ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಕಳಸ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಕಳಸದಲ್ಲಿ ಮಂಗಳವಾರ ಜೋರಾಗಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ.

ಮೂರು ದಿನಗಳಿಂದ ಮಧ್ಯಾಹ್ನದ ನಂತರ ಮೋಡಗಳು ಉಂಟಾಗಿ ಇನ್ನೇನು ಮಳೆ ಸುರಿಯಬೇಕು ಅನ್ನುವಷ್ಟರಲ್ಲಿ ಮೋಡಗಳು ಮರೆಯಾಗುತ್ತಿದ್ದವು. ಕಳಸ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭರ್ಜರಿ ಮಳೆ ಸುರಿದು ಕಳಸ ನಿವಾಸಿಗಳಿಗೆ ನಿರಾಸೆ ತರುತ್ತಿತ್ತು. ಆದರೆ ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಜೋರಾಗಿ ಮಳೆ ಸುರಿದು ಮಂದಹಾಸ ಮೂಡಿಸಿದೆ. ಈಗ ಸುರಿಯುವ ಮಳೆ ಅಡಕೆ, ಕಾಫಿ ಹೂವಾಗಲು, ಮೆಣಸು ಬಳ್ಳಿಗಳಿಗೆ ಅವಶ್ಯಕ. ದೊಡ್ಡ ಕಾಫಿ ಬೆಳೆಗಾರರಿಗೆ ಪ್ರತಿದಿನ ತೋಟಕ್ಕೆ ನೀರುಣಿಸಲು ಸಾವಿರಾರು ರೂಪಾಯಿ ವ್ಯಯವಾಗುತ್ತಿತ್ತು. ಇದೀಗ ಹೋಬಳಿಯಾದ್ಯಂತ ಮಳೆ ಸುರಿದಿರುವುದು ಅನುಕೂಲವಾಗಿದೆ.