More

    ಕೆಲವರು ಸತ್ತರೆ ಹಾನಿ ತುಂಬುವುದು ಕಷ್ಟ!: ಡಾ.ಕೆ.ಎಸ್.ನಾರಾಯಣಾಚಾರ್ಯರ ಅಂಕಣ

    ಕೆಲವರು ಸತ್ತರೆ ಹಾನಿ ತುಂಬುವುದು ಕಷ್ಟ!: ಡಾ.ಕೆ.ಎಸ್.ನಾರಾಯಣಾಚಾರ್ಯರ ಅಂಕಣಭಾಸ್ಕರಾಚಾರ್ಯ, ಸಮುದ್ರಗುಪ್ತ, ವರಾಹಮಿಹಿರ, ಪಾಣಿನಿ, ಪತಂಜಲಿ, ಶಂಕರ ರಾಮಾನುಜ, ರಾಮಾನಂದ, ತುಳಸೀ, ಮೀರಾ ಇಂಥವರಲ್ಲವೇ ಹಾಗೆ ಪ್ರಾತಃಸ್ಮರಣೀಯರು! ಭಾರತದ ಚರಿತ್ರೆಯನ್ನೇ ದುರಂತ ಮಾಡಿದವರನ್ನು ಏಕೆ ಕುತಂತ್ರದಿಂದ, ರಾಜಕೀಯ ಒತ್ತಡದಿಂದ ಸ್ಮರಿಸಬೇಕು? ಭಾರತೀಯರೇ! ನಮಗೆ ಬುದ್ಧಿ ಬೇಡವೆ?

    ‘ತುಂಬಲಾರದ ಹಾನಿ’ ಎಂಬುದು ರ್ಚವಿತರ್ಚವಿಣವಾಗಿ ‘ಕ್ಲೀಷೆ’ ಎನಿಸಿದೆ. ಏನು ಇದರರ್ಥ? ‘ಹಾಗೆ ಸತ್ತವರ ಜಾಗ ತುಂಬುವುದು ಕಷ್ಟ’ ಎಂಬುದು ಒಂದರ್ಥ. ಅಂಥವರ ಶ್ರೇಷ್ಠ ಸಾಲಿನಲ್ಲಿ ಮಹಾನ್ ಸಾಧಕರಿರುತ್ತಾರೆ. ಕವಿ ರವೀಂದ್ರ, ವಿವೇಕಾನಂದ, ಅರವಿಂದ, ಸುಭಾಷ್, ಮಹಾನ್ ಕಲಾವಿದರಾದ ಸುಬ್ಬುಲಕ್ಷ್ಮಿ, ಭೀಮಸೇನ ಜೋಷಿ, ಬಿಸ್ಮಿಲ್ಲಾ ಖಾನ್, ಗಂಗೂಬಾಯಿ ಹಾನಗಲ್, ವಿಜ್ಞಾನಿ ಸಿ.ವಿ.ರಾಮನ್, ರಾಜಾ ರಾಮಣ್ಣ, ಅಬ್ದುಲ್ ಕಲಾಂ, ಹಾಗೇ ಭಾರತಕೀರ್ತಿ ಮೆರೆದವರು. ಭಾರತ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್, ದೌರ್ಜನ್ಯಕ್ಕೆ ತುತ್ತಾದ ಹುತಾತ್ಮರು, ಸಿಖ್ ಗುರುಗಳು, ಹಿಂದಿನ ಶಿವಾಜಿ, ಕೃಷ್ಣದೇವರಾಯ, ನಾಲ್ವಡಿ ಕೃಷ್ಣರಾಜ ಒಡೆಯರು, ವಿಶ್ವೇಶ್ವರಯ್ಯ ಇಂಥ ಸಾವಿರಾರು ಆತ್ಮದೀಪಗಳನ್ನು ಪ್ರಾತಃಸ್ಮರಣೀಯರು ಎನ್ನುತ್ತೇವೆ. ‘ತುಂಬಲಾರದ ಹಾನಿ’ ಎಂದರೆ ಅವರ ಜಾಗದಲ್ಲಿ ಬೇರಾರನ್ನೂ ಕಲ್ಪಿಸಲು ಸಾಧ್ಯವಿಲ್ಲ ಎಂಬುದು ನಾಣ್ಣುಡಿಯ ಅರ್ಥ. ಇದನ್ನು ಸಿಕ್ಕಸಿಕ್ಕವರಿಗೆಲ್ಲ ಅನ್ವಯಿಸಿದರೆ, ಅದು ಬೇರೆಯೇ ವ್ಯಂಗ್ಯಾರ್ಥ ಕೊಡುವುದನ್ನು ಬಹಳ ಜನರು ಅರಿಯರು! ‘ಅವರು ಹಾನಿ ಮಾಡಿ ಹೋದುದನ್ನು ಯಾರೂ ತುಂಬಲಾರರು’ ಎಂದಾದರೆ ಇಂಥವರು ರಾಷ್ಟ್ರದ್ರೋಹಿಗಳೂ ಇರಬಹುದು, ದುರಾಡಳಿತಗಾರರೂ, ಕಂಟಕರೂ, ಸ್ವಾರ್ಥಿಗಳೂ, ಭ್ರಷ್ಟಾಚಾರಿ ಅಗ್ರಗಣ್ಯರೂ, ದೇಶನಾಶಕ ಕೂಟ ರಚಿಸಿದವರೂ, ವಿದೇಶಿಗಳ ಕೈಗೊಂಬೆಯಾದವರೂ, ಕೊಲೆಗಡುಕರಾಗಿ ಅಧಿಕಾರ ಹಿಡಿದವರೂ, ಹೇಗೂ ತಾವೇ ನಿರ್ವಿುಸಿದ ಜಾಲಕೂಟಗಳಿಗೆ ಬಲಿಯಾಗಿ ದುರಂತದಲ್ಲಿ ಸತ್ತವರೂ ಇದ್ದಾರೆ. ಈ ಶ್ರೇಣಿಯೇ ಬೇರೆಯಾಗುತ್ತಿದೆ. ಆಗಿದೆ. ವಿಷಾದದಿಂದ ಹೇಳಬೇಕಾದ್ದು-ಕಾಂಗ್ರೆಸ್​ನ ‘ಮಹಾನ್’ ರಾಷ್ಟ್ರಮಟ್ಟದ ನಾಯಕರು ಈ ವರ್ಗದವರು! ಭಯವಾಗುತ್ತದೆಯೇ? ಇತಿಹಾಸ ನೋಡಿ ಅರಿಯಿರಿ. ಕೃತಕ ಪ್ರಯತ್ನಗಳಿಂದ ಇಂಥವರನ್ನು ನೀವು ಪುಣ್ಯಸ್ಮರಣೀಯರಾಗಿಸಲಾರಿರಿ! ಟಿಪು್ಪ, ಹೈದರ್, ಹಿಂದಣ ಮೊಗಲರು, ದಾಳಿಕೋರರಾಗಿ ಇಲ್ಲಿ ಅಧಿಕಾರ ಹಿಡಿದವರು, ಅಫಜಲ್ ಖಾನ್-ಇವನ ಜಯಂತಿ ಮಾಡಲು ಹೋಗಿ, (ದಿ) ಬಾಳಾ ಠಾಕ್ರೆಯವರಿಂದ ನಿಗ್ರಹೀತರಾದರು- ಬ್ರಿಟಿಷರು, ವಿಕ್ಟೋರಿಯಾ ರಾಣಿ, ಇಂಥವರ ಸ್ಮರಣೆ ಮಾಡುತ್ತೀರಾ? ಇವರು ಮಾಡಿದ ‘ಹಾನಿ’ ಸಾಮಾನ್ಯವೇ? ಭಾಸ್ಕರಾಚಾರ್ಯ, ಸಮುದ್ರಗುಪ್ತ, ವರಾಹಮಿಹಿರ, ಪಾಣಿನಿ, ಪತಂಜಲಿ, ಶಂಕರ ರಾಮಾನುಜ, ರಾಮಾನಂದ, ತುಳಸೀ, ಮೀರಾ ಇಂಥವರಲ್ಲವೇ ಹಾಗೆ ಪ್ರಾತಃಸ್ಮರಣೀಯರು! ಭಾರತದ ಚರಿತ್ರೆಯನ್ನೇ ದುರಂತ ಮಾಡಿದವರನ್ನು ಏಕೆ ಕುತಂತ್ರದಿಂದ, ರಾಜಕೀಯ ಒತ್ತಡದಿಂದ ಸ್ಮರಿಸಬೇಕು? ಭಾರತೀಯರೇ! ನಮಗೆ ಬುದ್ಧಿ ಬೇಡವೆ?

    ಸಮೀಪ ಕಾಲದ ಒಬ್ಬ ವ್ಯಕ್ತಿಯ ಚರಿತ್ರೆ ಹೇಳುತ್ತೇನೆ. ಈತ ಗುಜರಾತೀ ‘ಪಟೇಲ್’ ಸಮುದಾಯದ ಮತಾಂತರಿತರು. ಭ್ರಷ್ಟಾಚಾರದ ಆರೋಪ ಹೊತ್ತವರು. ಮೊನ್ನೆ ತೀರಿಕೊಂಡರು. ಇವರು ಕಾಂಗ್ರೆಸ್ಸಿನ ‘ಬಲಗೈ’! ‘ಎಡಗೈಗಳು’ ಇನ್ನೂ ನೂರಾರು ಇವೆ. ಇವರು ಸೋನಿಯಾ ಭಂಟ. ಅವರನ್ನೂ ಆಟವಾಡಿಸಬಲ್ಲಂಥವರು. ಭಾರತದ ಬಹುತೇಕ ಮದ್ರಸಾಗಳು ಇವರ ವಶದಲ್ಲಿ. ‘ದೇವಬಂದ್’ ಎಂಬ ಲಖನೌ ಮುಸ್ಲಿಂ ಸಂಸ್ಥೆಗೆ ಇವರ ಕುಟುಂಬದ ಅನೇಕರು ಕುಲಪತಿಗಳು. ಇವರ ಮಲಸೋದರರೂ ಹೀಗೇ. ಫಾರುಕ್ ಅಬ್ದುಲ್ಲಾ ಇವರ ರಕ್ತಸಂಬಂಧಿ. ಕೇರಳದ ವಿಧ್ವಂಸಕ ಇಸ್ಲಾಮಿ ಸೇನಾನಾಯಕರು ಇವರ ನಂಟು; ಅರಬ್ಬಿ ಹಣ ಇಲ್ಲಿ ಹರಿದು ಬರಲು ಇವರು ವ್ಯವಸ್ಥಾಪಕ. ಭಾರತದ ಅನೇಕ ಮುಖ್ಯ ವಾರ್ತಾವಾಹಿನಿಗಳಲ್ಲಿ ‘ಪಟೇಲ್’ ಏಜೆಂಟರು ಇರುತ್ತ ರಾಷ್ಟ್ರದ್ರೋಹೀ ವಿಚಾರಗಳನ್ನು, ಚರ್ಚಾಕೂಟಗಳನ್ನು, ಅಭಿಪ್ರಾಯ ಮೂಡಿಸುವ opinion ಸೃಷ್ಟಿಸುವ- ಮಹಾಭೂತಗಳಾಗಿ ಇಂದಿಗೂ ಇದ್ದಾರೆ. ‘ತುಂಬಲಾರದ ಹಾನಿ’ ಎಂದರೆ ಇದೇ ಅಲ್ಲವೇ? ಬೆಚ್ಚದಿರಿ! ಇವರ ಬತ್ತಳಿಕೆಯಲ್ಲಿ, ಕಾಪೋರೇಟ್ ವಲಯದ ಹಲವರು, ಇನ್ನಿತರ ಎನ್​ಜಿಒಗಳು ಇದ್ದವು. ದಾವೂದ್ ಇಬ್ರಾಹಿಂನನ್ನು RAWದ ಅರೆಸ್ಟ್ ವಾರೆಂಟುಗಳಿಂದ ಹಲವು ಸಲ ಪಾರು ಮಾಡಿದ ಅಪಕೀರ್ತಿ ಈ ಪಟೇಲ್ ಸಾಹೇಬರದೇ! ಸಂಝೋತಾ ರೈಲು ಸ್ಪೋಟವಾಗಲೀ, ತಾಜ್ ವಿಧ್ವಂಸಕ ಪ್ರಕರಣವಾಗಲೀ, ಎಲ್ಲ ದ್ರೋಹಿಗಳನ್ನು ಪಾರಾಗಿಸುವ ಜಾಲವನ್ನು ಅಂದಿನ ಕಾಂಗ್ರೆಸ್ ಗೃಹಮಂತ್ರಿ ಕಚೇರಿಯವರೆಗೆ ಹೊಂದಿದ್ದ ಪಟೇಲ್ ಸಾಮಾನ್ಯರೇ? 