17.8 C
Bengaluru
Wednesday, January 22, 2020

ಗಣಿತಶಾಸ್ತ್ರಜ್ಞ, ತಂತ್ರಜ್ಞಾನ ನಿಪುಣ, ಇತಿಹಾಸ ಸಂಶೋಧಕ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಧಿಕಾರಿಕವಾಗಿ ತಳವೂರಿದ್ದ ಬ್ರಿಟಿಷರು ಭೌಗೋಳಿಕವಾಗಿ ಅಲ್ಲದೆ ಬೌದ್ಧಿಕವಾಗಿ- ಮಾನಸಿಕವಾಗಿಯೂ ಭಾರತೀಯರನ್ನು ದಾಸ್ಯಕ್ಕೊಳಪಡಿಸಲು ಪ್ರಯತ್ನಿಸಿದರು; ತಮ್ಮ ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಕೀಳರಿಮೆ ಮೂಡಿಸಿದರು ಮತ್ತು ಭಾಷೆ-ಜನಾಂಗಗಳ ಹೆಸರಿನಲ್ಲಿ ಭಾರತೀಯರನ್ನು ಒಡೆದರು. ಈ ಉದ್ದೇಶಕ್ಕಾಗಿಯೇ ‘ಆರ್ಯ ಆಕ್ರಮಣ’ ಎಂಬ ಕಥೆಯನ್ನೂ ಹೆಣೆದರು.

ಬ್ರಿಟಿಷರ ಈ ಕುತಂತ್ರವನ್ನು ಹಲವಾರು ಭಾರತೀಯ ವಿದ್ವಾಂಸರು ಕಾಲಕಾಲಕ್ಕೆ ಸಾಧಾರವಾಗಿ ಬಯಲಿಗೆಳೆಯುತ್ತಲೇ ಬಂದಿದ್ದಾರೆ. ಅದೇ ಜಾಡಿನಲ್ಲಿಯೇ ನಡೆದು, ವ್ಯಾಪಕ ಅಧ್ಯಯನ-ಆಳವಾದ ಸಂಶೋಧನೆಗಳ ಮೂಲಕ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ‘ಆರ್ಯ ಆಕ್ರಮಣ’ ವಾದ ಕಟ್ಟುಕಥೆ ಎಂಬುದನ್ನು ನಿರೂಪಿಸಿದವರು ಡಾ| ನವರತ್ನ ಎಸ್. ರಾಜಾರಾಂ.

ಬಾಲ್ಯ-ಶಿಕ್ಷಣ: ನವರತ್ನ ರಾಜಾರಾಂ ಜನಿಸಿದ್ದು ಮೈಸೂರಿನಲ್ಲಿ, 1943ರ ಸೆಪ್ಟೆಂಬರ್ 22ರಂದು. ತಂದೆ ನವರತ್ನ ಶ್ರೀನಿವಾಸರಾಯರು ‘ಬ್ರಿಟಿಷ್ ಇಂಡಿಯಾ’ ಸೇನೆಯಲ್ಲಿ ಸರ್ಜನ್ ಆಗಿದ್ದರು; ತಾಯಿ ನಂದಾದೇವಿ, ಭೂಗರ್ಭಶಾಸ್ತ್ರಜ್ಞ ರಾಗಿಯೂ ಬಹುಭಾಷಾವಿದ್ವಾಂಸರಾಗಿಯೂ ಪ್ರಸಿದ್ಧರಾಗಿದ್ದ ರಾಮೋಹಳ್ಳಿ ವ್ಯಾಸರಾಯರ ಮಗಳು. ರಾಜಾರಾಂ ಅವರ ಪ್ರಾಥಮಿಕ ಶಿಕ್ಷಣವೆಲ್ಲ ಮನೆಯಲ್ಲಿಯೇ ಆಯಿತು. ತಾತ ನವರತ್ನ ರಾಮರಾಯರ ಮಡಿಲಲ್ಲಿ ಬೆಳೆದ ರಾಜಾರಾಂ, ಅದಾಗಲೆ ದಕ್ಷ ಆಡಳಿತಗಾರರೆಂದೂ ಲೇಖಕರೆಂದೂ ಹೆಸರುವಾಸಿಯಾಗಿದ್ದ ತಾತನ ಪ್ರಭಾವದಲ್ಲಿ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಅವರ ಪ್ರೌಢ-ಪದವಿಪೂರ್ವ ಶಿಕ್ಷಣ ನಡೆಯಿತು. ಪದವಿ ವ್ಯಾಸಂಗಕ್ಕಾಗಿ ರಾಜಾರಾಂ ಅವರು ಆಯ್ಕೆ ಮಾಡಿಕೊಂಡಿದ್ದು, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಷಯವನ್ನು. ಬೆಂಗಳೂರಿನ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಪೂರೈಸಿದ ಅವರು, 1965ರಲ್ಲಿ ಮುಂಬಯಿಯಲ್ಲಿದ್ದ ಟಾಟಾ ಪವರ್ ಕಂಪೆನಿಯಲ್ಲಿ ವಿದ್ಯುಚ್ಛಕ್ತಿ ಪೂರೈಕೆ ಕೇಂದ್ರವೊಂದರ ನಿಯಂತ್ರಣ ಕೋಷ್ಠದಲ್ಲಿ ಕೆಲಸಕ್ಕೆ ಸೇರಿದರು; ಈ ಸಂದರ್ಭದಲ್ಲಿಯೇ ಪುಣೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿಕರಿಗಾಗಿ ವಿದ್ಯುಚ್ಛಕ್ತಿ-ಆಧಾರಿತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಶ್ರಮಿಸಿದರು.

ಉನ್ನತ ಶಿಕ್ಷಣ ಅಧ್ಯಾಪನ: ಐದು ವರ್ಷ ಟಾಟಾ ಪವರ್ ಕಂಪೆನಿಯಲ್ಲಿ ಕೆಲಸಮಾಡಿದ ರಾಜಾರಾಂ ಕೆಲಸವನ್ನು ತೊರೆದು, ಬಾಲ್ಯದಿಂದಲೂ ಆಸಕ್ತಿಯ ವಿಷಯಗಳಾಗಿದ್ದ ಗಣಿತ ಮತ್ತು ವಿಜ್ಞಾನದಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದರು. ಆರು ವರ್ಷಗಳ ಅಧ್ಯಯನ-ಸಂಶೋಧನೆಗಳ ಫಲಿತವೆಂಬಂತೆ 1976ರಲ್ಲಿ ಬ್ಲೂಮಿಂಗ್​ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿ ಪಡೆದರು. ಮುಂದೆ ನಾಲ್ಕು ವರ್ಷ ಓಹೈಯೊನಲ್ಲಿಯ ‘ಕೆಂಟ್ ಸ್ಟೇಟ್ ಯೂನಿವರ್ಸಿಟಿ’ಯಲ್ಲಿ ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳನ್ನು ಪಾಠಮಾಡಿದರು. ಅಷ್ಟರಲ್ಲಾಗಲೇ ಸಂಶೋಧನಕ್ಷೇತ್ರ ಅವರನ್ನು ಕೈಬೀಸಿ ಕರೆಯಿತು. ಮುಂದಿನ ಹನ್ನೆರಡುವರ್ಷ ಅವರು ಕೈಗಾರಿಕಾಕ್ಷೇತ್ರದ ಸಂಶೋಧಕರಾಗಿ ಕೆಲಸಮಾಡಿದರು.

