ಸಿರಗುಪ್ಪ: ತಾಲೂಕಿನ ತೆಕ್ಕಲಕೋಟೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೆನೆದಿದ್ದ 2 ಮನೆಗಳ ಛಾವಣಿ ಸೋಮವಾರ ಕುಸಿದಿವೆ.
9ನೇ ವಾರ್ಡ್‌ನ ರಾಮಲಿಂಗಮ್ಮ ಹಾಗೂ 12ನೇ ವಾರ್ಡ್‌ನ ಶೇಕಪ್ಪ ಅವರ ಮನೆಯ ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ಶಂಶಾಲಂ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಕಂದಾಯ ನಿರೀಕ್ಷಕ ಸುರೇಶ್ ಬಾಬು, ಗ್ರಾಮ ಆಡಳಿತಾಧಿಕಾರಿ ಶಿವರಾಜ ಇದ್ದರು.