ವೇದೋಕ್ತ ತ್ರಿಪುರಾಸುರ ಸಂಹಾರದ ಕಥೆ – ಇಂದಿನ ಅರ್ಥ

ನಾಗಾಲ್ಯಾಂಡು’- ಇಂಗ್ಲೇಂಡು, ಸ್ಕಾಟ್ಲೆಂಡು, ಐರ್​ಲೆಂಡು’ ಎಂಬಂತೆ ವಿದೇಶಿ ಹೆಸರಿಟ್ಟುಕೊಂಡು, ಕ್ರೖೆಸ್ತಮಯರಾಗಿ, ‘ವೋಟ್ ಫಾರ್ ಸೋನಿಯಾ, ಈಸ್ ವೋಟ್ ಫಾರ್ ಕ್ರೖೆಸ್ತ್’ ಎಂದು ಹಿಂದಣ ಚುನಾವಣೆಯಲ್ಲಿ ಬಹಿರಂಗವಾಗಿ ಫಲಕಗಳನ್ನು ಹಿಡಿದು, ವೋಟು ಗಿಟ್ಟಿಸಿ, ಅಧಿಕಾರಕ್ಕೆ ಬಂದ ಮತಾಂತರ ಮಾಫಿಯಾ, ಮೂಲಕ ಅಭಾರತೀಯ ಪ್ರಜ್ಞೆಯ ನರಕದಲ್ಲಿ ಇಳಿದಾಗ, ಈಗ ಅಲ್ಲಿ ಭಾಜಪ ಹೀಗೆ ಜಯ ಸಾಧಿಸಬಹುದು, ಅಧಿಕಾರ ಹಿಡಿಯಬಹುದು ಎಂದು ಯಾರು ಕಂಡಿದ್ದರು?

ನಮಗೆ ವೇದಗಳೂ ಬೇಡ, ವೇದಾರ್ಥಗಳೂ ಬೇಡ, ವೇದ ಚಿಂತಕರೂ, ವಿವರಣೆಕಾರರೂ ಬೇಡ. ಹಾಗಾಗಿ ಅಮೃತವನ್ನಿಟ್ಟುಕೊಂಡು ಮದ್ಯಪಾನ ಮಾಡುವ ಉನ್ಮತ್ತರ ದುಃಸ್ಥಿತಿಯಲ್ಲಿದ್ದೇವೆ. ಕಥೆ ಹೇಳುವೆ ಕೇಳಿ, ಹಿಂದೆ ಕಮಲಾಕ್ಷ, ತಾರಾಕ್ಷ ಮೊದಲಾದ ಮೂವರು ಅಸುರರು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡರು. ಬ್ರಹ್ಮ ಆಗಿನ ಚುನಾವಣಾ ಕಮಿಷನರ್ ಎನ್ನಿ. ಇವರು ವರ ಕೇಳಿದರು- ‘ನಮಗೆ ಹಾರಾಡುವ ಮೂರು ಕೋಟೆಗಳು ಬೇಕು. ಅವುಗಳಲ್ಲಿ ಕುಳಿತು ನಾವು ತ್ರಿಲೋಕಗಳನ್ನು ಗೆಲ್ಲಬೇಕು. ನಾವು ಸಾಯಬಾರದು. ಆ ಕೋಟೆಗಳು ಕಬ್ಬಿಣ, ಬೆಳ್ಳಿ, ಬಂಗಾರದವು ಆಗಿರಬೇಕು’ ಎಂತ. ಈ ಕೋಟೆಗಳು ಅಂದಿನ ‘ಅ+ಹಿಂ+ದ’ ಎಂಬ ಮೂರು ಎನ್ನಿ. ಈ ಕೋಟೆಗಳು ಸದಾ ಹಾರಾಡುತ್ತಿರಬೇಕಲ್ಲ? ಏಕೆ? ಅವಕ್ಕೆ ಪಾದಯಾತ್ರೆ ಮಾಡುವ ಶಕ್ತಿಯಿಲ್ಲ. ಅಂಥವರು ‘ಹಾರಾಡ’ದೇ ಬೇರೇನು ಮಾಡುತ್ತಾರೆಯಯ್ಯ? ಬ್ರಹ್ಮ ಹೇಳಿದ – ‘ಹಾಗಾಗದು’! ನಾನೇ ಸಾಯುವ ಪದವಿಯವನು, ನಿಮಗೆ ಸಾಯದ ಸ್ಥಿತಿಯನ್ನು ಕೊಡದಾಗದು’.Statuatory Post ಆದರೇನು? ನಿವೃತ್ತಿ ಇದೆಯಲ್ಲ? ಅಧಿಕಾರದ ಸಾವು ಅಲ್ಲವೆ ಅದು? ಮಾಜಿಗಳನ್ನು ಕೇಳಿ! ‘ಬೇರೇನಾದರೂ ನಿಬಂಧನೆ ಹಾಕಿ ಕೇಳಿ’ ಎಂದ ಬ್ರಹ್ಮ. ಆ ಅಸುರರು ಕೇಳಿದರು-‘ಹಾಗಾದರೆ ಈ ಮೂರೂ ಕೋಟೆಗಳು ಸರಳ ರೇಖೆಯಲ್ಲಿ ಬಂದಾಗ, ಹಾಗೆ ಹಾರಾಡುವಾಗ, ಮಹಾಪುರುಷನೊಬ್ಬನು ಒಂದೇ ಬಾಣ ಪ್ರಯೋಗದಿಂದ, ಪ್ರಯೋಗ ಮಾಡಿದಾಗ ಮಾತ್ರ ಈ ಕೋಟೆಗಳು ಉರಿಯಲಿ, ನಮಗೆ ಸಾವು ಬರಲಿ’ ಎಂತ. ಇವರು ಐದು ವರ್ಷ ಅಧಿಕಾರದಲ್ಲಿದ್ದು, ಪಾನಮತ್ತರಂತೆ ಮೇಲಿಂದ ‘ಭಾಗ್ಯ’ಗಳನ್ನು ನಿ‘ರ್ಭಾಗ್ಯ’ರ ಮೇಲೆ ಉದುರಿಸುತ್ತ, ನಿರ್ಗತಿಕರೂ, ಮತಿಬಲವಿಲ್ಲದವರೂ, ಸೋಮಾರಿಗಳೂ, ಜಾತಿವಾದಿಗಳೂ, ಒಡಕರೂ, ಜಗಳಗಂಟರೂ ಅವರು ಆಗುವಂತೆ ಓಟು ಬ್ಯಾಂಕು ಮಾಡಿಕೊಂಡು ಮೆರೆದರು. ರಾಜಧರ್ಮ ಮರೆತರು, ಉರಿದೆದ್ದರು. ಆಗ ದೇವತಾ ಪಕ್ಷದವರು ಯೋಚಿಸಿ, ಮಹಾವಿಷ್ಣುವನ್ನು ರಕ್ಷಣೆಗಾಗಿ ಪ್ರಾರ್ಥಿಸಿದರು. ವಿಷ್ಣುವು ಹೇಳಿದ-‘ನೀವು ಬುದ್ಧಿಗೇಡಿಗಳು, ಐಕಮತ್ಯವಿಲ್ಲದವರು, ಅಮೃತಪಾನ ಮಾಡಿಯೂ ಬೆಲೆ ತಿಳಿಯದೇ ಕಣ್ಣು ಬಿಡುವವರು. ಪರವಾಗಿಲ್ಲ. ಒಂದು ಕೆಲಸ ಮಾಡೋಣ. ಕೈಲಾಸದ ಪರಮಶಿವ ತನ್ನ ಪಿನಾಕವೆಂಬ ಬಿಲ್ಲಿಗೆ ಬಾಣ ಹೂಡಲಿ. ಅದರ ತುದಿಯಲ್ಲಿ ನಾನೇ ಕೂಡುತ್ತೇನೆ. ಬಾಣವು ಅಗ್ನಿಮಯವಾಗಲಿ. ಅದರ- ಮಿಸೈಲ್ ಹೆಡ್, ಅಣು ಬಾಂಬು ತಲೆ- ನಾನಾದರೆ ಎಲ್ಲ ಸರಿಯಾಗುತ್ತದೆ. ಆದರೆ ಬ್ರಹ್ಮನೇ ಸಾರಥಿಯಾಗಬೇಕು. ಏಕೆ? ವರ ಕೊಟ್ಟವನು ಅವನೇ! ಅವನ ಕೈಲೇ ಈ ತಂತ್ರ ಮಾಡಿಸಬೇಕು. ಭೂಮಿಯೇ ರಥ, ಸೂರ್ಯ ಚಂದ್ರರೇ ಚಕ್ರಗಳು. ದೇವತೆಗಳೇ ಕುದುರೆಗಳು. ನಾಗರೇ ಚಕ್ರದ ಕಡಾಣಿಗಳು.Remember, Nagas!ಹೋಗಿ ಬ್ರಹ್ಮನಿಗೆ ಪ್ರಾರ್ಥಿಸಿ’ ಎಂತ. ಬ್ರಹ್ಮ ಅಮಿತ್ ಷಾ ಆಗಿ ಅವತರಿಸಿದರು. ಬಾಣಾಗ್ನಿಯಲ್ಲಿ ತ್ರಿಪುರಾ ಬಿಜೆಪಿ ಸದಸ್ಯರು, ತುದಿಯ ಅಣುಬಾಂಬು ತಲೆಯಲ್ಲಿ ಮೋದಿ ಕುಳಿತು ಬಾಣ ಪ್ರಯೋಗವಾಯಿತು. ಎಲ್ಲಿ? ಅಲ್ಲಿ, ಮೂರು ಊರುಗಳಲ್ಲಿ, ರಾಜ್ಯಗಳಲ್ಲಿ- ತ್ರಿಪುರಾ, ನಾಗಾಲ್ಯಾಂಡು, ಮೇಘಾಲಯಗಳಲ್ಲಿ! ಕ್ರೖೆಸ್ತ ಶಕ್ತಿ, ಮಹಮ್ಮದೀಯ ಶಕ್ತಿ, ಕಮ್ಯೂನಿಷ್ಟ್ ಶಕ್ತಿಗಳೆಂಬ ಮೂರು ಶಕ್ತಿಗಳು ಉರಿದು ಬೂದಿಯಾಗಿ ಅಲ್ಲಿ ಕೆಸರಲ್ಲೂ, ಬೂದಿಯಲ್ಲೂ ಕಮಲ ಅರಳಿತು. ‘ಕಬ್ಬಿಣದ ಕೋಟೆ, ಬೆಳ್ಳಿಯ ಕೋಟೆ, ಬಂಗಾರದ ಕೋಟೆ’- ಎಲ್ಲಾದರೂ ಕೇಳಿದ್ದೀರಾ? ಯೋಗದ ಅರ್ಥದಲ್ಲಿ ಇವು ನಮ್ಮನ್ನು ಕಟ್ಟಿ ಹಾಕಿರುವ ತಾಮಸ, ರಾಜಸ, ಸಾತ್ವಿಕ, ತ್ರಿಗುಣಗಳ ಕೋಟೆ, ಶರೀರ ಘಟನೆ. ಇದು ಸಿಡಿಯುವುದು ವಿಷ್ಣು ಶಕ್ತಿಯಿಂದ, ಪ್ರಾಣಶಕ್ತಿಯ, ರುದ್ರಶ್ವಾಸದ ಆಯಾಮದಿಂದ, ಭೂಮಿಯ ಮೇಲಿದ್ದೇ ಸಿಡಿಸಬಹುದಾದ ಈ ಕೋಟೆಗಳಿಗೆ ಇಲ್ಲಿ ಕರ್ನಾಟಕದಲ್ಲಿ ಬೇರೆಯೇ ಅರ್ಥ, ಆಯಾಮ, ಡೈಮೆನ್ಶನ್ ಇವೆಯಯ್ಯ! ನೀವು ತಿಳಿಯುವುದೇ ಇಲ್ಲ. ತಮ್ಮಂದಿರು ಎಲ್ಲ ಸತ್ತು, ಭೀಷ್ಮ ಉರುಳಿ, ನರಳಿ, ದ್ರೋಣ ಸತ್ತು, ಸೈಂಧವನ ತಲೆ ಎಗರಿ, ಕರ್ಣ ಶೋಚನೀಯನಾಗಿ ಸತ್ತರೂ ದುರ್ಯೋಧನ ವೈಶಂಪಾಯನ ಕೊಳದಲ್ಲಿ ಅಡಗಿಕೊಂಡನಲ್ಲ? ಪ್ರಾಣಗಳ್ಳ? ಜೀವಗಳ್ಳ? ಅಂಥವರಿಗೆ ಬುದ್ಧಿ ಬರುವುದಿಲ್ಲ, ಅಲ್ಲರಿ! ‘ನಾಗಾಲ್ಯಾಂಡು’- ಇಂಗ್ಲೇಂಡು, ಸ್ಕಾಟ್ಲೆಂಡು, ಐರ್​ಲೆಂಡು’ ಎಂಬಂತೆ ವಿದೇಶಿ ಹೆಸರಿಟ್ಟುಕೊಂಡು, ಕ್ರೖೆಸ್ತಮಯರಾಗಿ, ‘ವೋಟ್ ಫಾರ್ ಸೋನಿಯಾ, ಈಸ್ ವೋಟ್ ಫಾರ್ ಕ್ರೖೆಸ್ತ್’ ಎಂದು ಹಿಂದಣ ಚುನಾವಣೆಯಲ್ಲಿ ಬಹಿರಂಗವಾಗಿ ಫಲಕಗಳನ್ನು ಹಿಡಿದು, ವೋಟು ಗಿಟ್ಟಿಸಿ, ಅಧಿಕಾರಕ್ಕೆ ಬಂದ ಮತಾಂತರ ಮಾಫಿಯಾ, ಮೂಲಕ ಅಭಾರತೀಯ ಪ್ರಜ್ಞೆಯ ನರಕದಲ್ಲಿ ಇಳಿದಾಗ, ಈಗ ಅಲ್ಲಿ ಭಾಜಪ ಹೀಗೆ ಜಯ ಸಾಧಿಸಬಹುದು, ಅಧಿಕಾರ ಹಿಡಿಯಬಹುದು ಎಂದು ಯಾರು ಕಂಡಿದ್ದರು? ನಿಮ್ಮ ‘ಅ+ಹಿಂ+ದ’ ಒಂದು ಕೋಟೆ ಅದಲ್ಲವೇ? ಅಲ್ಪಸಂಖ್ಯಾತರೆಂಬ ಬಹುಸಂಖ್ಯಾತರನ್ನು ಬೆದರಿಸಿ, ಭಯಪಡಿಸಿ, ಆಳುವ ಸಮೂಹ? ಇನ್ನು ಹಿಂದುಳಿದವರು- ಟ್ರೖೆಬಲ್ಸ್-ಅವರೂ ಸಂಘಟಿತರಾಗಿ ಮುಖ್ಯವಾಹಿನಿಗೆ ಸಮೀಪದವರಾದುದು; ದಲಿತರ ಪಾಡೇನು? ಮಾಯಾವತಿ ಇಲ್ಲಿ ಬಂದರೇನು? ಯಾರೊಡನೆ ಘಟ ಬಂಧನ ಮಹಾದೇವಿ? ಮಮತಾಗೆ ಚಳಿ ಜ್ವರ ಬಂದಿದೆ- ಬಂಗಾಳೀ ಜ್ವರ, ಮಾಹೇಶ್ವರೀ ಜ್ವರ ಅದು. ಅದು ಇಲ್ಲೂ ಬೀಸಲು ಆರಂಭಿಸಿಯೇ ಈಗ ಬಾಬಾ ಬುಡನ್ ಸಾಹೇಬರು, ಸತ್ತಮೇಲೂ ಅಮರ ದತ್ತಾತ್ರೇಯರನ್ನು ಹಿಡಿದು ‘ದರ್ಗಾ’ ಹೊಕ್ಕು ಮೇಲೇಳಲು ನೋಡಿದ್ದಾರೆ. ಸಾಹೇಬ್ರೇ! ‘ದರ್ಗಾ’ ಅನಬೇಡ್ರಿ! ದುರ್ಗಾ ಅನ್ರಿ! ಓಟು ಬಂದೈತಿ! ನೀವು ಅನ್ನುವುದಿಲ್ಲ ಏಕೆ? ದುರ್ಗಾ ಈಗ ಯಡಿಯೂರಪ್ಪನವರನ್ನು ಹಿಡಿದಿರುತ್ತಾಳೆ- ಭಗವತೀ, ಮಹಾಕಾಳೀ ಅಯ್ಯಯ್ಯೋ! ರುದ್ರಶಕ್ತಿ ಹಿಡಿಯೊಣವೆಂದರೆ, ನೀವೇ ಅದನ್ನು ‘ವೀರಶೈವ-ಲಿಂಗಾಯತ’ ಎಂದು ಒಡೆದಿದ್ದೀರಿ. ರುದ್ರನ ತ್ರಿಶೂಲದಲ್ಲೂ ಮೂರು ಶೂಲಗಳು ಇವೆ. ‘ಹಿಂದು+ಬೌದ್ಧ+ಸಿಕ್ಖ’ ಎನ್ನಿ. ನಾನಾ ಹಿಂದೂ ಸಂಘಟನೆಗಳಲ್ಲಿ ಶಿವಾಯುಧಗಳೇ. ಸಂಸ್ಕೃತದ ಕೆಲವು ಶಬ್ದಾರ್ಥಗಳನ್ನು ಕುರಿತು ನಿಮಗೆ ತಿಳಿಸಬೇಕೆಂಬಾಸೆ ಆಗಿದೆ (1) ಸಿದ್ಧ (2) ಬುದ್ಧ (3) ಸಾಧ್ಯ(4) ಅಸಾಧ್ಯ(5) ಬದ್ಧ – ಹೀಗೆ ಹಲವು. ಸಿದ್ಧರೆಂದರೆ ಯೋಗ ಸಿದ್ಧಿಪಡೆದವರು. ಅಣಿಮಾ, ಗರಿಮಾ… ಇತ್ಯಾದಿ ಅಷ್ಟ ಸಿದ್ಧಿಗಳು. ದಿಢೀರನೆ, ಹಗುರವಾಗಿ ಬಿಡುವುದು, ದಿಢೀರನೆ ಭಾರವಾಗಿ ಬಿಡುವುದು, ಎಲ್ಲೋ ಇದ್ದ ವಸ್ತುವನ್ನು ಕೈವಶದಲ್ಲಿ ಪಡೆಯುವುದು, ಬೇಕಾದ ರೂಪಾಕಾರ ತಾಳುವುದು, ಬಡತನ+ಅಧಿಕಾರ ಪ್ರಾಪ್ತಿ, ಹೀಗೆ.. ಅರ್ಥ? ಹಗರಣಗಳು ಬಂದಾಗ ನುಣುಚಿಕೊಳ್ಳುವುದು ‘ಹಗುರ’, ಜನತೆಗೆ ಬೇಡವಾಗಿ ಭಾರವಾಗುವುದು, ಕೇಂದ್ರ ಅನುದಾನಿತ ಹಣವನ್ನು ದುರುಪಯೋಗಿಸಿ, ‘ಕೈ’ವಶ ಮಾಡಿಕೊಂಡು ‘ನಾನು ಕೊಟ್ಟೆ- ಈ ಭಾಗ್ಯ, ಆ ಭಾಗ್ಯ’ ಎನ್ನುವುದು. ಕಿತಾಪತಿ ಮಾಡಿ, ಜಾತಿಗಳ ಮೇಲೆ ಉಪಜಾತಿ ಎತ್ತಿಕಟ್ಟಿ, ಅಧಿಕಾರ ಉಳಿಸಿಕೊಳ್ಳುವುದು ‘ಅಭಿನವ ಸಿದ್ಧ’ ಲಕ್ಷಣ. Repeat- ‘ಅನುಭವ ಸಿದ್ಧ’ ಅಲ್ಲ! ಇದು ಕಣ್ಕಟ್ಟು ಮಾಯೆಯಾಗಿ ಬಹಳಕಾಲ ಉಳಿಯುವುದಿಲ್ಲ- ಮಾರೀಚ, ಜಿಂಕೆಯಾಗಿಯೂ, ರಾಮಬಾಣಕ್ಕೆ ಸತ್ತ. ಅಗಸ್ಱರು ಜೀರ್ಣಿಸಿಕೊಂಡರು. ಇನ್ನು ಬುದ್ಧ ‘ತಿಳಿದವನು’, ‘ಜ್ಞಾನೋದಯವಾದವನು’, ಅನೇಕ ಜನ್ಮಗಳ ಬೋಧಿ ಸತ್ತ್ವ ಅವತಾರಗಳ ನಂತರ! ನಿಮಗೆ ಜ್ಞಾನೋದಯವಾಗುವುದು ನನಗೆ ಸಂಶಯ. ನನ್ನ ಮೂಢನಂಬಿಕೆ ಎಂದರೂ ಸರಿ, ‘ಸಾಧ್ಯರು’ ಒಂದು ಬಗೆಯ ಜನನ ಮರಣ ಶೂನ್ಯ ದಿವ್ಯ ಚೇತನಗಳು. ಅಸಾಧ್ಯವನ್ನೂ ಸಾಧ್ಯಮಾಡುವ ‘ಮೋದಿ+ಷಾ’ ಶಕ್ತಿಯವರು ಈ ಬಗೆಯವರು. ಬದ್ಧರೆಂದರೆ ಯಾರು? ಹೋ! ತಿಳಿಯಿತು, ಬಿಡಿ.. ದಿನಾ ಹಗರಣಗಳಲ್ಲಿ ಸಿಕ್ಕು, ಆಗ ಮೆರೆದರೂ ಈಗ ಜನ ಮರೆಯದ ಅವಸಾನ ಸ್ಥಿತಿಯಲ್ಲಿರುವ ವಾದ್ರಾ+ರಾಹುಲ ಅಥವಾ ಲಾಲು, ಚೌಥಾಲ, ತಮಿಳುನಾಡಿನ ರಾಜಾ, ಮಾರನ್ ಇಂಥವರು. ಬರಲಿರುವ ಕಮ್ಯುನಿಸ್ಟರ ಬಂಧನಗಳು, ಕಾಶ್ಮೀರದ ಹುರಿದೆತ್ತುಗಳು- ನೀವು ಎಲ್ಲಿ ನಿಲ್ಲುತ್ತೀರಿ, ಅಯ್ಯನವರೇ? ಎತ್ತುಗಳನ್ನು ಹುರಿದರೆ ‘ಹುರಿ ಎತ್ತು’ ಆಗುವುದಿಲ್ಲ! ಅದು ಗೋಮಾಂಸಕ್ಕೂ ಅನ್ವಯ. ಗೋ ಸಂತತಿ, ಹಾಲು, ಮೊಸರು, ಸಗಣಿ, ಮೂತ್ರ, ಚರ್ಮ, ಎಲಕ್ಕೂ ಉಪಯುಕ್ತ

ಎನ್ನುತ್ತದೆ. ಗೋ ಕುಲದ ಹಾಡು. ನಿಮ್ಮ ಪಾಡು! ಹಳೆಯ ಜಾಡು! ಈಗ ತ್ರಿಪುರಾಸುರನ ಸಂಹಾರವಾದ ಕಾಲದಲ್ಲಾದರೂ ನಿಮಗೆ ಸದ್ಬುದ್ಧಿ ಬರಲಿ. ಬೇಗ ಇಳಿಯಿರಿ! ಹತ್ತುವುದಂತೂ ಆಗದು, ಶಶಿಕಲಾ ಸ್ಥಿತಿ ನೋಡಿ. ದುಷ್ಟ ಸಹವಾಸದಲ್ಲಿ ಯಾರೂ ಉಳಿಯಲಾರರು. ಹೈಕಮಾಂಡೇ ಹೋಯಿತು! ನಿಮ್ಮ ಬ್ಯಾಂಡು ಯಾರು ಬಾರಿಸುತ್ತಾರೆ? ಬ್ಯಾಂಡು ತೂತಾಯ್ತು, ಬಾರಿಸುವ ಕೋಲೂ ತುಂಡಾಯಿತು. ಕರ್ನಾಟಕಕ್ಕೆ ಒಳಿತಾಗಲಿ. ಏನಂತೀರಯ್ಯ?

 (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ

ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *