ರಾಜಸ್ಥಾನದಲ್ಲಿ ಬಿಪಿಎಲ್​ ಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್​

ಜೈಪುರ (ರಾಜಸ್ಥಾನ): ಕೇಂದ್ರ ಸರ್ಕಾರದ ಡಿಜಿಟಲ್​ ಇಂಡಿಯಾಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಉದ್ದೇಶಿಸಿರುವ ರಾಜಸ್ಥಾನ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಮೊಬೈಲ್​ ಫೋನ್​ ವಿತರಿಸಲು ಮುಂದಾಗಿದೆ.

‘ಈ ಯೋಜನೆಗೆ ರಾಜಸ್ಥಾನ ಸರ್ಕಾರ “ಬಾಮಾಶಾ ಯೋಜನಾ” ಎಂಬ ಹೆಸರಟ್ಟಿದೆ. ಹಣಕಾಸಿನ ನೆರವುಳ್ಳ ಕಾರ್ಯಕ್ರಮಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಮತ್ತು ಈ ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ಸಾಧಿಸುವುದೇ ಮೊಬೈಲ್​ ಫೋನ್​ ವಿತರಣಾ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹೇಳಲಾಗಿದೆ.

ಇನ್ನೊಂದೆಡೆ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಮೊಬೈಲ್​ ಅಪ್ಲಿಕೇಷನ್​ವೊಂದನ್ನು ಸಿದ್ಧಪಡಿಸುತ್ತಿದ್ದು, ಅದರ ಮೂಲಕ ಬಡವರು ಒಂದು ಗುಂಡಿಯನ್ನು ಒತ್ತುವ ಮೂಲಕ ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳಾಗಬಹುದಾಗಿದೆ.

ಜನರು ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಂತೆ ಮಾಡುವ ಹಲವು ಕಾರ್ಯಕ್ರಮಗಳನ್ನು ರಾಜಸ್ಥಾನದ ಬಿಜೆಪಿ ಸರ್ಕಾರ ಈ ಹಿಂದೆಯೂ ಮಾಡಿತ್ತು. ಡಿಜಿಟಲ್​ ಪಾವತಿ ವ್ಯವಸ್ಥೆ ಪ್ರೋತ್ಸಾಹಿಸಲು ಆಗಸ್ಟ್ 29ರಂದು ರಾಜೆ ಅವರ ಸರ್ಕಾರ ಬಾಮಾಶಾ ವಾಲೆಟ್​ ಎಂಬ ಹೆಸರಿನ ಮೊಬೈಲ್​ ಅಪ್ಲಿಕೇಷನ್​ಅನ್ನು ಬಿಡುಗಡೆ ಮಾಡಿತ್ತು.