ಅನಾಹುತಗಳಿಗೆ ಕಾರಣವಾದ ಮಳೆ

ಗೋಣಿಕೊಪ್ಪ:

ಈ ಬಾರಿಯ ಮಳೆಗಾಲ ದಕ್ಷಿಣ ಕೊಡಗು ಭಾಗದಲ್ಲಿ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿದೆ. ಕೇರಳವನ್ನು ಸಂಪರ್ಕ ಪ್ರಮಖ ರಸ್ತೆಯೇ ಕಡಿತವಾಗಿದ್ದು, ಬದಲಿ ಮಾರ್ಗ ಅವಲಂಬಿಸುವ ಅನಿವಾರ್ಯತೆ ಉಂಟಾಗಿದೆ. ನಾಟಿ ಆಗಿದ್ದ ಗದ್ದೆಗಳಿಗೆ ನೀರು ನುಗ್ಗಿ ದೊಡ್ಡ ಪ್ರಮಾಣದಲ್ಲಿ ಪೈರು ಕೊಳೆತು ಹೋಗಿ ಅನ್ನದಾತರಿಗೂ ನಷ್ಟವಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದಿರುವುದರಿಂದ ದಕ್ಷಿಣ ಕೊಡಗಿನ ಹಲವಾರು ಕಡೆ ಪ್ರವಾಹ ಸ್ಥಿತಿ ಕಂಡುಬAತು. ಮರಗಳು ಬಿದ್ದು, ವಿದ್ಯುತ್ ಕಂಬಗಳು ತುಂಡಾಗಿ, ಮನೆಗಳಿಗೂ ಹಾನಿಯಾಗಿವೆ. ಬಹುತೇಕ ನದಿ ತೊರೆಗಳು ತುಂಬಿ ಹರಿದ ಪರಿಣಾಮ ಅಲ್ಲಲ್ಲಿ ರಸ್ತೆ ಸಂಪರ್ಕವೂ ಕಡಿತ ಆಗಿತ್ತು.
ಪೊನ್ನಂಪೇಟೆ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆÀ 2186.05 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 956.07 ಮಿ.ಮೀ. ಮಳೆಯಾಗಿತ್ತು.

ತುಂಬಿ ಹರಿದ ನದಿಗಳು: ಕುಟ್ಟ, ಹರಿಹರ, ಇರ್ಪು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು ಲಕ್ಷ್ಮಣ ತೀರ್ಥ ನದಿ ಭರ್ತಿಯಾಗಿ ಬಾಳೆಲೆ ಸಮೀಪ ನಿಟ್ಟೂರು ಸೇತುವೆಯ ಪಕ್ಕದಲ್ಲಿ ನದಿಯ ಎರಡೂ ಬದಿಯ ಗದ್ದೆಗೆ ನೀರು ಅವರಿಸಿತ್ತು. ಇದರಿಂದಾಗಿ ಈ ವರ್ಷ ನೆಟ್ಟ ಭತ್ತದ ಪೈರು ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟ ಉಂಟಾಗಿದೆ.
ನಿಟ್ಟೂರು ಗ್ರಾಮದ ನಾಗರಹೊಳೆ ರಕ್ಷಿತಾರಣ್ಯದ ಅಂಚಿನಲ್ಲಿರುವ ಕಾರ್ಮಾಡು ಚಿಣ್ಣನ ಹಾಡಿಯ ಮುಂದೆ ಇರುವ ತೋಡಿನಲ್ಲಿ ನೀರು ತುಂಬಿ ಹರಿಯುತ್ತಿದ್ದು ಅಪ್ಪು ಎಂಬುವವರ ಮನೆಯ ಸಮೀಪಕ್ಕೆ ಬಂದು ಆತಂಕಕ್ಕೆ ಕಾರಣವಾಗಿತ್ತು. ಕಳೆದ ವರ್ಷ ಸುರಿದ ಭಾರಿ ಮಳೆ ಸಂದರ್ಭ ನೀರಿನ ರಭಸಕ್ಕೆ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ನಂತರ ಜಿಲ್ಲಾಡಳಿತ ಹೊಸ ಸೇತುವೆ ನಿರ್ಮಿಸಿ, ರಸ್ತೆಯ ಎರಡೂ ಬದಿಗೆ ತಡೆಗೋಡೆ ನಿರ್ಮಿಸಿ ರಸ್ತೆಯನ್ನು ಎತ್ತರಿಸಿ ತೋಡಿನ ಹೂಳೆತ್ತುವ ಭರವಸೆ ನೀಡಿತ್ತಾದರೂ ಈ ವರೆಗೂ ಕಾಮಗಾರಿ ಆರಂಭಿಸಿದಿರುವ ಬಗ್ಗೆ ಚಿಣ್ಣನ ಹಾಡಿ ಪ್ರಮುಖ ಮಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಿ.ಶೆಟ್ಟಿಗೇರಿ-ಕೊಂಗಣ-ಕುಟ್ಟAದಿ ಮತ್ತು ಕುಂದ-ಬಿ.ಶೆಟ್ಟಿಗೇರಿ-ಕುAದ ಸೇತುವೆ ಮೇಲೆ ಎರಡೂ ಕಡೆಗಳಲ್ಲಿ ಅಧಿಕ ಮಳೆಯ ಕಾರಣ ನೀರು ಬಂದು ಸಮಸ್ಯೆ ಉಂಟಾಗಿತ್ತು. ಸೇತುವೆಯ ಒಂದು ಕಡೆ ಬಿರುಕು ಬಿಟ್ಟು ಅಪಾಯದ ಮುನ್ಸೂಚನೆ ಇದ್ದುದರಿಂದ ಈ ಭಾಗದಲ್ಲಿ ಸಂಚಾರ ಕಡಿತಗೊಳಿಸಲಾಗಿತ್ತು.

