ಮಹಾರಾಷ್ಟ್ರದಲ್ಲಿ ಮುಂದುವರಿದ ಭಾರೀ ಮಳೆ: ಶತಕ ದಾಟಿದ ಸಾವಿನ ಸಂಖ್ಯೆ!

ಮುಂಬೈ: ಮಹಾರಾಷ್ಟ್ರದಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಮಳೆಯಿಂದಾದ ಅನಾಹುತದಿಂದಾಗಿ ಸಾವಿನ ಸಂಖ್ಯೆ 100ಕ್ಕೆ ದಾಟಿದೆ ಎಂದು ವಿಪತ್ತು ನಿರ್ವಹಣಾ ಪಡೆ ನೀಡಿದ ವರದಿಯಲ್ಲಿ ತಿಳಿಸಲಾಗಿದೆ. ಜೂನ್​ 1 ರಿಂದ ಈವರೆಗೆ 102 ಮಂದಿ ಮೃತಪಟ್ಟಿದ್ದು, ನಿನ್ನೆ ಒಂದೇ ದಿನದಲ್ಲಿ ಮೂವರು ಮೃತಪಟ್ಟಿರುವುದು ವರದಿಯಾಗಿದೆ. ಬುಲ್ಧಾನಾ, ನಾಸಿಕ್​ ಮತ್ತು ನಂದುಬಾರ್​ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭೂ ಕುಸಿತ, ಮರಗಳು ಉರುಳಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದು, 20 ಹಳ್ಳಿಗಳು ಸಂಪೂರ್ಣ … Continue reading ಮಹಾರಾಷ್ಟ್ರದಲ್ಲಿ ಮುಂದುವರಿದ ಭಾರೀ ಮಳೆ: ಶತಕ ದಾಟಿದ ಸಾವಿನ ಸಂಖ್ಯೆ!