2004-2014=ಹತ್ತು ವರ್ಷ ಇವರು ತಮಗೆ, ಕಾಂಗ್ರೆಸ್​ಗೆ, ಸೋನಿಯಾಗೆ ಅನುಕೂಲಕರ ಗೊಂಬೆಗಳನ್ನೇ ನೇಮಿಸಿದ್ದು ‘ತುಂಬಲಾರದ ಹಾನಿ’ ಅಲ್ಲವೇ? ಕಪಿಲ್ ಸಿಬಲ್ ಯಾರು? ಕೇಂದ್ರ ಕಚೇರಿ, ಸೆಕ್ರೆಟೇರಿಯಟ್​ನಲ್ಲೂ ಇವರ ಚೇಲಾಗಳೇ! ಆಗಿನ ಗುಜರಾತ್ ಗೃಹಮಂತ್ರಿ, ಅಮಿತ್ ಷಾರನ್ನು 4 ತಿಂಗಳು ಜೈಲಿಗೆ ಅಟ್ಟಿದವನೂ ಈ ಭೂಪನೇ! ಗುಜರಾತಿನ ಗುಪ್ತಚರದಳ ಅಂದು ಪೂರ್ತಾ ಇವರ ವಶದಲ್ಲೇ ಇತ್ತು ಎಂದರೆ ನಂಬುತ್ತೀರಾ? ಅಗಸ್ತಾ ವೆಸ್ಟ್​ಲ್ಯಾಂಡ್ ಹೆಸರಿನ ಹೆಲಿಕಾಪ್ಟರ್ ಖರೀದಿಯ ಕುಖ್ಯಾತ ಪ್ರಕರಣದಲ್ಲಿ ಕಾಂಗ್ರೆಸ್​ಗೆ ಕೋಟಿ ಕೋಟಿ ಹಣ ಮಾಡಿಕೊಟ್ಟ ಪ್ರಸಂಗ ‘ತುಂಬಲಾರದ ಹಾನಿ’ಯಯ್ಯ! ಇದು ‘ದಲ್ಲಾಳಿ’ ಕೆಲಸ! ಇವರು ಸೋನಿಯಾಗೆ ರಾಹುಲ್​ಗಿಂತ ಹೆಚ್ಚು ಪ್ರಿಯ ಆದದ್ದು ಹೀಗೆ.

    ಇನ್ನು ಇವರ ಮೊನ್ನೆ ಮೊನ್ನೆಯ ರಾಜ್ಯಸಭಾ ಚುನಾವಣಾ ಪ್ರಕರಣಕ್ಕೆ ಬನ್ನಿ. ಚಳ್ಳೆಹಣ್ಣು ತಿನ್ನಿಸುವ, ತಿನ್ನುವ ಕಣಿಕನೀತಿ, ಶುಕ್ರನೀತಿ, ಕುವಿದ್ಯೆಗೆ ಪಟೇಲ್ ಇನ್ನೊಂದು ಹೆಸರು. ಹೇಗೆ? ಗುಜರಾತಿನ ಆಗಿನ 44 ಶಾಸಕರನ್ನು ಕೋಟಿ ಕೋಟಿ ಹಣಕ್ಕೆ ಖರೀದಿ ಮಾಡಿ, ರೆಸಾರ್ಟ್​ಗಳಿಗೆ ರವಾನಿಸಿದ ಆರೋಪವಿದೆ. ಕಾನೂನಾಗಲಿ, ಮಾಧ್ಯಮಗಳಾಗಲಿ, ಈ ಹಣ ಹೇಗೆ ಎಲ್ಲಿಂದ ಬಂತು? ಎಂದು ವಿಚಾರಿಸುವ ಗೋಜಿಗೇ ಹೋಗಲಿಲ್ಲ. ಗೋಜಲು ಸೋನಿಯಾವರೆಗೆ ಇತ್ತಲ್ಲ? ಅಲ್ಲಿ ನಮ್ಮ ಬಂಡೆಯ ನಂಟೂ ಅಬ್ದುಲ್ಲಾ ಅಯ್ಯರ ನಂಟೂ ಇತ್ತಲ್ಲ? ಅಲ್ಲಿಂದ ಬಸ್ಸುಗಳು ಬೆಂಗಳೂರಿಗೆ ಬಂದದ್ದು ಸುಳ್ಳೆ? ಅವರಿಗೆ ಗೆಲ್ಲಲು 45 ವೋಟು ಬೇಕಿದ್ದು, ಕೈಲಿದ್ದುದು 44. ಇನ್ನೊಂದಕ್ಕೆ ಏನು ಮಾಡಿದರು? ಇಬ್ಬರು ಶಾಸಕರನ್ನು ನಿಷ್ಕ್ರಿಯ ಮಾಡಿಸಿದರು. ಅನರ್ಹರಾದವರು ‘ಒದಗಿದರು’. ತಿಳಿಯಿತೇ?’ ‘ಇಳಿ ಎಂದ್ರೆ ಇಳಿ, ಹತ್ತು ಎಂದರೆ ಹತ್ತು’ ಎಂಬ ಆಟ. ಈ ಗಾರುಡಿಗ ಲೆಕ್ಕಜಾಲದಲ್ಲಿ ಶಕುನಿಯನ್ನು ಮೀರಿಸಿ, ಕೇಂದ್ರವನ್ನೇ ಮಂಕು ಹಿಡಿಸಿ, ರಾಜ್ಯಸಭೆಗೆ ಹತ್ತಿದರು. ಅದು ಸಾಮಾನ್ಯ ಸಾಧನೆಯಲ್ಲ. ಆ ಸ್ಥಾನ ಸಿಗದಿದ್ದರೆ, ಅವರಿಗೂ ಸೋನಿಯಾಗೂ ಫಜೀತಿ ಆಗುತ್ತಿತ್ತು. ಕಾಂಗ್ರೆಸ್ ಚುನಾಯಿತರ ಸಂಖ್ಯೆ ಆಗ 57 ಇದ್ದದ್ದು 42ಕ್ಕೆ ಇಳಿದು, ಇವರಿಗೆ ಸಹಾಯ ಬಂದದ್ದು ಯಾವ ಜಾದೂ? ಅಂದೊಮ್ಮೆ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರನ್ನು 13 ತಾಸು ಕಾಲ ವಿಚಾರಣೆಗೆ ಗುರಿಮಾಡಿದ ಶುಕ್ರ ಈತ! ಅಮಿತ್ ಷಾ ಕೇಂದ್ರಕ್ಕೆ ಬರಲು, ಗುಜರಾತ್ ಬಿಡಲು ಇದು ಕಾರಣ. ಇಂಥ ಪ್ರಚಂಡನಲ್ಲಿ ದೇಶಭಕ್ತಿ ಹೇಗೆ, ಎಲ್ಲಿ ಕಾಣುತ್ತೀರಿ? ಕಾಂಗ್ರೆಸ್ಸಿಗೆ ಅಪಾರ ಹಾನಿ, ಭಯ ಆಗಿದೆ. ಸೋನಿಯಾ ಭಂಟರು ಕ್ರಮವಾಗಿ ಜೈಲು ಸೇರುತ್ತಿದ್ದಾರೆ. ಸೇರಲಿದ್ದಾರೆ. ಇಂದಿರಾ, ರಾಜೀವರು ಎಷ್ಟೊಂದು ಹಾನಿ ಮಾಡಿದರು? ನೆಹ್ರೂ ಚರಿತ್ರೆ ಬಿಚ್ಚಿಕೊಳ್ಳುತ್ತಿದೆ. ನೀವು ಇನ್ನಾದರೂ ತಿಳಿಯದಿದ್ದರೆ, ದೇಶದ್ರೋಹಿಗಳ ಸಾಲು ಬೆಳೆಯುತ್ತವೆ.

    ಸಾಮಾನ್ಯವಾಗಿ ಹೇಳುತ್ತಾರೆ- ‘ಸತ್ತವರ ದೂಷಣೆ ಬೇಡ’ ಅಂತ. ಅದು ನಮ್ಮ ದಾಸ್ಯಕ್ಕೇ ಕಾರಣವಾಯ್ತು. ವಿವೇಚನೆ, ವಿಮರ್ಶೆ ತಪ್ಪಲ್ಲ! ಸಾಹಿತ್ಯವಾಗಲೀ, ರಾಜಕೀಯವಾಗಲೀ, ಸಾಮಾಜಿಕ ಕ್ಷೇತ್ರವಾಗಲೀ ಸದಾ ವಿಮರ್ಶೆಯಲ್ಲಿರಬೇಕು. ಆ ವಿಮರ್ಶೆ ಸ್ವತಂತ್ರ ಬುದ್ಧಿಯಿಂದ ಹುಟ್ಟಿ ಬರಬೇಕು. ಆ ಸ್ವಾತಂತ್ರ್ಯಕ್ಕೆ ದೇಶಭಕ್ತಿಯಿರಬೇಕು. ಇದು ಇಲ್ಲದೆ ಬರೀ ವ್ಯಕ್ತಿಪೂಜೆಯಿಂದ ಜಯಲಲಿತಾ, ಶಶಿಕಲಾ, ಕರುಣಾನಿಧಿ, ಮಾರನ್ ಸೋದರರು, ಇಲ್ಲಿನವರು, ದೆಹಲಿಯವರು, ಬಿಹಾರ್, ಪಂಜಾಬಿನವರು ತುಂಬ ಹಾನಿಗೊಳಗಾಗಿದ್ದಾರೆ. ಇನ್ನೊಂದು ಮಾತು ಹೇಳಲೇ? ಇಂಥವರು ತಾವು ತಾವೇ ಬದುಕಿದ್ದಾಗ ಸೃಷ್ಟಿಸಿಕೊಂಡ ಸ್ಮಾರಕಗಳನ್ನು ಅಲಕ್ಷಿಸಬೇಕಾಗಿದೆ. ‘ಸ್ಮಾರಕ’ ‘ನೆನಪು ಉಳಿಸುವ’ ಇಮಾರತ್ತಾಗಬೇಕು, ಹೊರತು ಅಪಸ್ಮಾರಕ ಆಗಬಾರದು. ನಿಮ್ಮ ಮನೆ ‘ತುಗಲಖ್’ ರೋಡಿನಲ್ಲಿ ಇದ್ದರೆ, ಎಷ್ಟು ಸಲ ಈ ದುರುಳನ ನೆನಪು ಬರುತ್ತದೆ?

    ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರು ‘ಅಲಹಾಬಾದ’ನ್ನು ‘ತೀರ್ಥಕ್ಷೇತ್ರ ಪ್ರಯಾಗ’ ಎಂದು ಹಿಂದಣ ಹೆಸರಿಗೆ ತಂದದ್ದು ಹೀಗೆ. ‘ಹೈದ್ರಾಬಾದು’, ‘ನಿಜಾಮಾಬಾದ್’, ‘ಔರಂಗಾಬಾದ್’, ‘ಫೈಜಾಬಾದ್’, ‘ಗಾಜಿಯಾಬಾದ್’- ಎಲ್ಲ ‘ಬಾದು’ಗಳೂ ಏಕೆ ಇರಬೇಕು? ಇದು ದಾಸ್ಯಕುರುಹು, ಮೂರ್ಛೆ ತರಿಸುವುದು ಅಲ್ಲವೇ? ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮೈಸೂರು ಒಡೆಯರು, ಚಾಲುಕ್ಯ, ಹೊಯ್ಸಳ, ಇಂಥವರ ಹೆಸರುಗಳನ್ನು ದೃಢಪಡಿಸುವ ನೂರಾರು ಸ್ಮಾರಕಗಳು ಬೇಕು. ಇತಿಹಾಸದ ಸಂಸ್ಮರಣೆ ನಮಗೆ ಒಂದು