ಮುಂಬೈ: ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿದ್ದರೂ ದಿಢೀರ್ ಕುಸಿತ ಅನುಭವಿಸಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-14ರ ತನ್ನ 3ನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿತು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಸಿಎಸ್‌ಕೆ ನೀಡಿದ ಬೃಹತ್ ಮೊತ್ತ ಬೆನ್ನಟ್ಟಲು ವಿಲವಾದ ಸಂಜು ಸ್ಯಾಮ್ಸನ್ ಪಡೆ 45 ರನ್‌ಗಳಿಂದ ಶರಣಾಯಿತು. ಲೀಗ್‌ನ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 221 ರನ್ ಬೆನ್ನಟ್ಟುವ ಸಾಹಸಕ್ಕೆ ಮುಂದಾಗಿ ಕೇವಲ 4 ರನ್‌ಗಳಿಂದ ಸೋತಿದ್ದ ರಾಜಸ್ಥಾನ ರಾಯಲ್ಸ್ ತಂಡ ಸೋಮವಾರ ನಿಕೃಷ್ಟ ಬ್ಯಾಟಿಂಗ್ ಮೂಲಕ ಕುಸಿತ ಕಂಡಿತು. ಮತ್ತೊಂದೆಡೆ, ಸಿಎಸ್‌ಕೆ ತಂಡ ಸತತ ಎರಡನೇ ಜಯ ದಾಖಲಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೂರು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡ ಯುವ ವೇಗಿ ಚೇತನ್ ಸಕಾರಿಯ (36ಕ್ಕೆ 3) ಮಾರಕ ದಾಳಿ ನಡುವೆಯೂ 9 ವಿಕೆಟ್‌ಗೆ 188 ರನ್ ಕಲೆಹಾಕಿತು. ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್‌ಗೆ 143 ರನ್‌ಗಳಿಸಲಷ್ಟೇ ಶಕ್ತವಾಯಿತು.
ಸಿಎಸ್‌ಕೆ: 9 ವಿಕೆಟ್‌ಗೆ 188 (ಋತುರಾಜ್ ಗಾಯಕ್ವಾಡ್ 10, ಪ್ಲೆಸಿಸ್ 33, ಮೊಯಿನ್ ಅಲಿ 26, ಅಂಬಟಿ ರಾಯುಡು 27, ಧೋನಿ 18, ಬ್ರಾವೊ 20*, ಚೇತನ್ ಸಕಾರಿಯ 36ಕ್ಕೆ 3, ಕ್ರಿಸ್ ಮಾರಿಸ್ 33ಕ್ಕೆ 2, ಮುಸ್ತಾಫಿಜರ್ ರೆಹಮಾನ್ 37ಕ್ಕೆ 1, ರಾಹುಲ್ ತೆವಾಟಿಯಾ 21ಕ್ಕೆ 1), ರಾಜಸ್ಥಾನ ರಾಯಲ್ಸ್ : 9 ವಿಕೆಟ್‌ಗೆ 143 (ಜೋಸ್ ಬಟ್ಲರ್ 49, ಮನನ್ ವೋಹ್ರಾ 14, ಶಿವಂ ದುಬೆ 17, ತೆವಾಟಿಯಾ 20, ಉನಾದ್ಕತ್ 24, ಮೊಯಿನ್ ಅಲಿ 7ಕ್ಕೆ 3, ಸ್ಯಾಮ್ ಕರ‌್ರನ್ 24ಕ್ಕೆ 2, ಜಡೇಜಾ 28ಕ್ಕೆ 2)
A resounding victory for @ChennaiIPL against #RR by 45 runs.
— IndianPremierLeague (@IPL) April 19, 2021
4 fine catches and 2 wickets for @imjadeja 👏👏#VIVOIPL pic.twitter.com/xMtP2v2elL