ಯುದ್ಧ ನಡೆಯಿತು! ವ್ಯಾಸರು ಬರೆಯುವುದನ್ನು ಬಿಡಲಿಲ್ಲ!

Latest News

ಕಾರು-ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಮದುಮಗ ಸ್ಥಳದಲ್ಲೇ ಸಾವು: ನಾಲ್ವರಿಗೆ ಗಾಯ

ಉತ್ತರಕನ್ನಡ: ಟ್ಯಾಂಕರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಲ್ಲಿ ಮದುಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಾಪುರ-ಹುಬ್ಬಳ್ಳಿ ರಸ್ತೆಯ ಕೆ.ಮಿಲನ್ ಹೊಟೆಲ್ ಬಳಿ ಭಾನುವಾರ ದುರ್ಘಟನೆ ಸಂಭವಿಸಿದೆ. ಅಫ್ರೋಜ್...

ಬಾಳಾಠಾಕ್ರೆಗೆ ಮೊದಲಬಾರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕಾಂಗ್ರೆಸ್ ಮತ್ತು ಎನ್​ಸಿಪಿ

ಮುಂಬೈ: ಶಿವಸೇನೆ ಸಂಸ್ಥಾಪಕ ಹಾಗೂ ಪ್ರಖರ ಹಿಂದುತ್ವವಾದಿ ದಿವಂಗತ ಬಾಳಾಠಾಕ್ರೆಗೆ ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೊದಲಬಾರಿಗೆ ಶ್ರದ್ಧಾಂಜಲಿ ಸಲ್ಲಿಸಿವೆ. ಬಾಳಾಠಾಕ್ರೆ ಅವರ 7 ನೇ...

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ ಪಕ್ಕಾ? ಕುತೂಹಲಕ್ಕೆ ಕಾರಣವಾಯ್ತು ಅಮಿತ್​ ಷಾ ಮಾತು…

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಯಾವುದೇ ಆತಂಕ ಬೇಡ. ಅಲ್ಲಿ ಬಿಜೆಪಿ ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್​...

ಚಾಂಪಿಯನ್ ಪಟ್ಟ ಅಲಂಕರಿಸಿದ ಆರು ತಂಡ

ಸಣ್ಣುವಂಡ ಕಿಶೋರ್ ನಾಚಪ್ಪ ಪೊನ್ನಂಪೇಟೆಕೋದಂಡ ಎ.ಪೂವಯ್ಯ ಜ್ಞಾಪಕಾರ್ಥ ಹಾಕಿಕೂರ್ಗ್ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರಾಥಮಿಕ, ಪ್ರೌಢಶಾಲಾ ಬಾಲಕ, ಬಾಲಕಿಯರ...

ಜನರಿಗೆ ದುಃಸ್ವಪ್ನವಾಗಿ ಕಾಡಿದ್ದ ‘ಒಸಮಾ ಬಿನ್​ ಲಾಡೆನ್​’ ಇನ್ನಿಲ್ಲ; ಸಾಯುವ ವೇಳೆ ಆತ ‘ಕೃಷ್ಣ’ ನಾಗಿ ಬದಲಾಗಿದ್ದ…

ಗುವಾಹಟಿ: ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯ ಸುತ್ತಮುತ್ತಲಿನ ಜನರನ್ನು ಇನ್ನಿಲ್ಲದಂತೆ ಕಾಡಿದ್ದ ಒಸಮಾ ಬಿನ್​ ಲಾಡೆನ್​ ಮೃತಪಟ್ಟಿದ್ದಾನೆ. ಈ ಒಸಮಾ ಬಿನ್​ ಲಾಡೆನ್​ ಒಂದು ಕಾಡಾನೆ. ಅಲ್ಲಿನ...

ಈ ಶೀರ್ಷಿಕೆ ನಿಮಗೆ ಒಗಟೆಂಬಂತೆ ಕಂಡೀತು. ಅರ್ಥ ಬೇಗ ಸ್ಪುರಣವಾಗಲಾರದು. ಧರ್ಮಸೂಕ್ಷ್ಮದ ವಿಷಯಗಳೇ ಹಾಗೆ. ಮಹಾಭಾರತ ಯುದ್ಧಪೂರ್ವದಲ್ಲಿ ಯುಧಿಷ್ಠಿರಾದಿಗಳಿಗೆ ಎರಡು ಸಲ ವನವಾಸ ಪ್ರಸಂಗ ಬಂತು. ಒಂದನೆಯದು ವಾರಣಾವರ್ತದ ಅರಗಿನ ಮನೆ ಸುಟ್ಟ ನಂತರದ್ದು. ಎರಡನೆಯದು ಕಪಟಜೂಜಿನ ಪರಿಣಾಮದ್ದು. ಆಮೇಲೂ ಒಂದು ಅಜ್ಞಾತವಾಸ. ಇದು ಧರ್ಮ ಹಿಡಿದವರ ಪಾಡು. ಧರ್ಮದ ಸೋಲು. ಆದರೆ ಸೋತ ಧರ್ಮ ಮತ್ತೆ ಮೇಲೆದ್ದು ಮೋಸಗಾರರನ್ನೆಲ್ಲ ನುಂಗಿ ಜೀರ್ಣಿಸಿಕೊಂಡಿತ್ತು. ಆ ವಿಶ್ವಾಸ ನಿಮಗೆ ಮೂಡಿಬರಬೇಕಾದರೆ ನೀವು ಸಕಲರೀತಿಯಲ್ಲಿ ಎಡಪಂಥೀಯ ಚಿಂತನೆ, ಪ್ರಭಾವ, ಅಪರೀಕ್ಷಿತ ವಿಶ್ವಾಸ, ಕೊಚ್ಚಿಬರುವ ಅಪಪ್ರಚಾರ, ಅಪಲಾಪಗಳಿಂದ ದೂರವಾಗಬೇಕು. ನೆಹರು ವಾಸನೆ (Nehruism) ಅಳಿಯದೇ ಇರುವ ಈ ಸಂಧಿಕಾಲದಲ್ಲಿ ತರಗೆಲೆಗಳು ಗಾಳಿಗೆ ತೂರುವಂತೆ- ‘ಹಾರಿರೋ! ಜೊಳ್ಳುಗಳಿರಾ’ (ಬೇಂದ್ರೆ) ಎಂಬಂತೆ ನೀವು ತೂರಿ ನಿರ್ನಾಮರಾಗುತ್ತೀರಿ ಅಥವಾ ಆಗಿದ್ದೀರಿ.

ವಿರಾಟನಗರಿಯ ಹೊರಗೆ ನಡೆದ ಉತ್ತರ ಗೋಗ್ರಹಣ ಕಾಲದ ಅರ್ಜುನವಿಜಯ, ಕೌರವರಿಗೆ ಅರ್ಥವಾಗಲಿಲ್ಲ! ಅಭಿಮನ್ಯು ವಧೆಯಾದಾಗ ‘ಒನ್ ವಿಕೆಟ್ ಡೌನ್’ ಆದ ಪಾಂಡವಪಾಳಯದಲ್ಲಿ ಸರ್ವನಾಶವಾದದ ನಿರಾಸೆ ಮೂಡಿತ್ತು. ಅದು ಈಗಣ ಪಂಚರಾಜ್ಯ ಚುನಾವಣೆಯಂತೆ ಒಂದು ಘಟ್ಟ. A battle lost is not a war lost ಎನ್ನುತ್ತಾರೆ. ಯುದ್ಧದಲ್ಲಿ ದಿನದಿನದ ಲೆಕ್ಕ ಬೇರೆ. ಅದು ಚಿಚಠಿಠ್ಝಿಛಿ ಎಂಬ ಬಿಡಿಲೆಕ್ಕ. ಅರ್ಜುನ-ಉಲೂಪಿಯರ ಮಗ ಇರಾವಂತ ಮೊದಲ ದಿನವೇ ಸತ್ತ. ಆಮೇಲೂ ವೀರರು ಸತ್ತರು. ಆದರೆ ಕರ್ಣನೂ ಸತ್ತ, ಶಕುನಿ, ದುಃಶಾಸನ, ದುರ್ಯೋಧನ, ಭೂರಿಶ್ರವ, ಶಲ್ಯ ಎಲ್ಲರೂ ಸತ್ತರು. ಅದು Total War ಲೆಕ್ಕ!

