More

    ಮಳೆ, ಗಾಳಿಗೆ ನೆಲಕಚ್ಚಿದ ಬಾಳೆ

    ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ-ಗಾಳಿಗೆ ಕೋಳಿ ಫಾಮ್ರ್ ಶೆಡ್​ನ ಶೀಟ್​ಗಳು ಬಿದ್ದು ಕೋಳಿಗಳು ಮೃತಪಟ್ಟಿವೆ. ಇದೇ ಗ್ರಾಮದಲ್ಲಿ ಬಾಳೆ ಬೆಳೆಗೂ ಅಪಾರ ಹಾನಿಯಾಗಿದೆ.
    ಟೋಪಣ್ಣ ಲಮಾಣಿ ಎಂಬುವರ ಕೋಳಿ ಫಾಮ್ರ್ ಇದಾಗಿದ್ದು, ಜೋರಾಗಿ ಬೀಸಿದ ಗಾಳಿಗೆ ಶೀಟ್​ಗಳು ಬಿದ್ದು ಫಾಮರ್್​ನ ಒಳಗೆ ನೀರು ಹೊಕ್ಕು 210 ಕೋಳಿಗಳು ಮೃತಪಟ್ಟಿವೆ.
    ಇದೇ ಗ್ರಾಮದ ಶಿವಾಜಿ ಲಮಾಣಿ ಎಂಬುವರ 2 ಎಕರೆಯಲ್ಲಿ ಬೆಳೆದ ಬಾಳೆ ಗಿಡಗಳು ನೆಲಕಚ್ಚಿವೆ ಮತ್ತು ನಾಗಪ್ಪ ಕದಂ ಎಂಬುವರ ಜಮೀನಿನಲ್ಲಿರುವ ದನದ ಕೊಟ್ಟಿಗೆ ಮೇಲ್ಚಾವಣಿ ಶೀಟ್ ಮಳೆ-ಗಾಳಿಗೆ ಹಾರಿ ಹೋಗಿ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


    ಬ್ಯಾಂಕ್ ಮತ್ತು ಇನ್ನಿತರ ಮೂಲಗಳಿಂದ ಸಾಲ ಪಡೆದು ಸುಮಾರು ಮೂರು ವರ್ಷಗಳಿಂದ ತುಂಬಾ ಕಷ್ಟಪಟ್ಟು ಕೋಳಿ ಸಾಕಣೆ ಮಾಡಿದ್ದೆ. ಕಳೆದ ವರ್ಷದ ಕರೊನಾದಿಂದ ಸುಮಾರು 3000 ಕೋಳಿಗಳನ್ನು ಮಣ್ಣಿನಲ್ಲಿ ಮುಚ್ಚಲಾಗಿತ್ತು. ಆಗ ನನಗೆ ಸುಮಾರು 12 ಲಕ್ಷ ರೂ. ಹಾನಿಯಾಗಿತ್ತು. ಈ ಬಾರಿಯೂ ಮತ್ತೆ ಲಕ್ಷಾಂತರ ರೂ. ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
    | ಟೋಪಣ್ಣ ಲಮಾಣಿ, ಕೋಳಿ ಫಾಮರ್್​ನ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts