ತೊಗರಿ ಕಣಜಕ್ಕೆ ಮಳೆ ಕೊರತೆ ಹೊಡೆತ

blank

ಒಣಗಿದ ಸಾವಿರಾರು ಹೆಕ್ಟೇರ್ ಬೆಳೆ | ನೆಟೆರೋಗ ಅಲ್ಲ ಎಂದ ತಜ್ಞರು | ಶೇ.೧೫-೨೦ ಹಾನಿ ಸಾಧ್ಯತೆ

ಬಾಬುರಾವ ಯಡ್ರಾಮಿ ಕಲಬುರಗಿ
ಕೆಲವೆಡೆ ಹೂವಾಡುವ, ಕಾಯಿ ಕಟ್ಟುವ ಹಂತದಲ್ಲಿರುವ ತೊಗರಿಗೆ ಭಾರಿ ಸಂಕಷ್ಟ ಎದುರಾಗಿದೆ. ನವೆಂಬರ್‌ನಲ್ಲಿ ಶೇ.೭೭ ಮಳೆ ಕೊರತೆಯಿಂದಾಗಿ ಕಲಬುರಗಿ ಜಿಲ್ಲೆ ಸೇರಿ ವಿವಿಧೆಡೆ ಬೆಳೆದಿರುವ ಬೆಳೆ ಒಣಗಲು ಶುರುವಿಟ್ಟಿದೆ. ಕಳೆದೆರಡು ದಿನಗಳಿಂದ ಮೋಡ ಕವಿದಿದ್ದರೂ ವರುಣ ಧರೆಗಿಳಿದಿಲ್ಲ. ಜತೆಗೆ ಶುಷ್ಕ ವಾತಾವರಣ ತೀವ್ರಗೊಳ್ಳುತ್ತಿರುವುದು ರೈತರನ್ನು ಇನ್ನಷ್ಟು ಕಂಗೆಡುವAತೆ ಮಾಡಿದೆ.
ಜಮೀನಿನಲ್ಲಿ ನಿರೀಕ್ಷೆಗೂ ಮೀರಿ ಆಳೆತ್ತರಕ್ಕೆ ಹುಲುಸಾಗಿ ಬೆಳೆದಿರುವ ತೊಗರಿ ಉತ್ತಮ ಇಳುವರಿಯೊಂದಿಗೆ ಜೇಬು ತುಂಬಲಿದೆ ಎಂಬ ಖುಷಿಯಲ್ಲಿದ್ದ ರೈತರಿಗೆ ಮಳೆಯಾಗದೆ ನೀಡಿದ ಹೊಡೆತದಿಂದಾಗಿ ಮುಖ ಕಪ್ಪಿಡಲು ಶುರುವಾಗಿದೆ. ಇರುವ ಬೆಳೆಯನ್ನಾದರೂ ಉಳಿಸಿಕೊಳ್ಳಲು ಇನ್ನಿಲ್ಲದ ಹೈರಾಣ ಆಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಜಿಲ್ಲೆಯಲ್ಲಿ ಮುಂಗಾರಿನ ೬.೨೨ ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ನೆರೆ ಜಿಲ್ಲೆಗಳಾದ ಬೀದರ್, ಯಾದಗಿರಿ, ರಾಯಚೂರು, ವಿಜಯಪುರಗಳಲ್ಲಿ ಮೂರು ೩ ಲಕ್ಷಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಬೆಳೆದಿದ್ದು, ಎಲ್ಲೆಡೆ ಮಳೆಯ ಹೆಚ್ಚು ಕೊರತೆ ರೈತರನ್ನು ಚಿಂತೆಗೀಡು ಮಾಡಿದೆ. ನೀರಾವರಿ ಪ್ರದೇಶದಲ್ಲಿ ಒಣಗುತ್ತಿರುವುದು ಕಂಡುಬAದಿಲ್ಲ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.
ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಿAದಲೇ ಮಳೆ ಕೊರತೆ ಕಾಣಿಸುತ್ತಿದೆ. ಆ ತಿಂಗಳಲ್ಲಿ ಶೇ.೪, ಅಕ್ಟೋಬರ್‌ನಲ್ಲಿ ಶೇ.೭ ಹಾಗೂ ಒಮ್ಮೆಲೆ ನವೆಂಬರ್‌ನಲ್ಲಿ ಶೇ.೭೧ ಮಳೆ ಕೊರತೆಯಾಗಿದೆ. ಇದರಿಂದ ಭೂಮಿಯಲ್ಲಿ ತೇವಾಂಶ ಇಲ್ಲದೆ ತೊಗರಿ ಒಣಗಲಾರಂಭಿಸಿದೆ. ಆದರೆ ಇದು ನೆಟೆ ರೋಗವಲ್ಲ, ಇದೊಂಥರಅನಾವೃಷ್ಟಿ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ. ಕೃಷಿ ಇಲಾಖೆ ಅಧಿಕಾರಿಗಳು ಸಹ ಇದು ನೆಟೆ ಅಲ್ಲ ಎನ್ನುತ್ತಿದ್ದಾರೆ. ಆದರೆ ರೈತರನ್ನು ಮಾತನಾಡಿಸಿದಾಗ ತಮ್ಮ ಹೊಲದಲ್ಲಿ ತೊಗರಿಗೆ ನೆಟೆ ಹೊಡೆದಿದೆ ಎಂದು ನೋವಿನಿಂದ ಹೇಳಿಕೊಳ್ಳುತ್ತಿದ್ದಾರೆ.
ಸದ್ಯ ಶೇ.೧೫-೨೦ ತೊಗರಿ ಬೆಳೆ ಫಂಗಸ್ ಹಾವಳಿಯಿಂದಾಗಿ ಹಾಳಾಗುವಂತಿದೆ. ಕಲಬುರಗಿ ಜಿಲ್ಲೆಯೊಂದರರಲ್ಲೇ ೮೦-೯೦ ಸಾವಿರ ಹೆಕ್ಟೇರ್ ತೊಗರಿ ಹಾನಿಯಾಗುವ ಅಂದಾಜಿದೆ. ಹೀಗಾಗಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆ ಜೋರಾಗಿದೆ.

ಶಿಲೀಂಧ್ರ ದಾಳಿ ಒಣಬೇರು ಕೊಳೆ ರೋಗ
ಭೂಮಿಯಲ್ಲಿ ತೇವಾಂಶ ಕೊರತೆ ಹೆಚ್ಚಾದಾಗ ತೊಗರಿ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳಲು ಶುರುವಾಗುತ್ತದೆ. ಈ ವೇಳೆ ವಾತಾವರಣದಲ್ಲಿರುವ ಮ್ಯಾಕ್ರೋಪೋಮಿಯಾ ಫೆಜಿಯೋಲೈ ಎಂಬ ಶಿಲೀಂಧ್ರ ಬೆಳೆ ಮೇಲೆ ದಾಳಿ ಮಾಡುತ್ತದೆ. ಇದರಿಂದಾಗಿ ತೊಗರಿಗೆ ಒಣಬೇರು ಕೊಳೆ ರೋಗ ಕಾಣಿಸಿಕೊಂಡಿದೆ. ಅಲ್ಲಲ್ಲಿ ಫೈಟೋಪ್ಲೋರಾ ರೋಗ ಸಹ ಕಾಣಿಸಿದ್ದರಿಂದ ಒಣಗುತ್ತಿದೆ.

ಜಂಟಿ ಸಮೀಕ್ಷೆಗೆ ಆದೇಶ
ಜಿಲ್ಲೆಯಲ್ಲಿ ತೊಗರಿ ಬೆಳೆ ಒಣಗಿ ಆಗಿರುವ ಹಾನಿ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸರ್ಕಾರ ಆದೇಶಿಸಿದ್ದು, ಇನ್ನೆರಡು ದಿನಗಳಲ್ಲಿ ಸರ್ವೇ ಶುರುವಾಗುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹಾಗೂ ಕೃಷಿ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಳಂದ ತಾಲೂಕಿನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಒಣಗಿದ್ದರಿಂದ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಸಹ ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಆರಂಭಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಒಣಗುತ್ತಿರುವುದು ಕಂಡು ಬಂದಿದೆ. ಆದರೆ ಇದು ನೆಟೆ ರೋಗವಲ್ಲ ಎಂದು ಕೃಷಿ ವಿಜ್ಞಾನಿಗಳು ಹೇಳಿದ್ದಾರೆ. ರಾಯಚೂರು ಕೃಷಿ ವಿವಿ ಕುಲಪತಿ ಹಾಗೂ ವಿಜ್ಞಾನಿಗಳ ಜತೆ ಮಾತನಾಡಿದ್ದು, ಶೀಘ್ರವೇ ಭೇಟಿ ನೀಡಿ ಬೆಳೆ ಪರಿಶೀಲಿಸಿ ವರದಿ ನೀಡಲಿದ್ದಾರೆ. ಜಂಟಿ ಸಮೀಕ್ಷೆಗೂ ಸೂಚಿಸಲಾಗಿದೆ.
| ಪ್ರಿಯಾಂಕ್ ಖರ್ಗೆ
ಜಿಲ್ಲಾ ಉಸ್ತುವಾರಿ ಸಚಿವ

ಮಳೆ ಮತ್ತು ಭೂಮಿಯಲ್ಲಿನ ತೇವಾಂಶ ಕೊರತೆಯಿಂದಾಗಿ ತೊಗರಿಗೆ ಮ್ಯಾಕ್ರೋಫೋಮಿನಾ ಫೆಜಿಯೋಲೈ ಹಾಗೂ ಫೈಟೋಪ್ಲೋರಾ ಶಿಲೀಂಧ್ರ ದಾಳಿ ಮಾಡಿದ್ದರಿಂದ ಬೆಳೆಗಳು ಒಣಗುತ್ತಿವೆ. ನಿಯಂತ್ರಿಸಲು ರೈತರಿಗೆ ಕೆಲವೊಂದು ಸಲಹೆ ನೀಡಲಾಗಿದೆ. ಕಾಯಿ ಕಟ್ಟುವ ಹಂತದಲ್ಲಿ ಹೀಗಾಗಿದ್ದು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
| ಸಮದ್ ಪಟೇಲ್
ಜಂಟಿ ಕೃಷಿ ನಿರ್ದೇಶಕ

TAGGED:
Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…