ಸಂಶೋಧಕರಾಗಿ: 1980ರಲ್ಲಿ ಅಧ್ಯಾಪಕವೃತ್ತಿಯನ್ನು ತೊರೆದು, ಪ್ರತಿಷ್ಠಿತ ಕಂಪೆನಿ ಲಾಕ್​ಹೀಡ್ ಕಾರ್ಪೆರೇಷನ್ (ಇಂದಿನ ಲಾಕ್​ಹೀಡ್​ವಾರ್ಟಿನ್)ನಲ್ಲಿ ಪ್ರಮುಖ ಸಂಶೋಧಕರಾಗಿ ರಾಜಾರಾಂ ಜವಾಬ್ದಾರಿ ವಹಿಸಿಕೊಂಡರು. ಅದಾಗಲೆ NASA -ಜಗತ್ತಿನ ವಿವಿಧ ಪ್ರದೇಶಗಳ ಕೃಷಿ ಸಂಪನ್ಮೂಲಗಳ ಮೌಲ್ಯಮಾಪನ ಮಾಡುವ ಉದ್ದೇಶಕ್ಕಾಗಿ, -ಅಂತರಿಕ್ಷಕ್ಕೆ ಕಳುಹಿಸಿದ್ದ Landsat ಎಂಬ ಉಪಗ್ರಹ ಕಳುಹಿಸುವ ಚಿತ್ರಗಳನ್ನು ಪರಿಶೀಲಿಸಿ ವಿಶ್ಲೇಷಣೆಗೊಳಪಡಿಸುವುದು ರಾಜಾರಾಂ ಅವರ ಸಂಶೋಧನಾ ವಿಭಾಗದ ಪ್ರಮುಖ ಕಾರ್ಯವಾಗಿತ್ತು. ಕೆಲವೇ ದಿನಗಳಲ್ಲಿ ಅವರು ಈ ಪ್ರಕ್ರಿಯೆಯಲ್ಲಿಯ ನ್ಯೂನತೆಗಳನ್ನು ಕಂಡುಕೊಂಡರು; ಅದುವರೆಗೂ ಅನುಸರಿಸುತ್ತಿದ್ದ ವಿಧಾನಗಳು ನಿಖರವಾದ -ಸ್ಪಷ್ಟವಾದ ಮಾಹಿತಿಯನ್ನು ನೀಡಲಾರವು, ಅವುಗಳಿಂದ ಖಚಿತ ನಿರ್ಣಯಕ್ಕೆ ಬರಲು ಸಾಧ್ಯವಾಗಲಾರದು ಎಂದು ನಿರ್ಣಯಿಸಿದರು. NASA ಸಂಸ್ಥೆ ‘Artificial intelligence’ ಅನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವನ್ನು ಸಂಬಂಧಪಟ್ಟವರಿಗೆ ಮನದಟ್ಟು ಮಾಡಿಸಿದರು; ‘AI system’ ಕೆಲವು ವಿಶೇಷ ವೇದಿಕೆಗಳಲ್ಲಷ್ಟೇ ಅಲ್ಲದೆ ವೈಯಕ್ತಿಕ ಕಂಪ್ಯೂಟರ್​ಗಳಲ್ಲೂ ಲಭ್ಯವಾಗಬೇಕು’ ಎಂದು ಬಲವಾಗಿ ಪ್ರತಿಪಾದಿಸಿದರು.

