ಬೆಂಗಳೂರು: ಮಳೆಗಾಲದಲ್ಲಿ ಮುಖದ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆಯಿದೆ. ಹೆಚ್ಚಿನ ಜನರು ಮೊಡವೆ ಮತ್ತು ಮಂದ ಚರ್ಮದ ಸಮಸ್ಯೆಯನ್ನು ಹೊಂದಿರುತ್ತಾರೆ. ನೀವು ಕೂಡಾ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಾವು ನಿಮಗೆ ಸುಲಭವಾದ ಸಲಹೆ ನೀಡುತ್ತೇವೆ.
ಬೇವಿನಎಲೆ ನೀರಿನಿಂದ ಮುಖವನ್ನು ತೊಳೆಯುವುದು ಹಾಗೂ ಬೇವಿನಎಲೆಯ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದು ಹಾಗೂ ಮೊಡವೆ, ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ. ಬೇವಿನ ಎಲೆಗಳನ್ನು ಕುದಿಸಿ, ಅದರ ನೀರನ್ನು ಉಳಿಸಿ ಮತ್ತು ನಿಮ್ಮ ಮುಖವನ್ನು ತೊಳೆಯಿರಿ. ಬೇಸಿಗೆ ಮತ್ತು ಮಳೆಗಾಲದಲ್ಲಿ ಸ್ನಾನಕ್ಕೆ ಬೇವಿನ ಎಲೆಯ ನೀರನ್ನು ಬಳಸುವುದು ಸಹ ಪ್ರಯೋಜನಕಾರಿಯಾಗಿದೆ.
ವೀಳ್ಯದೆಲೆಯ ನೀರಿನಿಂದ ಪ್ರತಿದಿನ ನಿಮ್ಮ ಮುಖವನ್ನು ತೊಳೆಯಬಹುದು, ಇದು ಮುಖದ ದದ್ದುಗಳು, ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತುರಿಕೆಯಿಂದ ಪರಿಹಾರವನ್ನು ನೀಡುತ್ತದೆ.
ಪುಲಾವ್ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮದ ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಮತ್ತು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ.
ತುಳಸಿ ಎಲೆಯನ್ನು ನೀರಿನಲ್ಲಿ ಮುಖ ತೊಳೆಯುವುದರಿಂದ ಮುಖದ ಆರೋಗ್ಯ ಹಾಗೂ ಚರ್ಮದ ಆರೋಗ್ಯ ಸುಧಾರಿಸುತ್ತದೆ.
ನನ್ನ ಆಟೋದಲ್ಲಿ ಪ್ರಯಾಣಿಸಿ.. ನನಗೆ ಹಣ ಬೇಡ ವಯನಾಡು ಜನರಿಗೆ ಸಹಾಯ ಮಾಡಿ ಎಂದ ಮಹಿಳೆ