ರಾಜಸ್ಥಾನ: ಐದು ವರ್ಷದ ಆರ್ಯನ್ ಎಂಬ ಬಾಲಕ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 150 ಅಡಿ ಆಳದ ಕೊಳವೆ ಬಾವಿ ( Borewell )ಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.
ದೌಸಾ ಜಿಲ್ಲೆಯ ಕಲಿಖಂಡ್ ಎಂಬ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಾಲಕ ಆರ್ಯನ್ ಕೊಳವೆ ಬಾವಿಗೆ ಬಿದ್ದನು. ಆಟವಾಡಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿತು. ಇದಾದ ಒಂದು ಗಂಟೆಯ ನಂತರ ರಕ್ಷಣಾ ತಂಡಕ್ಕೆ ಮಾಹಿತಿ ದೊರೆಯಿತು. ಕೂಡಲೇ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಆಗಮಿಸಿದವು.
ಜೆಸಿಬಿಗಳು ಮತ್ತು ಡ್ರಿಲ್ಲಿಂಗ್ ಯಂತ್ರಗಳ ಸಹಾಯದಿಂದ ಕೊಳವೆ ಬಾವಿಗೆ ಸುತ್ತಲೂ ಮಣ್ಣನ್ನು ಅಗೆಯಲು ಆರಂಭಿಸಲಾಯಿತು. ಮತ್ತೊಂದೆಡೆ, ಪೈಪ್ ಮೂಲಕ ಬಾಲಕನಿಗೆ ನಿರಂತರ ಆಮ್ಲಜನಕವನ್ನು ಪೂರೈಸಲಾಯಿತು. ಆದಾಗ್ಯೂ, ರಕ್ಷಣಾ ಕಾರ್ಯಾಚರಣೆಯು ಅನೇಕ ಸವಾಲುಗಳನ್ನು ಎದುರಿಸಿತು.
ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಸುಮಾರು 160 ಅಡಿಯಲ್ಲಿ ಇರಬಹುದೆಂದು ಎನ್‌ಡಿಆರ್‌ಎಫ್ ತಂಡ ಅಂದಾಜಿಸಿತು. ಅಲ್ಲದೆ, ಭೂಮಿ ಒಳಗಿನ ಹಬೆಯಿಂದಾಗಿ ಬಾಲಕನ ಚಲನವಲನಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಕಷ್ಟವಾಗಿತ್ತು. ಅದೇ ಸಮಯದಲ್ಲಿ, ಸಾಕಷ್ಟು ಸುರಕ್ಷತಾ ಸಮಸ್ಯೆಗಳಿವೆ ಎಂದು ಅಧಿಕಾರಿಗಳು ಮನಗಂಡರು.
ಸುಮಾರು 57 ಗಂಟೆಗಳ ಪರಿಶ್ರಮದ ಬಳಿಕ 150 ಅಡಿ ಆಳದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಆರ್ಯನ್‌ನನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಗ್ರೀನ್ ಕಾರಿಡಾರ್ ಮೂಲಕ ಅತ್ಯಾಧುನಿಕ ಲೈಫ್ ಸಪೋರ್ಟ್ ಸಿಸ್ಟಂ ಹೊಂದಿದ ಆಂಬುಲೆನ್ಸ್ನಲ್ಲಿ ಆರ್ಯನ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಇದೀಗ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)
ಮಾಜಿ ಪತಿ ನಾಗಚೈತನ್ಯ ಬೆನ್ನಲ್ಲೇ 2ನೇ ಮದುವೆಗೆ ರೆಡಿಯಾದ ಸಮಂತಾ! ಸುಳಿವು ಬಿಟ್ಟುಕೊಟ್ಟ ಸೌತ್ ಬ್ಯೂಟಿ | Samantha
ಬೇಕರಿಗಳಲ್ಲಿ ಈ ಸ್ವೀಟ್ಗಳನ್ನು ಖರೀದಿಸುವ ಮುನ್ನ ಎಚ್ಚರ! ಕ್ಯಾನ್ಸರ್ ಕೂಡ ಬರಬಹುದು | Bakery Sweets