1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಅವರು ಸ್ವತಂತ್ರ ಸಂಶೋಧನ ಸಂಸ್ಥೆಯನ್ನು ಪ್ರಾರಂಭಿಸಿದರು; ಜತೆಯಲ್ಲೇ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಅಧ್ಯಾಪನಕ್ಷೇತ್ರಕ್ಕೆ ಮರಳಿದರು. ಈ ಸಂದರ್ಭದಲ್ಲಿ, ಈ ಮೊದಲು NASA ಮತ್ತು ಲಾಕ್​ಹೀಡ್ ಕಾರ್ಪೆರೇಷನ್​ಗಳಲ್ಲಿ ಇವರ ಸಹೋದ್ಯೋಗಿಗಳಾಗಿದ್ದವರು, ‘Artificial intelligence’ ವಿಷಯವಾಗಿ ಸಲಹೆಗಳನ್ನು ಪಡೆಯುವುದಕ್ಕಾಗಿ ಸಂರ್ಪಸ ತೊಡಗಿದರು. ಇದರ ಪರಿಣಾಮವಾಗಿ ರಾಜಾರಾಂ ನಾಸಾ ಮತ್ತು ರಕ್ಷಣಾ ಇಲಾಖೆ ಸಹಯೋಗದಲ್ಲಿ ರೊಬೊಟಿಕ್ಸ್ ಮತ್ತು ROBEX-85 ಕುರಿತು ಕಾರ್ಯಾಗಾರ, ವಿಚಾರ ಸಂಕಿರಣಗಳನ್ನೂ ನಡೆಸಬೇಕಾಯಿತು. ಈ ಕಾರ್ಯಾಗಾರಗಳು ಮತ್ತು ವಿಚಾರಸಂಕಿರಣಗಳಲ್ಲಿ ಮಂಡನೆಯಾದ ವಿಷಯಗಳನ್ನೇ ಸಂಪಾದಿಸಿ ರಾಜಾರಾಂ ಅವರು ಪ್ರಕಟಿಸಿದ ROBEX-85 ಮತ್ತು ROBEX-87ಗಳು ಆಯಾ ವಿಷಯಗಳಲ್ಲಿ ಇಂದಿಗೂ ಅಧಿಕೃತ ಆಕರಸಾಹಿತ್ಯವಾಗಿ ಪ್ರಚಲಿತದಲ್ಲಿವೆ.

ಬದಲಾದ ದಿಕ್ಕು: ನಲವತ್ತೆಂಟನೆಯ ವಯಸ್ಸಿನಲ್ಲಿ (1992ರಲ್ಲಿ) ರಾಜಾರಾಂ ಭಾರತಕ್ಕೆ ಮರಳಿದರು. ಅವರ ಮನಸ್ಸು ಇತಿಹಾಸದ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ತವಕಿಸುತ್ತಿತ್ತು. ವೈಜ್ಞಾನಿಕ ದೃಷ್ಟಿಯಿಂದಲೇ ಪ್ರಾಚೀನ ಭಾರತವನ್ನು ಅಭ್ಯಸಿಸುವ, ಪ್ರಾಚೀನ ಭಾರತದ ಇತಿಹಾಸವನ್ನು ವಿಶ್ಲೇಷಿಸುವ ತುಡಿತ ಅವರಲ್ಲಿ ಮಡುಗಟ್ಟಿತ್ತು. ರಾಜಾರಾಂ ಈ ನಿಟ್ಟಿನಲ್ಲಿ ಭಾರತಕ್ಕೆ ಮರಳಿದ ಮೇಲೆ ಎರಡು ದಶಕಗಳ ಕಾಲ ನಿರಂತರ ಅಧ್ಯಯನದಲ್ಲಿ ತೊಡಗಿಕೊಂಡರು; ಅಧ್ಯಯನ ಮತ್ತು ಶೋಧ ಗಳನ್ನೆಲ್ಲ ಕ್ರೋಡೀಕರಿಸಿ ಹಲವಾರು ಪುಸ್ತಕಗಳನ್ನೂ ಪ್ರಬಂಧಗಳನ್ನೂ ಪ್ರಕಟಿಸಿದರು.

‘ಆರ್ಯ ಆಕ್ರಮಣ’ ಕಥೆಯ ನಿರಾಕರಣೆ: 1995ರಲ್ಲಿ ನವರತ್ನ ರಾಜಾರಾಂ ಡೇವಿಡ್ ಫ್ರಾಲಿಯವರೊಂದಿಗೆ ಸೇರಿ “Vedic Aryans and the origins of civilization’ಎಂಬ ಮಹತ್ತ್ವದ ಸಂಶೋಧನಕೃತಿಯನ್ನು ಪ್ರಕಟಿಸಿದರು. ಏಕಕಾಲದಲ್ಲಿ ಅಮೆರಿಕದಲ್ಲೂ ಭಾರತದಲ್ಲೂ ಪ್ರಕಾಶಗೊಂಡ ಈ ಪುಸ್ತಕದ ಮೊದಲ ಅಧ್ಯಾಯವೇ ವಸಾಹತುಶಾಹಿ ಬ್ರಿಟಿಷರು ಮತ್ತು ಅವರ ಅನುವರ್ತಿಗಳಾದ ದೇಶೀಯ-ವಿದೇಶೀಯ ಇತಿಹಾಸಕಾರರು ಬಹಳ ಶ್ರಮವಹಿಸಿ, ನಿರಂತರವಾಗಿ ಹಬ್ಬಿಸಿಕೊಂಡು ಬಂದಿದ್ದ ‘ಆರ್ಯರ ಆಕ್ರಮಣ’ ಎಂಬ ಹುಸಿ-ಸಿದ್ಧಾಂತವನ್ನು ಸಾಧಾರವಾಗಿ ನಿರಾಕರಿಸಿತು.

ಸಿಂಧೂ ಲಿಪಿ ಭೇದನ: ನವರತ್ನ ರಾಜಾರಾಂ ಅವರ ಇನ್ನೊಂದು ಪ್ರಮುಖ ಸಂಶೋಧನ ಕೃತಿ”The Deciphered Indus Script: Methodology, readings, interpret- tation’. ಪ್ರಸಿದ್ಧ ವೈದಿಕ ವಿದ್ವಾಂಸರೂ ಪ್ರಾಚೀನ ಲಿಪಿಶಾಸ್ತ್ರಜ್ಞರೂ ಆಗಿದ್ದ ನಟವರ್ ಝಾ(1938-2006) ರವರೊಂದಿಗೆ ಸೇರಿ ಈ ಸಂಶೋಧನೆಯನ್ನೂ ಕೃತಿರಚನೆಯನ್ನೂ ನಡೆಸಿದ ರಾಜಾರಾಂ, ಹಲವು ಸಾಕ್ಷ್ಯಗಳ ಮೂಲಕ, ಸಿಂಧೂ ಲಿಪಿಯಲ್ಲಿಯ ಹಲವು ಅಕ್ಷರಗಳನ್ನೂ ಸಂಕೇತಗಳನ್ನೂ ಅರ್ಥೈಸುವ ಮೂಲಕ, ಹರಪ್ಪನ್ನರು ವೈದಿಕ ಧಾರೆಯವರು ಎಂಬುದನ್ನು ಪ್ರಬಲವಾಗಿ ಮಂಡಿಸಿದರು (2000). ಭಾಷಾಶಾಸ್ತ್ರದ, ಲಿಪಿಶಾಸ್ತ್ರದ ಆಧಾರದಲ್ಲಿ ಹರಪ್ಪನ್ನರದು ವೈದಿಕಸಂಸ್ಕೃತಿಯೇ ಆಗಿತ್ತು ಎಂಬುದನ್ನು ನಿರ್ವಿವಾದವಾಗಿ ಸಿದ್ಧಪಡಿಸಿದರು. ಭಾರತದಲ್ಲಿ ವಾಯ್ಸ್​ ಆಫ್ ಇಂಡಿಯಾ ರಾಜಾರಾಂ ಅವರ ಎರಡು ಪ್ರಮುಖ ಕೃತಿಗಳನ್ನು ಪ್ರಕಟಿಸಿತು:‘The Politics of History’ ಮತ್ತು ‘Profiles in Deception’. ಅಹಮದಾಬಾದಿನ ಸ್ವಾಮಿನಾರಾಯಣ ಅಕ್ಷರಧಾಮ ಪ್ರಕಟಿಸಿರುವ ಕೃತಿ ‘Hidden Horizons: Unearthing 10,000 Years of Indian Culture’   ಕೂಡ ಮಹತ್ತ್ವದ್ದಾಗಿದ್ದು, ಇದನ್ನು ನವರತ್ನ ರಾಜಾರಾಂ ಡೇವಿಡ್ ಫ್ರಾಲಿಯವರೊಂದಿಗೆ ಸೇರಿ ರಚಿಸಿದ್ದಾರೆ. ಸರಸ್ವತಿ ನದಿ ಕುರಿತು, ಅದರ ಮಡಿಲಲ್ಲಿ ಅರಳಿದ ನಾಗರಿಕತೆ ಕುರಿತು ರಾಜಾರಾಂ ರಚಿಸಿರುವ ಕೃತಿ “Saraswati River and the Vedic Civilization’ ಗುಪ್ತಗಾಮಿನಿಯ ಮೂಲ, ಹರಿವು, ಪ್ರಭಾವ-ಪ್ರಯೋಜನಗಳನ್ನು ವಿವರವಾಗಿ ಪರಿಚಯಿಸಿದೆ.

