ಒಳಚರಂಡಿಗೆ ಮಳೆ ನೀರು ಹರಿದರೂ ಮಂಗಳೂರು ಮಹಾನಗರ ಪಾಲಿಕೆ ಮೌನ

ಮಂಗಳೂರು: ನಗರದಲ್ಲಿ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇದೆ. ಆದರೂ ಮಂಗಳೂರಿನ ನೂರಾರು ಮನೆ/ವಸತಿ ಸಮುಚ್ಚಯದವರು ಶೌಚಾಲಯದ ನೀರು ಹರಿಯುವ ಒಳಚರಂಡಿಗೆ ಮಳೆ ನೀರು ಜೋಡಣೆ ಮಾಡಿದ್ದಾರೆ. ಇದರಿಂದಾಗಿ ನಗರದ ವಿವಿಧೆಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಗಲೀಜು ನೀರು ಹರಿಯತೊಡಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕೆಲವರು ತಮ್ಮ ಹಿತ್ತಲಿನ ಮತ್ತು ಮನೆಯ ಸುತ್ತಮುತ್ತ ಬೀಳುವ ಮಳೆ ನೀರನ್ನು ನಗರದ ಒಳಚರಂಡಿಗೆ ಜೋಡಿಸಿದ್ದಾರೆ. ಹೀಗಾಗಿ ಮಂಗಳೂರಿನ ವಿವಿಧ ಮ್ಯಾನ್‌ಹೋಲ್‌ಗಳು ತೆರೆದು ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. … Continue reading ಒಳಚರಂಡಿಗೆ ಮಳೆ ನೀರು ಹರಿದರೂ ಮಂಗಳೂರು ಮಹಾನಗರ ಪಾಲಿಕೆ ಮೌನ