18.5 C
Bangalore
Monday, December 16, 2019

ನಿಲ್ಲದ ಯಾತ್ರಿಕರ ಸಂಕಷ್ಟ

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ನವದೆಹಲಿ: ನಿರಂತರವಾಗಿ ಸುರಿಯುತ್ತಿರುವ ಮಳೆ, ವಿವಿಧ ಅವಗಢದಿಂದಾಗಿ ಭಾರತದ 1,500ಕ್ಕೂ ಅಧಿಕ ಮಾನಸಸರೋವರ ಯಾತ್ರಿಕರು ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ 300ಕ್ಕೂ ಅಧಿಕ ಕನ್ನಡಿಗರಿದ್ದಾರೆ. ಕೈಲಾಸ ಮಾನಸಸರೋವರ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದಾಗ ಹವಾಮಾನ ವೈಪರೀತ್ಯ ಉಂಟಾಗಿದೆ. ಹೀಗಾಗಿ ನೇಪಾಳದ ಹಿಲ್ಸಾ ಮತ್ತು ಸಿಮಿಕೋಟ್​ನಲ್ಲಿ ಸಾವಿರಾರು ಯಾತ್ರಿಕರು ಕಳೆದ ಮೂರ್ನಾಲ್ಕು ದಿನಗಳಿಂದ ತೊಂದರೆ ಎದುರಿಸುತ್ತಿದ್ದಾರೆ. ಮೈಕೊರೆಯುವ ಚಳಿ ಜತೆಗೆ ಆಹಾರದ ಕೊರತೆಯೂ ಎದುರಾಗಿದೆ. ಕುಡಿಯುವ ನೀರಿಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಇದೆ.

ಕೇಂದ್ರದ ಅಭಯ: ಯಾತ್ರಿಕರ ನೆರವಿಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸಿಮಿಕೋಟ್​ನಲ್ಲಿ 525, ಹಿಲ್ಸಾದಲ್ಲಿ 550 ಮತ್ತು ಟಿಬೆಟ್​ನಲ್ಲಿ 500 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರನ್ನು ರಕ್ಷಿಸಲು ನೇಪಾಳ ಸೇನಾ ಹೆಲಿಕಾಪ್ಟರ್​ಗಳ ನೆರವು ಕೇಳಲಾಗಿದೆ’ ಎಂದಿದ್ದಾರೆ.

ಮಂಡ್ಯ ಯಾತ್ರಿಕರು ಸುರಕ್ಷಿತ: ಮಾನಸಸರೋವರ ಯಾತ್ರೆಗೆ ತೆರಳಿರುವ ಮಂಡ್ಯ ಜಿಲ್ಲೆಯ 35ಕ್ಕೂ ಹೆಚ್ಚು ಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇನ್ನೂ ತೀರದ ಯಾತ್ರಾರ್ಥಿಗಳ ಸಂಕಷ್ಟ!

ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ 300ಕ್ಕೂ ಅಧಿಕ ಕನ್ನಡಿಗರು ಹವಾಮಾನ ವೈಪರೀತ್ಯದಿಂದಾಗಿ ನೇಪಾಳದ ಹಿಲ್ಸಾ ಮತ್ತು ಸಿಮಿಕೋಟ್​ನಲ್ಲಿ ಮೂರ್ನಾಲ್ಕು ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಕೊರೆಯುವ ಚಳಿ, ಆಹಾರದ ಕೊರತೆ, ದುಬಾರಿಯಾಗಿರುವ ಕುಡಿಯುವ ನೀರು ಮೊದಲಾದ ಹಲವು ಸಮಸ್ಯೆಗೆ ತುತ್ತಾಗಿದ್ದಾರೆ.

ಕೈಲಾಸ, ಮಾನಸ ಸರೋವರಕ್ಕೆ ರಸ್ತೆ ಮೂಲಕ ಅಥವಾ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಬಹುದು. ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಿದ್ದ 200ಕ್ಕೂ ಅಧಿಕ ಯಾತ್ರಾರ್ಥಿಗಳು ಹಿಲ್ಸಾ ಮತ್ತು ಸಿಮಿಕೋಟ್​ನಲ್ಲಿ ಸಿಲುಕಿದ್ದಾರೆ. ಹಿಲ್ಸಾದಿಂದ ಸಿಮಿಕೋಟ್​ಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿ, ಅಲ್ಲಿಂದ 14 ಆಸನದ ಸಾಮರ್ಥ್ಯದ ಲಘು ವಿಮಾನದಲ್ಲಿ ನೇಪಾಳಗಂಜ್ ತಲುಪಿ, ರಸ್ತೆ ಮೂಲಕ ಲಕ್ನೌ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕು. ಆದರೆ ಜೂ.1ರಿಂದಲೇ ಹಿಲ್ಸಾ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಮಂಜು ಮುಸುಕಿದ ವಾತಾವರಣವಿದ್ದು, ಹೆಲಿಕಾಪ್ಟರ್ ಹಾರಾಟ ರದ್ದುಗೊಳಿಸಿದ್ದರಿಂದ ಹಿಲ್ಸಾ ಪ್ರದೇಶದಲ್ಲೇ ಹೆಚ್ಚಿನ ಯಾತ್ರಾರ್ಥಿಗಳು ಸಿಲುಕಿದ್ದಾರೆ.

ಮೈಕೊರೆಯುವ ಚಳಿ!: ಕರ್ನಾಟಕದಿಂದ ಶಂಕರ ಯಾತ್ರಾ, ಅಕ್ಕಾ ಅಡ್ವೆಂಚರ್ ಹೀಗೆ ದೇಶಾದ್ಯಂತದಿಂದ 10ಕ್ಕೂ ಅಧಿಕ ಪ್ರವಾಸಿ ಏಜೆನ್ಸಿ ಮೂಲಕ ಯಾತೆ್ರಗೆ ಬಂದ ನೂರಾರು ಜನ ತೊಂದರೆಗೆ ಸಿಲುಕಿದ್ದೇವೆ. ಭಾನುವಾರ ಕೆಲ ಹೆಲಿಕಾಪ್ಟರ್ ಹಾರಾಟ ನಡೆಸಿದರೂ, ಸೋಮವಾರ ಒಂದೂ ಬರಲಿಲ್ಲ. ಮಂಗಳವಾರ ಮತ್ತೆ ಹೆಲಿಕಾಪ್ಟರ್ ಹಾರಾಟ ಪ್ರಾರಂಭವಾಗಿದ್ದು, ನಮ್ಮ ಸರದಿಗೆ ಕಾಯುತ್ತಿದ್ದೇವೆ. ಹಿಲ್ಸಾದಲ್ಲಿ ಒಂದೇ ಹೋಟೆಲ್ ಇದ್ದು, ಸಿಗುವ ಆಹಾರ ಸೇವಿಸುತ್ತಿದ್ದೇವೆ. ಕುಡಿಯುವ ನೀರೂ ಬಹಳ ದುಬಾರಿ. ಹೆಚ್ಚಿನ ಸದಸ್ಯರು 60 ವರ್ಷ ಮೀರಿದವರಾಗಿದ್ದು, ಚಳಿ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಮಂಗಳವಾರ ಲಕ್ನೌನಿಂದ ನಮಗೆ ವಿಮಾನವಿತ್ತು. ಆದರೆ ನಾವಿನ್ನೂ ಹಿಲ್ಸಾದಲ್ಲೇ ಸಿಲುಕಿದ್ದೇವೆ ಎಂದು ಬೆಂಗಳೂರಿನ ಗಿರಿನಗರದ ನಾಗರಾಜ್ ‘ವಿಜಯವಾಣಿ’ ಜತೆ ಸಮಸ್ಯೆ ಹಂಚಿಕೊಂಡರು.

ಮಂಡ್ಯದ ಯಾತ್ರಿಗಳು ಸುರಕ್ಷಿತ

ಮಾನಸ ಸರೋವರ ಯಾತ್ರೆಗೆ ತೆರಳಿರುವ ಮಂಡ್ಯ ಜಿಲ್ಲೆಯ 35ಕ್ಕೂ ಹೆಚ್ಚು ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಮಳವಳ್ಳಿ ತಾಲೂಕಿನ ಹಲಗೂರು ಸೇರಿ ವಿವಿಧೆಡೆಯಿಂದ ತೆರಳಿದ್ದರು. ಪ್ರವಾಸಕ್ಕೆ ತೆರಳಿರುವ ಸ್ನೇಹಿತ ಮಂಜುನಾಥ್​ಗೆ ಹಲಗೂರಿನ ಅನಿಲ್ ಎಂಬುವರು ಕರೆ ಮಾಡಿದಾಗ, ‘ಸುರಕ್ಷಿತವಾಗಿದ್ದೇವೆ’ ಎಂದು ಹೇಳಿರುವುದಾಗಿ ಮಾಹಿತಿ ನೀಡಿದರು. ಮಂಜುನಾಥ್ ಬಳಿ ಬಿಎಸ್​ಎನ್​ಎಲ್ ಸಿಮ್ ಇದ್ದಿದ್ದರಿಂದ ಸಂಪರ್ಕ ಸಾಧ್ಯವಾಗಿದೆ.

ಮಾನಸ ಸರೋವರ ಯಾತ್ರಿಕರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗಿದ್ದು, ಎಲ್ಲರೂ ಕ್ಷೇಮವಾಗಿದ್ದಾರೆ. ರಾಯಭಾರಿ ಕಚೇರಿ ಮೂಲಕ ನೇಪಾಳದ ಸಂಪರ್ಕದಲ್ಲಿದ್ದು, ರಕ್ಷಣೆ ಮಾಡಿರá-ವವರಿಗೆ ಊಟ, ನೀರು, ಔಷಧ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ +977-9823 672371 ಸಂಖ್ಯೆಗೆ ಸಂರ್ಪಸಬಹುದು.

| ಅಭಿರಾಮ್ ಬಿ. ಶಂಕರ್ ಜಿಲ್ಲಾಧಿಕಾರಿ, ಮೈಸೂರು

ಕಂಟ್ರೋಲ್ ರೂಂ ಸ್ಥಾಪನೆ

ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈಗಾಗಲೇ ಕಾರ್ಯನಿರತವಾಗಿದ್ದು, ಮಂಗಳವಾರ ಸಿಮಿಕೋಟ್​ನಿಂದ 104 ಮಂದಿಯನ್ನು ನೇಪಾಳಗಂಜ್​ಗೆ ಕರೆತರಲಾಗಿದೆ. ಕರ್ನಾಟಕದ ಯಾತ್ರಾರ್ಥಿಗಳ ಸಮಸ್ಯೆಗೆ ಸ್ಪಂದಿಸಲು ದೆಹಲಿಯ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಜತೆಗೆ ನೇಪಾಳಗಂಜ್, ಲಕ್ನೌಗೆ ತಲಾ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ.

ಒಂದೇ ಏಜೆನ್ಸಿಯಿಂದ 250 ಮಂದಿ

ಶ್ರೀ ಶಂಕರ ವಾಹಿನಿಯ ಅಂಗ ಸಂಸ್ಥೆಯಾಗಿರುವ ಶಂಕರ ಯಾತ್ರಾ ತಂಡದಿಂದ ಜೂ.16ರಂದು 250 ಜನ ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದಾರೆ. ಇವರಲ್ಲಿ 110 ಜನ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದು, ಸಿಮಿಕೋಟ್​ನಲ್ಲಿ 70 ಜನ ಹಾಗೂ ಹಿಲ್ಸಾದಲ್ಲಿ 40 ಜನ ಸಿಲುಕಿದ್ದಾರೆ. ಬುಧವಾರ ಅಥವಾ ಗುರುವಾರ ಹಿಲ್ಸಾ ಮತ್ತು ಸಿಮಿಕೋಟ್​ನಲ್ಲಿ ಸಿಲುಕಿರುವರನ್ನು ಕಠ್ಮಂಡುಗೆ ಕರೆತರಲಾಗುವುದು. ರಸ್ತೆ ಮೂಲಕ ಸಂಚರಿಸಿದವರು ಮಂಗಳವಾರ(ಜು.3)ಕಠ್ಮಂಡು ತಲುಪಲಿದ್ದಾರೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಆಮ್ಲಜನಕ ಸಿಲಿಂಡರ್, ಔಷಧಗಳನ್ನು ಟೂರ್ ಗೈಡ್ ಹೊಂದಿದ್ದಾರೆ. ಯಾತ್ರಾರ್ಥಿಗಳ ಕುಟುಂಬಸ್ಥರು ಭಯಪಡಬೇಕಾಗಿಲ್ಲ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇಬ್ಬರ ಸಾವು

ತೀವ್ರ ಚಳಿ ಹಾಗೂ ಹೈ ಆಲ್ಟಿಟ್ಯೂಡ್ ಸಿಕ್​ನೆಸ್ ಕಾರಣದಿಂದಾಗಿ ಕೇರಳದ ಲೀಲಾ ನಾರಾಯಣನ್ ಜು.2ರ ಬೆಳಗ್ಗೆ ಸಿಮಿಕೋಟ್​ನಲ್ಲಿ ಹಾಗೂ ಆಂಧ್ರಪ್ರದೇಶದ ಸತ್ಯ ಲಕ್ಷ್ಮಿ ನಾರಾಯಣ ಸುಬ್ಬರಾವ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತದೇಹಗಳನ್ನು ಮಂಗಳವಾರ ಕಠ್ಮಂಡುಗೆ ತರಲಾಗಿದೆ.

ಏಜೆನ್ಸಿ ಅವ್ಯವಸ್ಥೆ

ಪ್ರವಾಸಕ್ಕೆ ತೆರಳಿ ವಾಪಸಾಗಿರುವ ರಾಮನಗರ ಜಿಲ್ಲೆಯ ಬೇವೂರಿನ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ವಾಪಸಾಗಿದ್ದೇನೆ. ಪ್ರವಾಸ ಕರೆದುಕೊಂಡು ಹೋದ ಏಜೆನ್ಸಿಯವರು ಸೂಕ್ತ ವ್ಯವಸ್ಥೆ ಮಾಡದೆ ಊಟ-ತಿಂಡಿಗೂ ಅಲೆದಾಡುವಂತಾಯಿತು. ಈಗ ಯಾತ್ರಿಕರನ್ನು ಸಂರ್ಪಸಲೂ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಆರನೇ ತಂಡ

ಶ್ರೀನಗರ: ಪ್ರಸಿದ್ಧ ಅಮರನಾಥ ಯಾತ್ರೆಯ ಆರನೇ ತಂಡದ ಯಾತ್ರಿಕರು ಜಮ್ಮುವಿನಿಂದ ಗುಹೆ ಕಡೆಗೆ ಮಂಗಳವಾರ ಪ್ರಯಾಣ ಆರಂಭಿಸಿದರು. 774 ಮಹಿಳೆಯರು ಮತ್ತು 237 ಸಾಧುಗಳನ್ನು ಒಳಗೊಂಡ 3,489 ಯಾತ್ರಿಕರ ತಂಡ ಭಾಗ್ವತಿ ನಗರ ನೆಲೆಯಿಂದ ಹೊರಟಿದೆ. ಇದುವರೆಗೂ 36,366 ಯಾತ್ರಿಕರು ಅಮರನಾಥನ ದರ್ಶನ ಪಡೆದಿದ್ದಾರೆ. ಜೂನ್ 28ಕ್ಕೆ ಆರಂಭಗೊಂಡ 60 ದಿನಗಳ ಅಮರನಾಥ ಯಾತ್ರೆ ಆಗಸ್ಟ್ 26ರಂದು ಮುಕ್ತಾಯವಾಗಲಿದೆ.

ರಾಜ್ಯದವರು ಸುರಕ್ಷಿತವೆಂದ ಸಚಿವ ಆರ್.ವಿ. ದೇಶಪಾಂಡೆ

ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಅಮರನಾಥ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ ಒದಗಿಸುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಅಧಿಕಾರಿಗಳನ್ನು ಸಂರ್ಪಸಿ ರಕ್ಷಣೆಗೆ ಕೋರಿದ್ದು, ರಾಜ್ಯದ ಎಲ್ಲ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಯಾರಿಗೂ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು. ಯಾತ್ರಾರ್ಥಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ದೆಹಲಿಯಲ್ಲಿರುವ ಸ್ಥಾನಿಕ ಆಯುಕ್ತರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ ಎಂದು ಹೇಳಿದರು.

ನೆರವಿಗೆ ಕೇಂದ್ರ ಸರ್ಕಾರದ ಕ್ರಮ

ನವದೆಹಲಿ: ಮಾನಸ ಸರೋವರ ಯಾತ್ರೆಗೆ ಹೊರಟ 1,500 ಭಾರತೀಯ ಯಾತ್ರಿಕರು ನೇಪಾಳದ ವಿವಿಧೆಡೆ ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ನೆರವಿಗೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ, ‘ಸಿಮಿಕೋಟ್​ನಲ್ಲಿ 525 ಯಾತ್ರಿಗಳು, ಹಿಲ್ಸಾದಲ್ಲಿ 550 ಮತ್ತು ಟಿಬೆಟ್​ನಲ್ಲಿ 500 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರನ್ನು ರಕ್ಷಿಸಲು ನೇಪಾಳ ಸೇನಾ ಹೆಲಿಕಾಪ್ಟರ್​ಗಳ ನೆರವು ಕೇಳಲಾಗಿದೆ’ ಎಂದಿದ್ದಾರೆ.

ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿನ ಪ್ರತಿನಿಧಿಗಳು ಸಿಮಿಕೋಟ್ ಮತ್ತು ನೇಪಾಳಗಂಜ್​ಗೆ ತೆರಳಿದ್ದು, ಯಾತ್ರಾರ್ಥಿಗಳಿಗೆ ಆಹಾರ ಪೂರೈಕೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...