ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರಾಹುಲ್​ ಗಾಂಧಿಗೆ ಗೆಲುವಿನ ಉಡುಗೊರೆ: ಸಚಿನ್​ ಪೈಲಟ್​

ಐಪುರ್​: ರಾಹುಲ್​ ಗಾಂಧಿಯವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ರಾಜಸ್ಥಾನದಲ್ಲಿ ನಾವು ಸಾಧಿಸಿದ ಜಯವನ್ನು ಅವರಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದು ರಾಜ್ಯದ ಕಾಂಗ್ರೆಸ್​ ಅಧ್ಯಕ್ಷ ಸಚಿನ್​ ಪೈಲಟ್​ ಹೇಳಿದರು.

ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ರಾಜಸ್ಥಾನದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್​ನಲ್ಲಿ ನಂಬಿಕೆಯಿಟ್ಟಿರುವ ಎಲ್ಲ ಪಕ್ಷಗಳ ಜತೆ ಸಂಪರ್ಕದಲ್ಲಿದ್ದೇನೆ. ಜನಾದೇಶ ಬಿಜೆಪಿ ವಿರುದ್ಧವಾಗಿದೆ. ಬಿಜೆಪಿಯ ಅಹಂಕಾರಕ್ಕೆ ಸರಿಯಾದ ಏಟು ಬಿದ್ದಿದೆ ಎಂದರು.
ನಮ್ಮ ಪಕ್ಷದ್ದು ನೈತಿಕ ಗೆಲುವು. ಇನ್ನು ಉಳಿದಿದ್ದನ್ನು ಕಾಂಗ್ರೆಸ್​ ಹೈಕಮಾಂಡ್​ ನಿರ್ಧರಿಸುತ್ತದೆ. ರಾಹುಲ್​ಗಾಂಧಿಯವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.