ಚಂಡೆ ಹಿಡಿದ ರಾಜೇಶ್​ ಧ್ರುವ ; “ಪೀಟರ್​’ಗೆ “ದೂರದರ್ಶನ’ ಸುಕೇಶ್​ ಶೆಟ್ಟಿ ಆ್ಯಕ್ಷನ್​-ಕಟ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

“ಅಗ್ನಿಸಾ’, “ಅಣ್ಣ ತಂಗಿ’ ಧಾರಾವಾಹಿಗಳ ಖ್ಯಾತಿಯ ನಟ ರಾಜೇಶ್​ ಧ್ರುವ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿ, ನಿರ್ದೇಶಿಸಿದ್ದ ಸಿನಿಮಾ “ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ ಕಳೆದ ವರ್ಷ ತೆರೆಗೆ ಬಂದಿತ್ತು. ಹಾಗೇ 2023ರಲ್ಲೇ ಸುಕೇಶ್​ ಶೆಟ್ಟಿ ನಿರ್ದೇಶನದಲ್ಲಿ “ದೂರದರ್ಶನ’ ಸಿನಿಮಾ ರಿಲೀಸ್​ ಆಗಿತ್ತು. ಇದೀಗ ರಾಜೇಶ್​ ಮತ್ತು ಧ್ರುವ ತಮ್ಮ ಎರಡನೇ ಪ್ರಾಜೆಕ್ಟ್​ಗೆ ಒಂದಾಗಿದ್ದಾರೆ. ಚಿತ್ರದ ಹೆಸರು “ಪೀಟರ್​’. ಇತ್ತೀಚೆಗಷ್ಟೆ ಡಾಲಿ ಧನಂಜಯ ಮತ್ತು ವಿಜಯ್​ ಸೇತುಪತಿ ಟೈಟಲ್​ ರಿಲೀಸ್​ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ಬಗ್ಗೆ ನಾಯಕ ರಾಜೇಶ್​ ಧ್ರುವ, “ಜೆಸ್ಸಿ, ಹಳೆಯ ಮನೆ, ಅದರ ಮೇಲೆ ರಾಯಲ್​ ಚಂಡೆ ಬಾಯ್ಸ್​, ಮಲಯಾಳಂನಲ್ಲಿ ಕುಂಜೆತ್ತನ್​, ಜೆಸ್ಸಿ ವಾಪಸ್​ ಬಂದಿದಾಳೆ ಅನ್ನೋ ಬರಹಗಳು. ಗೋಡೆಗೆ ಒರಗಿದ ಆರ್​ಎಕ್ಸ್​ 100… ಹೀಗೆ ಪ್ರೇಕ್ಷಕರಿಗೆ ಪೋಸ್ಟರ್​ ಮೂಲಕವೇ ಚಿತ್ರದ ಬಗ್ಗೆ ಕುತೂಹಲ ಮೂಡಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಚಂಡೆ ಹಿಡಿದ ರಾಜೇಶ್​ ಧ್ರುವ ; "ಪೀಟರ್​'ಗೆ "ದೂರದರ್ಶನ' ಸುಕೇಶ್​ ಶೆಟ್ಟಿ ಆ್ಯಕ್ಷನ್​-ಕಟ್​
ಚಂಡೆ ಹಿಡಿದ ರಾಜೇಶ್​ ಧ್ರುವ ; "ಪೀಟರ್​'ಗೆ "ದೂರದರ್ಶನ' ಸುಕೇಶ್​ ಶೆಟ್ಟಿ ಆ್ಯಕ್ಷನ್​-ಕಟ್​ 3

ಚಂಡೆ ಕುರಿತ ಚಿತ್ರ
“ಚಂಡೆಯ ಕುರಿತು ಇದುವರೆಗೂ ಯಾವ ಚಿತ್ರರಂಗದಲ್ಲೂ ಸಿನಿಮಾ ಬಂದಿಲ್ಲ’ ಎನ್ನುವ ರಾಜೇಶ್​, “300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕೇರಳ ಮೂಲದ ಚಂಡೆ, ಕರ್ನಾಟಕಕ್ಕೆ ಹೇಗೆ ಬಂತು? ಪೀಟರ್​ಗೂ ಚಂಡೆಗೂ ಏನು ಸಂಬಂಧ? ಇಂತಹ ಹಲವು ಪ್ರಶ್ನೆಗಳು ಪ್ರೇಕ್ಷಕರಲ್ಲಿ ಮೂಡಿಬರಹುದು. ಅದಕ್ಕೆ ಚಿತ್ರದಲ್ಲಿ ಉತ್ತರ ನೀಡಿದ್ದೇವೆ’ ಎನ್ನುತ್ತಾರೆ.

ಚಂಡೆ ಹಿಡಿದ ರಾಜೇಶ್​ ಧ್ರುವ ; "ಪೀಟರ್​'ಗೆ "ದೂರದರ್ಶನ' ಸುಕೇಶ್​ ಶೆಟ್ಟಿ ಆ್ಯಕ್ಷನ್​-ಕಟ್​
ಚಂಡೆ ಹಿಡಿದ ರಾಜೇಶ್​ ಧ್ರುವ ; "ಪೀಟರ್​'ಗೆ "ದೂರದರ್ಶನ' ಸುಕೇಶ್​ ಶೆಟ್ಟಿ ಆ್ಯಕ್ಷನ್​-ಕಟ್​ 4

ಸೆನ್ಸಿಟಿವ್​ ಕ್ರೈಮ್​​ ಡ್ರಾಮಾ
“ಪೀಟರ್​’ ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ. ಇದೊಂದು ಸೆನ್ಸಿಟಿವ್​ ಕೆಮ್​ ಡ್ರಾಮಾ ಜಾನರ್​ ಚಿತ್ರವಾಗಿದ್ದು, ಜತೆಗೆ ಫ್ಯಾಮಿಲಿ ಎಮೋಷನ್ಸ್​ ಕೂಡ ಇರಲಿವೆಯಂತೆ. ಚಿತ್ರದಲ್ಲಿ ರಾಜೇಶ್​ ಧ್ರುವ ಜತೆ ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್​, ರಘು ಪಾಂಡೇಶ್ವರ್​, ರಾಮ ನಾಡಗೌಡ ತಾರಾಗಣದಲ್ಲಿದ್ದಾರೆ. ಈಗಾಗಲೇ ಮಡಿಕೇರಿಯ ಭಾಗಮಂಡಲದ ಸುಂದರ ಪರಿಸರದಲ್ಲಿ 29 ದಿನಗಳಲ್ಲಿ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಚಳಿಗಾಲದಲ್ಲಿ ಉಳಿದ ಶೂಟಿಂಗ್​ ನಡೆಸಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಅದಕ್ಕಾಗಿ ನಾಯಕ ಮತ್ತು ಇನ್ನೆರಡು ಪಾತ್ರಧಾರಿಗಳು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಹಲವಾರು ಸಿನಿಮಾಗಳ ಡಿಟಿಎಸ್​ ಮತ್ತು ಎಸ್​ಎಫ್​ಎಕ್ಸ್​ ಮಾಡಿರುವ ಸೌಂಡ್​ ಇಂಜಿನಿಯರ್​ ರವಿ ಹಿರೇಮಠ್​ ಮತ್ತು ರಾಕೇಶ್​ ಹೆಗಡೆ ವೃದ್ಧಿ ಸ್ಟುಡಿಯೋಸ್​ ಬ್ಯಾನರ್​ನಲ್ಲಿ “ಪೀಟರ್​’ ನಿರ್ಮಿಸುತ್ತಿದ್ದಾರೆ.

“ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ಗೂ “ಪೀಟರ್​’ಗೂ ಅಜಗಜಾಂತರ ವ್ಯತ್ಯಾಸಗಳಿವೆ. ವಿಷಯ, ಪಾತ್ರ ಸಂಪೂರ್ಣ ವಿಭಿನ್ನವಾಗಿರಲಿದೆ. ಚಂಡೆ ಬಾರಿಸುವ ಹುಡುಗನೊಬ್ಬ, ತನ್ನದೇ ತಂಡ ಕಟ್ಟಿಕೊಂಡು ಅದನ್ನು ಬೆಳೆಸಲು ಯತ್ನಿಸುತ್ತಿರುವಾಗ ನಡೆಯುವ ಟನೆಯೊಂದರ ಸುತ್ತ ಕಥೆ ಸಾಗುತ್ತದೆ. ರಿವರ್ಸ್​ ಸ್ಕ್ರೀನ್​ಪ್ಲೇ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.
– ರಾಜೇಶ್​ ಧ್ರುವ, ನಾಯಕ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…