ಸಾಗರ: ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಚಿಕ್ಕಮತ್ತೂರು ಗ್ರಾಮದ ಯುವರಾಜ್ ಅವರ ಹಸು ಮೇಲೆ ಧರೆ ಬಿದ್ದು ಮೃತಪಟ್ಟಿದೆ.
ಮಾಸೂರು ಗ್ರಾಮದಲ್ಲಿ ಮಳೆಯಿಂದ ವಾಸುದೇವ ಅವರ ಮನೆಗೆ ಹಾನಿಯಾಗಿದೆ. ಭೀಮನಕೊಣೆ ಸಮೀಪ ಕೆರೆಕೊಪ್ಪದ ಪ್ರಶಾಂತ್ ಅವರ ಮನೆ ಗೋಡೆ ಕುಸಿದಿದೆ. ಮಳೆಯಿಂದಾಗಿ ಗ್ರಾಮಾಂತರ ಮತ್ತು ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಶಾಲೆಯ ಕಾಂಪೌಂಡ್‌ಗಳು ಕುಸಿದಿವೆ. ಶರಾವತಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಅನಾಹುತವಾದ ಕಡೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.