More

    ರೈತರ ಅಭ್ಯುದಯಕ್ಕೆ ಸಿದ್ಧ, ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಅಭಯ

    ನೆಲಮಂಗಲ: ಹೈನುಗಾರಿಕೆ ಅವಲಂಬಿತ ಕೃಷಿಕ ಕುಟುಂಬದ ಕಲ್ಯಾಣಕ್ಕೆ ಬಮುಲ್ ಟ್ರಸ್ಟ್ ಸಿದ್ಧವಿದೆ ಎಂದು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ತಿಳಿಸಿದರು.

    ಪಟ್ಟಣದ ಕವಾಡಿ ಮಠದ ಶ್ರೀ ವೀರಭದ್ರಸ್ವಾಮಿ ಪ್ರಾರ್ಥನಾ ಮಂದಿರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಹಾಗೂ ನೌಕರರ ಕಲ್ಯಾಣ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆಧುನಿಕತೆಯ ದಿನಗಳಲ್ಲಿ ಹೈನುಗಾರಿಕೆ ಪ್ರಬಲ ಉದ್ಯಮವಾಗಿ ಬೆಳೆಯುತ್ತಿರುವುದು ಒಂದೆಡೆಯಾದರೆ ಉದ್ಯಮ ನಂಬಿಕೊಂಡಿರುವ ರೈತಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕೇವಲ ಹೈನುಗಾರಿಕೆ ಅಭಿವೃದ್ಧಿಗಷ್ಟೆ ಸೀಮಿತವಾಗದೆ ಸಹಕಾರ ಸಂಘಗಳ ಸದಸ್ಯರು ಹಾಗೂ ನೌಕರರ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪ್ರತಿಭಾ ಪುರಸ್ಕಾರದ ಚೆಕ್ ನೀಡಲಾಗುತ್ತಿದೆ ಎಂದು ತಿಳಿಸಿದರು.

    2019-20ನೇ ಸಾಲಿನಲ್ಲಿ ತಾಲೂಕಿಗೆ ಮೀಸಲಿರಿಸಿದ್ದ 12.72 ಲಕ್ಷ ರೂ.ದಲ್ಲಿ 10.97 ಲಕ್ಷ ಅನುದಾನವನ್ನು ಪ್ರತಿಭಾ ಪುರಸ್ಕಾರವಾಗಿ ವಿತರಣೆ ಮಾಡಲಾಗುತ್ತಿದೆ. ಸಂಘದ ಸಿಬ್ಬಂದಿಗೆ ನಿವೃತ್ತಿ ಸೌಲಭ್ಯ ಜತಗೆ ಅವಲಂಬಿತರಿಗೂ ಇರುವ ಮೆಡಿಕ್ಲೈಮ್, ಸದಸ್ಯರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ಸೌಲಭ್ಯವಿದ್ದು, ಬಳಕೆ ಮಾಡಿಕೊಳ್ಳಬೇಕು ಎಂದರು.

    ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, ಗುಣಮಟ್ಟದ ಹಾಲು ಶೇಖರಣೆಯಲ್ಲಿ ಬೆಂಗಳೂರು ಹಾಲು ಒಕ್ಕೂಟ ಮುಂದಿರುವುದು ಹೆಮ್ಮೆಯ ಸಂಗತಿ. ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಅತಿಹೆಚ್ಚು ಹಾಲಿನ ದರವನ್ನು ನೀಡುತ್ತಿರುವುದು ಕೃಷಿಕರ ಕುಟುಂಬಗಳ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

    ತಾಲೂಕಿನಲ್ಲೂ ದೇಶಿಯ ಅಥವಾ ನಾಟಿ ಹಸುಗಳ ಹಾಲಿನ ಖರೀದಿ ಮಾಡಲಾಗುತ್ತಿದ್ದು, ಪ್ರತಿ ಲೀ ಹಾಲಿಗೆ 50 ರೂ.ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೊರರಾಜ್ಯಗಳಲ್ಲಿ ದೊರೆಯುವ ಸಾಹಿವಾಲ್ ತಳಿಯ ರಾಸುಗಳನ್ನು ಖರೀದಿಸಿ ರೈತರಿಗೆ ಕೊಡಲಾಗುವುದು ಎಂದು ಉಪವ್ಯವಸ್ಥಾಪಕ ಡಾ.ಎ.ಆರ್. ಗೋಪಾಲಗೌಡ ತಿಳಿಸಿದರು.

    ಪ್ರತಿಭಾ ಪುರಸ್ಕಾರ: ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಸೇರಿ ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಅಂಕ ಪಡೆದಿದ್ದ ತಾಲೂಕಿನ 326 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಮುಲ್ ಟ್ರಸ್ಟ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ಗೋಪಾಲ್ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ ಮಾಡಿದರು.

    ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ರಾಮಕೃಷ್ಣಪ್ಪ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಗಂಗಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗುರುಪ್ರಕಾಶ್, ಗುತ್ತಿಗೆದಾರ ಡಿ.ಎಚ್.ಸುರೇಶ್, ಮುಖಂಡ ಪುರುಷೋತ್ತಮ್, ವೀರಮಾರೇಗೌಡ, ಕೋಡಪ್ಪನಹಳ್ಳಿ ವೆಂಕಟೇಶ್, ವರದನಾರಾಯಣ, ವಕೀಲ ಶ್ರೀನಿವಾಸ್, ಬಮುಲ್ ಟ್ರಸ್ಟ್ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ಜಗದೀಶ್, ಸಿಇಒ ಎ.ಟಿ.ಲೋಕೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts