ರಾಜಸ್ಥಾನ ಕಾಂಗ್ರೆಸ್‌ನಿಂದ 28 ಮಂದಿ ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ

ಜೈಪುರ: ರಾಜಸ್ಥಾನದಲ್ಲಿ ನಡೆದ ಬೆಳವಣಿಗೆಯಲ್ಲಿ ಒಂಬತ್ತು ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್‌ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಪಕ್ಷದಿಂದ ಟಿಕೆಟ್‌ ನೀಡಿದ್ದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಕಾಂಗ್ರೆಸ್‌ ರಾಜ್ಯ ಘಟಕ ಈ ನಿರ್ಧಾರ ಕೈಗೊಂಡಿದೆ.

ಪಕ್ಷದ ವಕ್ತಾರ ಸಚಿನ್‌ ಪೈಲಟ್‌ ಪ್ರತಿಕ್ರಿಯಿಸಿ, ಮಾಜಿ ಕೇಂದ್ರ ಸಚಿವ ಮಹಾದೇವ್‌ ಸಿಂಗ್‌ ಖಂಡೇಲಾ, ಮಾಜಿ ಶಾಸಕ ಸನ್ಯಮ್‌ ಲೋಧಾ, ನಾತು ರಾಮ್‌ ಸಿನೋದಿಯಾ, ನಾವಲ್‌ ಕಿಶೋರ್‌ ಮೀನಾ, ಖುಶ್ವೀರ್‌ ಸಿಂಗ್, ಸೋಹನ್‌ ನಾಯಕ್, ಸಿಎಸ್‌ ಬೈದ್, ಮೇಶ್‌ ಚಾಂದ್‌ ಖಂಡೇವಾರ ಮತ್ತು ರಮೇಶ್‌ ಖಿಂಚಿಯನ್ನು ಉಚ್ಚಾಟಿಸಲಾಗಿದೆ. ಈ ನಾಯಕರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.

200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಡಿ. 7ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿ. 11 ರಂದು ಮತ ಏಣಿಕೆ ನಡೆಯಲಿದೆ. (ಏಜೆನ್ಸೀಸ್)