ಗೆದ್ದ ಮೂರು ರಾಜ್ಯಗಳಲ್ಲೂ ಸಾಲಮನ್ನಾ ಮಾಡಿದ ಕಾಂಗ್ರೆಸ್​

ಜೈಪುರ: ಪಂಚ ರಾಜ್ಯಗಳ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಪ್ರಚಂಡ ಗೆಲವು ಸಾಧಿಸಿರುವ ಕಾಂಗ್ರೆಸ್​​​ ಈಗ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಧ್ಯಪ್ರದೇಶ, ಛತ್ತೀಸ್​ಗಢದ ಬಳಿಕ ರಾಜಸ್ಥಾನ ಸರ್ಕಾರ ಕೂಡ ರೈತರ ಸಾಲಮನ್ನಾ ಘೋಷಿಸಿದೆ.

ಸಾಲಮನ್ನಾ ಯೋಜನೆಯಡಿ ರೈತರು ಮಾಡಿರುವ 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ರಾಜಸ್ಥಾನದ ಸಿಎಂ ಅಶೋಕ್​ ಗೆಹ್ಲೋಟ್​​ ಘೋಷಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 18 ಸಾವಿರ ಕೋಟಿ ರೂ. ಹೊರೆ ಬೀಳಲಿದೆ ಎಂದಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್​ ಒಂದು ವಾರದೊಳಗೆ ರೈತರ ಸಾಲಮನ್ನಾ ಘೋಷಿಸಿದೆ. (ಏಜೆನ್ಸೀಸ್)