ಯುದ್ಧದಲ್ಲಿ ತ್ಯಾಗವೂ ಇದೆ, ಹುಂಬತನವೂ ಇದೆ. ಯಾರದ್ದು ಯಾವರೀತಿ ಎಂಬುದು ತಿಳಿಯಲು ನೀವು ವ್ಯಾಸರನ್ನು ಓದಬೇಕು- ಅದು ‘ಧರ್ಮಕ್ಕೇ ಜಯ’ ಎಂಬ ಬೋಧೆಯುಳ್ಳದ್ದು. ಒಬ್ಬನೇ ಚಾಯ್ವಾಲಾನನ್ನು ಕಂಡರೆ ಎಷ್ಟು ಜನರಿಗೆ ಭಯವಯ್ಯ! ಆ ಭಯದ ಮೂಲ ಎಲ್ಲಿ? ಚಾಯ್ವಾಲಾನ ಆತ್ಮವಿಶ್ವಾಸದ ಮೂಲ ಎಲ್ಲಿ? ಅದು ವ್ಯಾಸರನ್ನೋದಿದರೆ ತಿಳಿಯುವ ಮಹಾಪ್ರಮೇಯ. ಇಲ್ಲಿ ಅಂತಾರಾಷ್ಟ್ರೀಯ ಕ್ರೖೆಸ್ತ, ಮುಸಲ್ಮಾನ, ಕಮ್ಯೂನಿಸ್ಟ್ ಲಾಬಿಗಳೆಲ್ಲ ಸೇರಿ, ಭಾಜಪವನ್ನು ಸೆಣಸಿದವು. ಸೋನಿಯಾ ಹಿಂದಣ ವ್ಯಾಟಿಕನ್ ಶಕ್ತಿ, ಚೀನಾದ ಬಲ, ಅಡಗದ ಭಯೋತ್ಪಾದಕ ಮತಾಂಧಶಕ್ತಿ, ಮಾವೋವಾದಿಗಳು, ಅತೃಪ್ತ ರಾಜಕಾರಣ ಪುಢಾರಿಗಳು- ಅಧಿಕಾರ ಕಳಕೊಳ್ಳುವ ಭಯದ ನಾಯ್ಡು, ಅಧಿಕಾರ ತಪ್ಪಿದ ಸ್ಟಾಲಿನ್, ನಾನಾ ಹಗರಣಗಳ ಪಾತ್ರಧಾರಿಗಳು- ಲಕ್ಷಕೋಟಿಗಟ್ಟಲೆ ಹಣ ತಿಂದವರು, ತಿನ್ನಿಸಿದವರು, ತಿಂದು ವಿದೇಶಕ್ಕೆ ಓಡಿದವರು- ಎಲ್ಲರೂ ಒಗ್ಗೂಡಿ ಹಿಂದುತ್ವದ ಸದ್ಯದ ಬಲಪರೀಕ್ಷೆ ನಡೆಸಿದರು. ಕಂಡದ್ದೇನು? ಅಸಂಘಟಿತ ಹಿಂದೂಸಮಾಜ! ಹಾಗೂ ಸುಸಂಘಟಿತ ‘ಫತ್ವಾ, ಫರ್ವನು’ ಅನುಯಾಯಿಗಳು! ಅದೇ 7 ಅಕ್ಷೌಹಿಣಿ ವರ್ಸಸ್ 11 ಅಕ್ಷೌಹಿಣಿ ಎಂಬ ಮಹಾಭಾರತ ‘ವ್ಯೂಹ’ದ್ವಯ. ‘ಅಯೋಧ್ಯಾದಲ್ಲಿ ರಾಮಮಂದಿರ ಏಳಬಾರದು; ಎದ್ದರೆ ರಾವಣಸೇನಾ ನಾಶ’. ಅದು ಗೆಲ್ಲಲು ಹವಣಿಸಿದವರ ಭಯ ಅಥವಾ ಆತಂಕ, ಗೊಂದಲ. ಅದಕ್ಕಾಗಿ ಇದು ರಿಹರ್ಸಲ್- ಒಂದು ದೃಷ್ಟಿ. ಎಷ್ಟು ರಿಹರ್ಸಲ್ ಬೇಕಯ್ಯ? ಆಂಜನೇಯ ಲಂಕೆ ಸುಟ್ಟದ್ದು ಏನು? ರಿಹರ್ಸಲ್ಲೋ? ರಿವರ್ಸಲ್ಲೋ? ಪ್ರಹಸನವೋ? ಭಯಾನಕ ಪೂರ್ವನಿಯೋಜನೆಯೋ? ಹೇಗೆ ತಿಳಿಯುತ್ತೀರಿ?

ಈಗ ನೋಡಿ. ಮೋದಿಯವರ ತಾಯಿಯ ಬಗ್ಗೆ ಮೂಢರು ಅವಿವೇಕದ ಟೀಕೆ ಮಾಡಿದರು! ಏಕೆ? ಟೀಕೆಗೆ ಬೇರೇನೂ ತೋಚಲಿಲ್ಲ! ಒಬ್ಬ ಮತಾಂಧ ಹೇಳಿದ- ‘ಮೋದಿ ತನ್ನ ಹೆಂಡತಿಯನ್ನು ಮೇಲೆತ್ತಲಿ, ಆಮೇಲೆ ಮುಸ್ಲಿಂ ಸ್ತ್ರೀಯರ ಪಾಡು’ ಅಂತ. ಇವು ಕೀಳುಮಟ್ಟದ ಟೀಕೆ! ರಾಜಕಾರಣದಲ್ಲಿ ಗಾಂಭೀರ್ಯ ಬೇಕು. ‘ಅದು ನೆಹರುರಲ್ಲಿ ಇತ್ತು, ಮೋದಿಯವರಲ್ಲಿ ಇಲ್ಲ’ ಎಂದ ಇನ್ನೊಬ್ಬ ಭೂಪ- ಸುನಂದಾ ಸಾವಿನ ಪ್ರಕರಣದ ಆರೋಪಿ! ಕಾಂಗ್ರೆಸ್ಸು ಗದ್ದುಗೆ ಹಿಡಿಯದಿದ್ದರೆ ಇಂಥವರಿಗೆ ಉಳಿಗಾಲವಿಲ್ಲ- ಅದು ಅವರ ತಿಳಿವಳಿಕೆ! ಈ ಶಶಿ ತರೂರ ಮಹಾಶಯ ವಿವೇಕಿಯೋ? ಅಪಪ್ರಚಾರ ದೀಕ್ಷೆ ಹಿಡಿದವರೋ? ವಿರೋಧಿಗಳ ಮೇಲೆ ದಾಳಿಯೆಸಗಲು ಅವರ ಬಳಿ ಸರಿಯಾದ ಇಶ್ಯೂ ಇಲ್ಲ. ಅದು ಮರ್ಮ. ಅದು ಸೋಲಿನ ಪ್ರಥಮ ಲಕ್ಷಣ. ರೋಗದ ಮೂಲ ಎಲ್ಲೋ ಇರುತ್ತದೆ. Symptom ಎಂಬ ಹೊರಸೂಚನೆ ಬೇರೆ. ಚಿಕಿತ್ಸಿತ ಆಗಬೇಕಾದ್ದು ರೋಗ. ಯಾವುದು? Anti-Hinduism ಎಂಬ ಹೆಸರಿನ ಧರ್ಮದ್ವೇಷ. ಅದರ ಕರ್ನಾಟಕದ ಮುಖ- ‘ಅಹಿಂದ’- ಬೇರೆ. ಅದರ ತಮಿಳುನಾಡಿನ ಮುಖ- ‘ದ್ರವಿಡ ರಕ್ಷಣೆ’ ಬೇರೆ. ಅದರ ಆಂಧ್ರಮುಖ ‘ಮೋದಿ ಕೊಟ್ಟಮಾತು ಉಳಿಸಿಕೊಳ್ಳಲಿಲ್ಲ’ ಎಂಬುದು ಬೇರೆ. ಕೇಜ್ರಿವಾಲರ ಸಂಘರ್ಷಮುಖ ಬೇರೆ- ಇನ್ನು ರಾವಣನಂತೆ ಹಲವಾರು ಮುಖಗಳು! ಹಿಂದಣ ಕತೆಗಳನ್ನು ನೋಡಿ, ಧರ್ಮ ಸಾಯುವುದೇ? ಎಂದು ತಿಳಿಯಿರಿ.

ಒಬ್ಬ ವಸಿಷ್ಠ, ಅವನಿಗೆ ಅಂತಾರಾಷ್ಟ್ರೀಯ ಖ್ಯಾತಿ, ಬೆಂಬಲ, ಮನ್ನಣೆ ಇತ್ತು. ವಸಿಷ್ಠ ಕತೆಯ ಮರ್ಮ ಇಲ್ಲಿದೆ. ‘ಹೊಸ ಬ್ರಾಹ್ಮಣ’ ವಿಶ್ವಾಮಿತ್ರರಿಗೆ (‘ಶಿವಭಕ್ತ, ಜನಿವಾರಧಾರಿ, ಆತ್ರೇಯ ಕೃತಕಗೋತ್ರದ’) ರಾಹುಲರಂತೆ ಬರೀ ದೇಶೀಯ, ಪ್ರಾಂತೀಯ ಸತ್ರಪರ ಬೆಂಬಲ ಇತ್ತು. ಹಣಾಹಣಿ ‘ದಾಶರಾಜ್ಞಯುದ್ಧ’ದ ರೂಪ ಪಡೆದು ವೇದದಲ್ಲಿ ದಾಖಲೆಯಾಯ್ತು. ಜಯ ಯಾರಿಗೆ? ವಸಿಷ್ಠರಿಗೇ! ಅವರ ಮಕ್ಕಳು, ಶಿಷ್ಯರು, ಆಶ್ರಮ ಎಲ್ಲ ನಾಶವಾಯ್ತು. ಅದು ಒಂದು ಘಟ್ಟ. ಆಮೇಲೆ? ತ್ರಿಶಂಕುವಿನ ರಾಜಬಲ, ಇಕ್ಷ್ವಾಕು ಸೇನಾಬಲ, ವಿಶ್ವಾಮಿತ್ರ ಸೃಷ್ಟಿಯ ಕೃತಕ ‘ಜಾತಿ’ಗಳ ಬಲ (converted armies against Brahmanism) ಎಲ್ಲ ನಾಶವಾಯ್ತು! ಏಕೆ? ವಸಿಷ್ಠರ ಕಾಮಧೇನು ‘ಪಪ್ಲವ’ವನ್ನು ಸೃಷ್ಟಿಸಿತು. ಅಲ್ಲಿ ಮ್ಲೇಚ್ಛ, ಯವನ, ಕಾಂಬೋಜ, ವಾಹ್ಲೀಕ, ಹೂಣ, ಬರ್ಬರ, ಆರಟ್ಟ, ಚೀನಿಯಾದಿ ಬಲಗಳೆಲ್ಲ ಸೇರಿದವು! ಕಾಮಧೇನು ನಂದಿನಿ, ಶಬಲೆಯ ‘ಯೋನಿ’ಯಿಂದ ಇವರೆಲ್ಲ ಹುಟ್ಟಿಬಂದರು ಎಂದರೇನಯ್ಯ? ‘ಸ್ಥಳೀಯ ಹಿಂದೂದ್ವೇಷಿಗಳು ಒಗ್ಗೂಡಿ ಧರ್ಮನಾಶಕ್ಕೆ ಎಳೆಸಿದರೂ, ಅಂತಾರಾಷ್ಟ್ರೀಯ ನವಹಿಂದೂ ಸಮಾಜ ಸಂಘಟಿತವಾಗಿ, ಈ ದ್ರೋಹಿಗಳನ್ನು ಸದೆಬಡಿಯಿತು’- ಇದು ವೇದದ ದಾಖಲೆ. ಓದುತ್ತೀರಾ?

ಭಾಜಪದಲ್ಲಿ ಎಲ್ಲರೂ ಒಂದೇ ರೀತಿಯ ನಿಷ್ಠರಿಲ್ಲ, ಸರಿ! ಆರಿಸಿ ಬಂದ ಸಂದರ್ಭಗಳು, ಆಮೇಲೆ ಹೊಂದಾಣಿಕೆಯ ಪರ್ವಗಳು, ರಾಷ್ಟ್ರಾಭಿಮಾನದಲ್ಲಿ ‘ರಾಜಿ’ ಮಾಡಿಕೊಳ್ಳುವ ಸ್ವಾರ್ಥಪ್ರವೃತ್ತಿ, ‘ಅಳಿಯುತ್ತೇವೆ’ ಎಂಬ ಭಯ, ಅಲ್ಲಿ ಜಾತಿಗಳ ಸಮೀಕರಣ, ಬಿಡಲಾಗದ ಭಂಡ ಅಂಟುಗಳು, ಚುನಾವಣೆಗಾಗಿ ಅಕ್ರಮಹಣ ಸಂಪಾದನೆ, ಸಂಪಾದಿತವಾದುದರ ರಕ್ಷಣೆಗಾಗಿ ಅಧಿಕಾರಕ್ಕೆ ಹಪಹಪಿ- ಇವು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇವೆ. ಚುನಾವಣೆ ಗೆಲ್ಲಲು ಜಾತಿಬಲ, ಕೋಮುಬಲ, Frozen Vote Banks ಎಂಬ ಹಿಮಗಡ್ಡೆಯಂತಹ ಬಲ ಬೇಕು ಎಂಬ ದುಃಸ್ಥಿತಿಯ ತಿಳಿವಳಿಕೆ- ಈ ಎಲ್ಲವೂ ಕಾಂಗ್ರೆಸ್ಸು ಆಳಿ ಬಂದ ಕಾಲದ ಬಳುವಳಿಗಳು- secularly secure for all parties. ಶಶಿ ತರೂರರೇ! ಇನ್ನೂ ‘ನೆಹರು ಪ್ರಜಾಪ್ರಭುತ್ವ ರಕ್ಷಕ’ ಎಂಬ ಭ್ರಮೆಯೇ? ಈಗ ಭಾಜಪ ಪ್ರೇಮಿಗಳೂ ಈ ಪಂಚರಾಜ್ಯ ಚುನಾವಣೆಯ ಪರಿಣಾಮಕ್ಕಾಗಿ ಮೋದಿಯವರನ್ನು ದೂಷಿಸುತ್ತಾರೆ. ಅಯ್ಯೋ! ಒಂದು ಗುಟ್ಟು ಹೇಳಲೇ? ಮೋದಿಯೇ ಬೇರೆ, ಭಾಜಪವೇ ಬೇರೆ! ಗಾಬರಿಯಾಗಬೇಡಿ. ಭಾಜಪ ಹಿಡಿದ ನಿಷ್ಠೆಗಿಂತ, ಮೋದಿಯವರ ರಾಷ್ಟ್ರನಿಷ್ಠೆ, ಧರ್ಮನಿಷ್ಠೆ ಹಿರಿದು. ಸುಭಾಷರಂತೆ, ಅರವಿಂದರಂತೆ ದೇಶಪ್ರೇಮವನ್ನೂ ಧರ್ಮಪ್ರೇಮದ ಪರಿಧಿಯಲ್ಲಿ ಕಂಡವರು ಅಂದು- ಶರಭಂಗ, ಅತ್ರಿ, ಅಗಸ್ಱ, ಜಮದಗ್ನಿಗಳಂತೆ, They stood for very lofty ideals. ಅಲ್ಲಿ ಈಗ ಹಿಂದೂ ಎನ್ನುವ ಮುಖವೂ ಇತ್ತು, ಸರ್ವಲೋಕಕ್ಷೇಮ ಮುಖವೂ ಇತ್ತು. ಈಗ ಆರಿಸಿ ಬಂದ ಸಂಸದರೆಲ್ಲರೂ ಈ ವರ್ಗಕ್ಕೆ ಸೇರುತ್ತಾರೆಯೇ? ಎಲ್ಲೋ ಒಬ್ಬ ಯೋಗಿ ಆದಿತ್ಯನಾಥ, ಒಬ್ಬ ಶಿವರಾಜ ಚವ್ಹಾಣ ಇಂಥವರು. ಪಾರ್ಟಿಗೆ ಇನ್ನೂ ಬೇಕಲ್ಲ? ಜೊಳ್ಳುಗಳೂ ಬಿಡುವ ಹಾಗಿಲ್ಲವಲ್ಲ? ಉದಾಹರಣೆಗೆ, ವಿದೇಶಾಂಗ ಸಚಿವಾಲಯ, ಮಂತ್ರಿ ಕಚೇರಿ ಇದೆ. ಆದರೆ ಮೋದಿ ನಂಬುವುದು ಅಜಿತ್ ದೋವಲ್​ರನ್ನೇ ಏಕೆ? ಗೃಹಶಾಖೆ ಇದೆ- ಆದರೆ ಮೋದಿ ನಂಬುವುದು ಸೇನಾಮುಖಂಡರನ್ನೇ. ಏಕೆ? ನುರಿತ ಐಎಎಸ್, ಐಪಿಎಸ್​ಗಳೇ ಏಕೆ? ಅಯ್ಯಾ! ಕಾಂಗ್ರೆಸ್ಸು ಸುಪ್ರೀಂ ಕೋರ್ಟಿಗೂ ಮಸಿ ಬಳಿಯಿತು. ಆರ್​ಬಿಐಗೆ, ಸಿಬಿಐಗೆ ಎಲ್ಲೆಲ್ಲೂ ತನ್ನವರನ್ನಿಟ್ಟು ವ್ಯೂಹ ರಚಿಸಿಕೊಂಡಿದ್ದು ಈಗ ಬಯಲಾಗುತ್ತಿದೆ.

ಜೆಎನ್​ಯುುಗೆ ಈಗ ಗ್ರಹಣಮೋಕ್ಷ ಕಾಲ ಬಂದಿದೆ. ಕೂಡಿಟ್ಟ ಕೊಳೆ ಒಂದೇದಿನಕ್ಕೆ ಹೋಗದು. ಹೌದೆ? ಸಂಪಾದಿತ ಪಾಪಮೂಟೆ, ಬೂಟಾಟಿಕೆಯ ಶಿವಭಕ್ತಿಗೆ ಬಗ್ಗುವುದಿಲ್ಲ! ನಿಜ ಬ್ರಾಹ್ಮಣನೇ ಬೇರೆ. ಸರ್ವಜೀವ ಹಿತೈಷಿ. ಅವನಿಗೆ ಪಾರ್ಟಿ ಇಲ್ಲ, ಧರ್ಮ ಇದೆ. ಅದು ಕಾರ್ತವೀರ್ಯಾರ್ಜುನನಿಗೂ ತಿಳಿಯಲಿಲ್ಲ. ‘ಜೊಳ್ಳು’ ಕ್ಷತ್ರಿಯರು ಅವನ ಹಿಂದೆ ಇದ್ದರು. ‘ಸಾವಿರ ತೋಳುಗಳು’- ಅದು ಅವನ ಕೋಟೆ- ್ಚಠಿಛ್ಟಿಜಿಛಿ- ಹಿಂಬಾಲಕರ ಸಂಖ್ಯೆಯ ಒಂದು ಸಾಂಕೇತಿಕ ಗಣನೆ. ಆದರೇನು? ಒಂದು ಕೊಡಲಿಗೆ ಎಲ್ಲ ಹತರಾದರು. ಅದು ಪರಶುರಾಮಶಕ್ತಿ. ಈಗ ಕೊಡಲಿಯು ವೋಟಿನ ರೂಪ ತಾಳಿದೆ. ಕೊಡಲಿಯೇ ಪರಶುರಾಮರನ್ನು ಹುಡುಕುತ್ತಿದೆ. ಎಲ್ಲಿ ಆ ವೀರ? ಹೇಳುತ್ತೀರಾ? ಬಿಡಿ. ನಿಮಗೆ ಭ್ರಮೆ ಬಿಟ್ಟರೆ ಸಾಕು!

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

- Advertisement -

Stay connected

278,530FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....