ಮರಳಿ ವಿಜ್ಞಾನದತ್ತ: ಸಿಂಧೂಲಿಪಿ ಭೇದನಕಾರ್ಯವನ್ನು ಪೂರ್ಣಗೊಳಿಸಿ, ಕೃತಿಯನ್ನೂ ಪ್ರಕಟಿಸಿದ ತರುವಾಯ ರಾಜಾರಾಂ, ವಂಶವಾಹಿ ಆಧಾರಿತವಾಗಿ ವೈದಿಕ ನಾಗರಿಕತೆ ಮೂಲವನ್ನು ದೃಢೀಕರಿಸುವ ಪ್ರಯತ್ನಕ್ಕೆ ಕೈಹಾಕಿದರು. ಈ ಸಂಶೋಧನೆಯ ಫಲಿತವನ್ನು ಹಲವು ಪ್ರಬಂಧಗಳು-ಲೇಖನಗಳ ಮೂಲಕ ವಿವರಿಸಿದ ಅವರು, ಅಂತಿಮವಾಗಿ, ಭಾರತೀಯರು ಹತ್ತಾರು ಸಾವಿರವರ್ಷಗಳಿಂದ ಇಲ್ಲಿಯೇ ನೆಲಸಿರುವವರೆಂದೂ ಬೇರೆಲ್ಲಿಂದಲೋ ಬಂದವರಲ್ಲವೆಂದೂ ವಂಶವಾಹಿಗಳ ಸಾಕ್ಷ್ಯದೊಂದಿಗೆ ಸ್ಥಿರಪಡಿಸಿದರು.

ಹಿರಿಯ ವಿದ್ವಾಂಸ ನವರತ್ನ ರಾಜಾರಾಮ್ ಇನ್ನಿಲ್ಲ

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಹಿರಿಯ ವಿದ್ವಾಂಸರೂ ಆಗಿದ್ದ 76 ವರ್ಷದ ಡಾ.ನವರತ್ನ ಶ್ರೀನಿವಾಸ ರಾಜಾರಾಮ್ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್​ಡಿ ಪದವಿ ಪಡೆದಿದ್ದ ರಾಜಾರಾಮ್ ಎರಡು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತೀಯ ಇತಿಹಾಸ, ಸಂಸ್ಕೃತಿ, ರಾಷ್ಟ್ರಚಿಂತನೆಗಳ ಕುರಿತು ಒಲವು ಹೊಂದಿದ್ದರು. ಈ ಸಂಬಂಧ ಇವರು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಉತ್ತರ ಕರ್ನಾಟಕ ದೇಶಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಇವರ ಕುಟುಂಬಿಕರು ಒಂದೇ ತಲೆಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದರು. ಹಾಗಾಗಿ ನವರತ್ನ ಎಂಬ ಹೆಸರು ಇವರ ಕುಟುಂಬಕ್ಕೆ ಬಂದಿದೆ.

| ವಿಘ್ನೕಶ್ವರ ಭಟ್ಟ

(ಲೇಖಕರು ಪತ್ರಕರ್ತರು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...