ರಾಜಭವನದಲ್ಲಿ ಬೆಕ್ಕಿನ ಕಾಟ, ಬಿಬಿಎಂಪಿಯಿಂದ ಆಪರೇಷನ್‌ ಕ್ಯಾಟ್‌!

ಬೆಂಗಳೂರು: ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು, ಬೆಕ್ಕುಗಳ ಹಾವಳಿ ನಿಯಂತ್ರಿಸುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ.

ಬೆಕ್ಕು ಹಿಡಿದು ಪುನರ್ವಸತಿ ಕಲ್ಪಿಸುವಂತೆ ರಾಜ್ಯಪಾಲರ ಕಚೇರಿಯಿಂದ ಪಶುಪಾಲನಾ ಇಲಾಖೆಗೆ ಪತ್ರ ಬರೆದಿದ್ದು, ಬಿಬಿಎಂಪಿಯಿಂದ ಆಪರೇಷನ್ ಕ್ಯಾಟ್ ಶುರುವಾಗಿದೆ ಎನ್ನಲಾಗಿದೆ.

ಬೆಕ್ಕುಗಳಿಗೂ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಿಂತನೆ

ಬೀದಿ ನಾಯಿಗಳಂತೆ ಬೆಕ್ಕುಗಳಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಚಿಂತನೆ ನಡೆಸಲಾಗಿದ್ದು, ಬೆಕ್ಕುಗಳನ್ನ ಹಿಡಿದು ಶಸ್ತ್ರಚಿಕಿತ್ಸೆ ಮಾಡಲು ಬಿಬಿಎಂಪಿಯು ತಂಡವನ್ನು ರಚಿಸುತ್ತಿದೆ ಎನ್ನಲಾಗಿದೆ. ಬೆಕ್ಕು ಕೈಯಿಗೆ ಸಿಕ್ಕರೆ ಆಪರೇಷನ್‌ ಫಿಕ್ಸ್‌ ಎನ್ನಲಾಗುತ್ತಿದೆ. (ದಿಗ್ವಿಜಯ ನ್ಯೂಸ್)