ಕಬಾಬ್​​ ವ್ಯಾಪಾರಿ ಕೊಂದಿದ್ದವನಿಗೆ ರಾಜಗೋಪಾಲನಗರ ಪೊಲೀಸರಿಂದ ಗುಂಡೇಟು, ಬಂಧನ

ಬೆಂಗಳೂರು: ಕಬಾಬ್​​ ವ್ಯಾಪಾರಿಯನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿಗೆ ಗುಂಡೇಟು ಕೊಟ್ಟಿರುವ ರಾಜಗೋಪಾಲ ನಗರ ಪೊಲೀಸರು ಬಂಧಿಸಿದ್ದಾರೆ.

ಕಿಶೋರ್​ ಎಂಬುವವರು ಬಂಧಿತ ಆರೋಪಿ . ಮೇ 12 ರಂದು ಹೆಗ್ಗನಹಳ್ಳಿಯ ಕಬಾಬ್​​ ವ್ಯಾಪಾರಿ ಉಮೇಶ್​​ ಎಂಬುವವರನ್ನು ಈತ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯಾದ ಉಮೇಶ್​​​​​​​ ಪತ್ನಿ ರೂಪ ಜತೆ ಕಿಶೋರ್​​ ಆಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿರುವ ಆಕೆಯನ್ನು ನಿನ್ನೆ ರಾತ್ರಿ ಭೇಟಿಯಾಗಲು ಕಿಶೋರ್​ ಬಂದಿದ್ದ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆತನನ್ನು ಹಿಡಿಯಲು ಹೋದಾಗ ಪೇದೆ ಶಿವಸ್ವಾಮಿ ಮೇಲೆ ಹಲ್ಲೆ ನಡೆಸಿದ ಆತ ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗೆ ಇನ್​ಸ್ಪೆಕ್ಟರ್​ ದಿನೇಶ್​​ ಪಾಟೀಲ್​​​​​​​​ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಪೇದೆ ಹಾಗೂ ಆರೋಪಿ ಕಿಶೋರ್​​​​​​ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *