹಾಗೂ ರಜಿನಿಕಾಂತ್ ಮೂರು ದಶಕದ ಬಳಿಕ ಮತ್ತೆ ಒಂದಾಗಿದ್ದಾರೆ. ರಾನಾ ದಗ್ಗುಬಾಟಿ, ಫಹದ್ ಫಾಸಿಲ್, ರಿತಿಕಾ ಸಿಂಗ್, ವಿಜಯನ್, ಜಿ.ಎಂ.ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್ ತಾರಾಗಣದಲ್ಲಿದ್ದಾರೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ.
ರಜಿನಿ-ಮಂಜು ಸಖತ್ ಸ್ಟೆಪ್: ‘ವೆಟ್ಟೈಯನ್’ ಚಿತ್ರದ ಮೊದಲ ಹಾಡು ರಿಲೀಸ್
You Might Also Like
Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…
ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…