ಸಿಲಿಕಾನ್ ಸಿಟಿಯಲ್ಲಿ ಇನ್ನೂ ಮೂರು ದಿನ ಇರಲಿದೆ ಮಳೆ: ಗುರುವಾರ ಮುಸ್ಸಂಜೆ ಒಂದೂವರೆ ಗಂಟೆ ಸುರಿದ ವರುಣ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜಧಾನಿಯ ವಿವಿಧೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆ ವೇಳೆ ಒಂದೂವರೆ ಗಂಟೆ ಜೋರು ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಮನೆಯ ನಿವಾಸಿಗಳು ಪರದಾಡಿದರು. ಮಾರುತಿ ಮಂದಿರದಲ್ಲಿ 23.5 ಮಿ.ಮೀ., ನಾಗರಬಾವಿ ಯಲ್ಲಿ 28, ಕುಮಾರಸ್ವಾಮಿ ಲೇಔಟ್​ನಲ್ಲಿ 18, ಕಾಟನ್​ಪೇಟೆಯಲ್ಲಿ 13.5, ಅಗ್ರಹಾರ ದಾಸರಹಳ್ಳಿಯಲ್ಲಿ 17, ನಾಯಂಡಹಳ್ಳಿಯಲ್ಲಿ 16.5, ಬಸವೇಶ್ವರನಗರದಲ್ಲಿ 11.5, ರಾಜಮಹಲ್ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ 11, ಹಂಪಿನಗರದಲ್ಲಿ … Continue reading ಸಿಲಿಕಾನ್ ಸಿಟಿಯಲ್ಲಿ ಇನ್ನೂ ಮೂರು ದಿನ ಇರಲಿದೆ ಮಳೆ: ಗುರುವಾರ ಮುಸ್ಸಂಜೆ ಒಂದೂವರೆ ಗಂಟೆ ಸುರಿದ ವರುಣ