ಟಾನಿಕ್ ಇದ್ದಂತೆ. ‘ಟಿಪು್ಪ’ ಸ್ಮಾರಕಗಳು ಅಫ್ಘಾನಿಸ್ಥಾನಕ್ಕೆ ಹೋಗಲು- ಅವರು ಛಂಗೇಸ್ ಖಾನ್ ಮತ್ತು ತೈಮೂರರ ವಂಶವಾದ ಪ್ರಯುಕ್ತ- ಮಂಗೋಲಿಯಾಕ್ಕೆ ಹೋಗಲು ಅಡ್ಡಿ ಮಾಡಬಾರದು. ಕರ್ನಾಟಕಕ್ಕೆ ಇಂಥ ‘ಶಾಪ’ಗಳು ಬಹಳ ಇವೆ. ‘ಮತಾಂತರಿತರು’ ಪಟೇಲರ ವರ್ಗದವರೇ. ಇಲ್ಲಿನ ಬೇರು ಕಿತ್ತು, ಕೃತಕಬೇರುಗಳಿಂದ ಮರಗಿಡ ಗಳನ್ನು ಬೆಳೆಸಲು ಸಾಧ್ಯವಿಲ್ಲ! ಮನುಷ್ಯರಿಗೆ ಅನ್ವಯಿಸಿ! ‘ಬುಡಾನ್ ಶಾಸ್ತ್ರಿ, ಅಬ್ದುಲ್ಲಾ ಐಯ್ಯಂಗಾರ್, ಮೂಸಾ, ಆಚಾರ್ಯ!’ ಇವು ಶೇಷಕಮಲ ಕಲಾ ಮಂಡಳಿ ನಾಟಕದ ‘ಎಚ್ಚಮನಾಯಕ’ದ ದೃಶ್ಯಾವಳಿಗಳಲ್ಲಿ ಕಾಣಿಸಿಕೊಳ್ಳುವ ಅಪಸ್ಮಾರಕಗಳು! ಈ ವರ್ಗದಲ್ಲಿ ಅನಂತಮೂರ್ತಿ, ಕಾರ್ನಾಡ್, ಇನ್ನಿತರ ‘ಕೃತಕತಳೀ’ ನಿರ್ವಪಕರೂ ಸೇರುತ್ತಾರೆ. ‘ಸ್ವಂತ ಬುದ್ಧಿಯ ಸಾಹಿತ್ಯ ಬೇಡವೇ?’ ಒಬ್ಬ ನನಗೆ ಪದೇಪದೆ ‘ಸ್ವಂತಬುದ್ಧಿ’ ಎಂದರೇನು? ಅಂತ ಕೇಳುತ್ತಿದ್ದ, ಅವನು ವಿದ್ಯಾರ್ಥಿ ಪುಂಡ. ಕಾಲೇಜು ಚುನಾವಣೆಯಲ್ಲಿ ತಂತ್ರದಿಂದ ಗೆದ್ದು ಬರುತ್ತಿದ್ದ. ನಾನು ಅವನಿಗೆ ಸವಾಲಾಗಿದ್ದೆ. ಆತನಿಗೆ ಕೊನೆಗೆ ಹೇಳಿದೆ, ‘ನಿನಗೆ ಏನು ಇಲ್ಲವೋ ಅದೇ ಸ್ವಂತ ಬುದ್ಧಿ’ ಅಂತ! ಅವನಿಗೂ ನನಗೂ ಕಮ್ಯುನಿಸಂ ಬಗ್ಗೆ ತುಂಬ ಚರ್ಚೆಯಾಗುತ್ತಿತ್ತು. ಒಂದು ದಿನ ಹೇಳಿದೆ. ‘ಹೀಗೇ ಆದರೆ ನಿನಗೆ ಹುಚ್ಚು ಹಿಡಿಯುತ್ತದೆ’ ಅಂತ. ಅದು ಹಾಗೇ ಆಯಿತು! ಆಮೇಲೆ ಎಲ್ಲಿಗೆ ಹೋದನೋ! ‘ನನಗೇ ಹುಚ್ಚು ಹಿಡಿಯುತ್ತದೆ’ ಅಂತ ಮರುಮಾತಾಡುತ್ತಿದ್ದ, ಅವನು! ಈಗ ಹೇಳಿ, ನಾನು ಸರಿಯಾಗೇ ಚಿಂತಿಸುತ್ತಿರುವೆ, ಅಲ್ಲವೇ?

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts