ತೀರ್ಥಹಳ್ಳಿ: ವಿಕಲಾಂಗ ಮಕ್ಕಳ ಕಲಿಕೆಗೆ ಪೂರಕವಾಗಿ ಸರ್ಕಾರ ತಾಲೂಕು ಕೇಂದ್ರಗಳಲ್ಲೂ ಅಗತ್ಯ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ದೇವರ ಪ್ರತಿರೂಪದಂತಿರುವ ಇಂತಹ ಮಕ್ಕಳಲ್ಲೂ ಪ್ರತಿಭೆ ಅಡಗಿದ್ದು, ಎಲ್ಲರಂತೆ ಇವರನ್ನು ಪ್ರೀತಿಯಿಂದ ಕಾಣುವುದು ಅಗತ್ಯ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಪಪಂ, ಬಿಇಒ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ವಿಕಲಾಂಗ ಮಕ್ಕಳಲ್ಲಿ ಒಂದು ವಿಶೇಷತೆ ಹಾಗೂ ಪಾಲಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಮಕ್ಕಳ ಲಾಲನೆ, ಪಾಲನೆಯಲ್ಲಿ ತೊಡಗಿರುವ ಪಾಲಕರ ಪ್ರೀತಿ, ವಾತ್ಸಲ್ಯ ವರ್ಣಿಸಲು ಶಬ್ದಗಳೇ ಇಲ್ಲ. ಅತ್ಯಂತ ಅಪರೂಪವಾದ ಈ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿದೆ ಎಂದರು.
ವಿಕಲಾಂಗ ಮಕ್ಕಳನ್ನು ಶಾಪವೆಂದು ಪರಿಗಣಿಸಬಾರದು. ದೈಹಿಕವಾಗಿ ಅಸಮರ್ಥರಾಗಿದ್ದರೂ ಅವರಲ್ಲಿ ವಿಶೇಷ ಪ್ರತಿಭೆ ಇರುವುದಕ್ಕೆ ಸಾಧ್ಯ. ಇದಕ್ಕೆ ಇಂದಿಲ್ಲಿ ಪ್ರದರ್ಶನಗೊಂಡಿರುವ ಕಲಾಕೃತಿಗಳ ಪ್ರದರ್ಶನ ಉದಾಹರಣೆಯಾಗಿದೆ. ಈ ಮಕ್ಕಳ ಆರೈಕೆ ಮತ್ತು ಕಲಿಕೆಗೆ ಪೂರಕವಾಗಿ ತಾಲೂಕಿನಲ್ಲಿ ವ್ಯವಸ್ಥಿತವಾದ ಸೌಲಭ್ಯ ಕಲ್ಪಿಸಲು ಶಾಸಕರ ಸಹಕಾರ ಪಡೆದು ದಾನಿಗಳ ನೆರವಿನೊಂದಿಗೆ ಪ್ರಯತ್ನಿಸೋಣ. ಎಂದು ಹೇಳಿದರು.
ಉಪನ್ಯಾಸಕ ಡಾ. ರಾಹುಲ್ ದೇವರಾಜ್, ಪಪಂ ಅಧ್ಯಕ್ಷ ರಹಮತ್‌ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಬಿಇಒ ವೈ.ಗಣೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ, ಮಹಾಬಲೇಶ್ವರ ಹೆಗ್ಡೆ, ಶಿಕ್ಷಕರ ಸಂಘದ ಜಿ.ಕೆ.ಗಿರಿರಾಜ್, ಬಿ.ರಾಮು, ಕೆ.ವಿ.ಪುಟ್ಟಪ್ಪ ಉಪಸ್ಥಿತರಿದ್ದರು.
ವಿಕಲಾಂಗ ಮಕ್ಕಳ ಪಾಲನೆ ಶ್ಲಾಘನೀಯ

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping
sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…
ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water
coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…
ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife
Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…