More

    ಇನ್ಮುಂದೆ ರಜನಿಕಾಂತ್​ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ … ಅನುಕರಣೆ ಮಾಡುವಂತಿಲ್ಲ

    ಚೆನ್ನೈ: ರಜನಿಕಾಂತ್​ ತಮ್ಮ ವಿಶಿಷ್ಟ ಮ್ಯಾನರಸಿಂ, ಮಾತಿನ ಶೈಲಿಯಿಂದ ಹೆಸರಾದವರು. ಅವರನ್ನು ಇದುವರೆಗೂ ಅನುಕರಣೆ ಮಾಡಿದವರೆಷ್ಟೋ, ಅವರ ತರಹವೇ ಸ್ಟೈಲ್​ ಮಾಡುವುದಕ್ಕೆ ಹೋದವರೆಷ್ಟೋ ಗೊತ್ತಿಲ್ಲ. ಇನ್ನು, ರಜನಿಕಾಂತ್​ ಕುರಿತಾಗಿ ಜೋಕ್​ಗಳಿಗೆ ಬರವೇ ಇಲ್ಲ. ಆದರೆ, ಇನ್ನು ಮುಂದೆ ರಜನಿಕಾಂತ್​ ಅವರ ಹೆಸರು, ಫೋಟೋ, ಧ್ವನಿ ಬಳಸುವಂತಿಲ್ಲ.

    ಇದನ್ನೂ ಓದಿ: ತಾರಕ್​ ರಾಮ್​ಗೆ ತಾತನ, ಅಭಿಮಾನಿಗಳ ಆಶೀರ್ವಾದವಿದೆ ಎಂದ ಜ್ಯೂನಿಯರ್​ ಎನ್​.ಟಿ.ಆರ್​

    ಇದನ್ನು ಯಾರೋ ಹೇಳಿದ್ದಲ್ಲ. ಈ ಕುರಿತಾಗಿ ಸ್ವತಃ ರಜನಿಕಾಂತ್​ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಇತ್ತೀಚೆಗೆ ಕೆಲವು ಬ್ರಾಂಡ್​ಗಳು ರಜನಿಕಾಂತ್​ ಅವರ ಅನುಮತಿ ಇಲ್ಲದೆ, ಅವರು ಹೆಸರು, ಧ್ವನಿ ಬಳಸಿಕೊಂಡು ಪ್ರಚಾರ ಮಾಡುತ್ತಿದ್ದವು. ತಮ್ಮ ಅನುಮತಿ ಇಲ್ಲದೆ ತಮ್ಮ ಹೆಸರು, ಧ್ವನಿ ಮತ್ತು ಫೋಟೋವನ್ನು ಬಳಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಈ ಕುರಿತು ರಜನಿಕಾಂತ್​ ಅವರ ಲಾಯರ್​ ಸುಬ್ಬಯ್ಯ ಎಳಂಬಾರತಿ ಅವರು ಒಂದು ಪ್ರಕಟಣೆ ಹೊರಡಿಸಿದ್ದಾರೆ. ‘ಯಾವುದೇ ಬ್ರಾಂಡ್​ ಆಗಲೀ, ರಜನಿಕಾಂತ್​ ಅವರ ಅನುಮತಿ ಇಲ್ಲದೆ ಅವರ ಹೆಸರು, ಫೋಟೋ, ಧ್ವನಿ, ಮ್ಯಾನರಸಿಂ ಬಳಸಿಕೊಂಡು ಪ್ರಚಾರ ಮಾಡಬಾರದು. ತಮ್ಮ ಹೆಸರು, ವ್ಯಕ್ತಿತ್ವ, ಧ್ವನಿಯನ್ನು ಬಳಸಿಕೊಳ್ಳುವುದಕ್ಕೆ ರಜನಿಕಾಂತ್​ ಅವರಿಗೆ ಮಾತ್ರ ಹಕ್ಕಿದೆ, ಬೇರೆ ಯಾರಿಗೂ ಇಲ್ಲ’ ಎಂದು ಹೇಳಿದ್ದಾರೆ.
    ಬರೀ ಅಷ್ಟೇ ಅಲ್ಲ, ಇನ್ನು ಮುಂದೆ ಅವರನ್ನು ಮಿಮಿಕ್ರಿ ಮಾಡುವಂತೆಯೂ ಇಲ್ಲ. ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾದರೆ, ಆಗ ಅವರಿಗೆ ಕಾನೂನು ಕ್ರಮ ಕೈಗೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: ಡಾ. ವಿಷ್ಣುವರ್ಧನ್ ಅವ್ರು ‘ಕರ್ನಾಟಕ ರತ್ನ’ ಅಲ್ಲವೇ? ಸಿಎಂಗೆ ಅಭಿಮಾನಿಗಳ ಪ್ರಶ್ನೆ …

    ಇದಕ್ಕೂ ಮುನ್ನ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಸಹ ತಮ್ಮ ಹೆಸರು, ಫೋಟೋ, ಧ್ವನಿಯನ್ನು ಬಳಸಿಕೊಳ್ಳಬಾರದು. ಅಂಥವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ಅವರು ಹೇಳಿದ್ದರು.

    ಡಾ: ವಿಷ್ಣು ಸ್ಮಾರಕ ಉದ್ಘಾಟನೆ; ಇದು ಹೋರಾಟವಲ್ಲ, ತಪಸ್ಸು ಎಂದ ಡಾ. ಭಾರತಿ ವಿಷ್ಣುವರ್ಧನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts