3ನೇ ಚಿತ್ರಕ್ಕೂ ವಿವಾದವೇ ಶಾಪ! ಮಲ್ಟಿಪ್ಲೆಕ್ಸ್​ನಿಂದ ಹೊರಬಿತ್ತು ಯುವ ನಟನ ಸಿನಿಮಾ

ತೆಲಂಗಾಣ: ಕಳೆದ ಒಂದೂವರೆ ತಿಂಗಳಿಂದ ಟಾಲಿವುಡ್​ನಲ್ಲಿ ದೊಡ್ಡ ವಿವಾದವೊಂದು ಹರಿದಾಡುತ್ತಿದ್ದು, ಇದು ತೆಲುಗು ಚಿತ್ರರಂಗದವರಿಗೆ ಬಗೆಹರಿಯದ ತಲೆನೋವಾಗಿ ಪರಿಣಮಿಸಿದೆ. ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ ಬಗೆದಿರುವ ಯುವನಟ ರಾಜ್ ತರುಣ್​, ವಂಚನೆ ಮಾಡಿ, ಸಹ ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನಟನ ಪ್ರೇಯಸಿ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇವರಿಬ್ಬರ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಅದ್ಯಾಕೋ ನಂಬಿಕೆ ದ್ರೋಹ ಕೇಸ್​ಗೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಂಡುಬಂದಿಲ್ಲ. ಈ ವಿವಾದದಲ್ಲಿ ಸಿಲುಕಿರುವ ರಾಜ್​ ಹೆಗಲೇರಿರುವ ಸಂಕಷ್ಟದ ಮೂಟೆ ಕೆಳಗಿಳಿಯುವ ಯಾವ ಮುನ್ಸೂಚನೆಯು ಸಿಗುತ್ತಿಲ್ಲ ಎಂಬುದೇ ಆಶ್ಚರ್ಯ.

ಇದನ್ನೂ ಓದಿ: ‘ತಲೈವರ್ ‘ಕಾಲ್​’ ಮರೆಯಲಾಗದು’: ರಜನಿಕಾಂತ್ ಕುರಿತು ನಿರ್ದೇಶಕ ಲಿಂಗಸ್ವಾಮಿ ಭಾವುಕ ಮಾತು

ವಿವಾದದ ಅಲೆಯಲ್ಲಿ ಸಿಲುಕಿರುವಾಗಲೇ ರಾಜ್ ತರುಣ್ ಅಭಿನಯದ ಮೂರು ಸಿನಿಮಾಗಳ ಪೈಕಿ ಎರಡು ಬಹುನಿರೀಕ್ಷಿತ ಚಿತ್ರಗಳನ್ನು ಆಯಾ ನಿರ್ಮಾಪಕರ ಪ್ಲ್ಯಾನಿಂಗ್ ಮೇರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲಾಯಿತು. ಆದ್ರೆ, ನಿರ್ಮಾಪಕರ ಉದ್ದೇಶ, ಲೆಕ್ಕಾಚಾರಗಳೆಲ್ಲವೂ ಇಲ್ಲಿ ತಲೆಕೆಳಗಾಯಿತು. ರಾಜ್ ಮತ್ತು ಲಾವಣ್ಯ ಪ್ರೇಮ ವಿವಾದವನ್ನು ತಮ್ಮ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡ ಚಿತ್ರ ತಯಾರಕರಿಗೆ ಎದುರಾಗಿದ್ದು ಸೋಲು ಮಾತ್ರ. ನಟನ ಎರಡು ಸಿನಿಮಾಗಳು ಕೂಡ ಜನರಿಲ್ಲದೆ ಥಿಯೇಟರ್​ನಿಂದ ಹೊರಬಿತ್ತು. ಇದೀಗ ಆ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಂಡಿದೆ.

ರಾಜ್ ತರುಣ್ ಅಭಿನಯದ ಕಾಮಿಡಿ ಜಾನರ್​ನ ‘ಭಲೇ ಉನ್ನಾದೆ’ ಸಿನಿಮಾ ಇದೇ ಸೆ.13ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದೇ ಆದರೂ ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ಗಳಲ್ಲಿ ಹಾಕಲಾಗಿದ್ದ ಸಿನಿಮಾವನ್ನು ನೋಡಲು ಜನರು ಬಾರದ ಹಿನ್ನೆಲೆ ಇದೀಗ ಚಿತ್ರವನ್ನು ಬೇರೆ ಯಾವುದೇ ಆಯ್ಕೆ ಇಲ್ಲದೆ ಕೆಲವು ಚಿತ್ರಮಂದಿರದಿಂದ ಕಿತ್ತು ಹಾಕಲಾಗಿದೆ. ಸದ್ಯ ಇದು ಚಿತ್ರತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿದ್ದು, ಯುವ ನಟನ ಕರಿಯರ್​ಗೆ ಪೆಟ್ಟು ನೀಡಿದೆ,(ಏಜೆನ್ಸೀಸ್).

ಆ ದೃಶ್ಯ ಕಂಡು ಮಾಹಿಯಿಂದ ದೂರ ಇದ್ದೆವು! ಕ್ಯಾಪ್ಟನ್​ ‘ಕೂಲ್’ ಅಲ್ಲವೇ ಅಲ್ಲ ಎಂದ ಸುಬ್ರಮಣ್ಯಂ ಬದ್ರಿನಾಥ್

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…