ಐಪಿಎಲ್ ಹೀರೋ ರಾಹುಲ್ ತೆವಾಟಿಯಾ ನಿಶ್ಚಿತಾರ್ಥ

ನವದೆಹಲಿ: ಯುಎಇಯಲ್ಲಿ ಕಳೆದ ವರ್ಷ ನಡೆದ ಐಪಿಎಲ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಿರ್ವಹಣೆಯಿಂದ ಗಮನ ಸೆಳೆದಿದ್ದ ಹರಿಯಾಣದ ಆಲ್ರೌಂಡರ್ ರಾಹುಲ್ ತೆವಾಟಿಯಾ ಅವರ ನಿಶ್ಚಿತಾರ್ಥ ಬುಧವಾರ ನೆರವೇರಿದೆ. ‘3.2.2021’ ಎಂದಷ್ಟೇ ಬರೆದು ಉಂಗುರ ಮತ್ತು ಹೃದಯದ ಇಮೋಜಿಯನ್ನು ಪ್ರಕಟಿಸುವ ಮೂಲಕ ರಾಹುಲ್ ತೆವಾಟಿಯಾ ನಿಶ್ಚಿತಾರ್ಥವನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಜತೆಗೆ, ರಿಧಿ ಪನ್ನು ಜತೆಗಿನ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳನ್ನೂ ರಾಹುಲ್ ತೆವಾಟಿಯಾ ಟ್ವೀಟಿಸಿದ್ದಾರೆ. 27 ವರ್ಷದ ರಾಹುಲ್ ತೆವಾಟಿಯಾ ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ … Continue reading ಐಪಿಎಲ್ ಹೀರೋ ರಾಹುಲ್ ತೆವಾಟಿಯಾ ನಿಶ್ಚಿತಾರ್ಥ