ಸಿನಿಮಾ

ಮೇ.24ರವರೆಗೆ ಜಿಲ್ಲೆಯಲ್ಲಿ ತುಂತುರು ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

ಮಂಡ್ಯ: ಜಿಲ್ಲೆಯಲ್ಲಿ ಮೇ.24ರವರೆಗೆ ಗರಿಷ್ಟ 36 ಡಿಗ್ರಿ ಮತ್ತು ಕನಿಷ್ಟ 19 ಡಿಗ್ರಿ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಇನ್ನು ಈ ಅವಧಿಯಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಂಭವವಿದೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ನೀಡಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ 2 ರಿಂದ 4 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಇನ್ನು ಭತ್ತಕ್ಕೆ ಕುತ್ತಿಗೆ ಬೆಂಕಿರೋಗ ಹರಡುವ ಸಾಧ್ಯತೆ ಇರುವುದರಿಂದ ತೆನೆಯ ಕೆಳಭಾಗದಲ್ಲಿ ಕತ್ತಿನ ಮೇಲೆ ಕಪ್ಪು ಅಥವಾ ಕಂದು ಬಣ್ಣದ ಮಚ್ಚೆ ಕಾಣಿಸಿಕೊಂಡು ತೆನೆ ಜೊಳ್ಳಾಗುತ್ತದೆ. ಕೆಲ ಸಂದರ್ಭದಲ್ಲಿ ಕತ್ತಿನ ಭಾಗ ಮುರಿದು ತೆನೆ ಜೋತು ಬೀಳಲಿದೆ. ಆದ್ದರಿಂದ ರೋಗ ಕಾಣಿಸಿಕೊಂಡಲ್ಲಿ ಬೆವಿಸ್ಟಿನ್ 1 ಗ್ರಾಂ ಔಷಧವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದೆ.
ಇನ್ನು ಅರಿಶಿಣಕ್ಕೆ ಗಡ್ಡೆ ಕೊಳೆ ರೋಗ ಹರಡುವ ಬಹುದಿದ್ದು, ಬಿತ್ತನ ಕೊಂಬುಗಳನ್ನು ಶೇ.0.3 ಮ್ಯಾಂಕೊಜೆಬ್ ಅಥವಾ 3 ಗ್ರಾಂ ಕ್ಯಾಪ್ಟನ್, 0.5 ಗ್ರಾಂ ಸ್ಟ್ರೆಪ್ಟೊಸೈಕ್ಲಿನ್, 2 ಮಿ.ಲೀ ಕ್ಲೋರೋಪೈರಿಫಾಸ್ ಒಂದು ಲೀಟರ್ ನೀರಿನಲ್ಲಿ ಹಾಕಿದ ಮಿಶ್ರಣದಲ್ಲಿ ಅರಿಶಿಣದ ಗಡ್ಡೆಗಳನ್ನು 4 ರಿಂದ 8 ಗಂಟೆ ನೆನೆಸಬೇಕು. ಇದರಿಂದ ಗಡ್ಡೆ ಕೊಳೆಯುವುದು ಹಾಗೂ ಗಡ್ಡೆ ಕೊರಕ ಭಾದೆಯಿಂದ ನಿಯಂತ್ರಿಸಬಹುದಾಗಿದೆ. ಅಂತೆಯೇ ಟೊಮ್ಯಾಟೋಗೆ ಅಂಗಮಾರಿ ರೋಗ ಬರುವ ಸಾಧ್ಯತೆ ಇರುವುದರಿಂದ ಎಲೆಗಳ ಕೆಳಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ಶಿಲೀಂಧ್ರವು ಕಾಣಿಸುತ್ತದೆ. ರೋಗ ಉಲ್ಭಣಗೊಂಡಾಗ ಗಿಡ ಒಣಗುತ್ತದೆ. ಇದರ ಹತೋಟಿಗಾಗಿ ಶಿಲೀಂಧ್ರ ನಾಶಕವಾದ 2.5 ಗ್ರಾಂ ಕ್ಯಾಪ್ಟನ್, 50 ಡಬ್ಲುೃಪಿ ಅಥವಾ 2.5 ಗ್ರಾಂ ಕ್ಯಾಪ್ಟನ್ 5 ಡಬ್ಲುೃಪಿ ಅಥವಾ 2.5 ಗ್ರಾಂ ಆಕ್ಸಿಕ್ಲೋರೈಡ್ ಶೇ.50 ಡಬ್ಲುೃಪಿ, ಎಕರೆಗೆ 300 ಲೀ ಸಿಂಪರಣಾ ದ್ರಾವಣದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

Latest Posts

ಲೈಫ್‌ಸ್ಟೈಲ್