ಗಾಳಿ ಮಳೆಗೆ ಹಾನಿ: ಕೊಳತ್ತೋಡು ಬೈಗೋಡು ಗ್ರಾಮದ ಕಾಲೋನಿ, ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದೂರು ಗ್ರಾಮ, ಕುಟ್ಟಂದಿ, ಪೊನ್ನಂಪೇಟೆ ಗ್ರಾಮದಲ್ಲಿ ಹಲವು ಮನೆಗಳಿಗೆ ಮಳೆಯಿಂದ ಹಾನಿ ಆಗಿದೆ. ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲಲ್ಲಿ ಗಾಳಿಗೆ ಬೃಹತ್ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರಕ್ಕೂ ಸಮಸ್ಯೆ ಆಗಿತ್ತು.

ಅಂತರಾಜ್ಯ ರಸ್ತೆ ಸಂಪರ್ಕ ಬಂದ್: ಕರ್ನಾಟಕ, ಕೇರಳ ರಾಜ್ಯ ಹೆದ್ದಾರಿ ಶ್ರೀಮಂಗಲದಿAದ ಕುಟ್ಟ ಕಡೆ ಹೋಗುವಲ್ಲಿ ಕಾಯಿಮಾನಿ ಎಂಬಲ್ಲಿ ರಸ್ತೆ ಬದಿ ಮೊದಲು ಮಣ್ಣು ಕುಸಿದಿತ್ತು. ಅರ್ಧಭಾಗಕ್ಕೆ ಬ್ಯಾರಿಕೇಡ್ ಅಳವಡಿಸಿ ಇನ್ನೊಂದು ಬದಿ ವಾಹನ ಸಂಚಾರ ಮಾಡಲು ಅವಕಾಶ ಮಾಡಿ ಕೊಡಲಾಗಿತ್ತು. ಇನ್ನೊಂದು ಬದಿಯಲ್ಲಿ ಖಾಸಗಿ ಬಸ್ ಕೆಸರಿನಲ್ಲಿ ಹೂತು ಹೋಗಿ ಸಂಪೂರ್ಣ ಸಂಚಾರ ಬಂದ್ ಆಗಿತ್ತು. ನಂತರ ಜಿಲ್ಲಾಡಳಿತ ಆ.27 ರ ವರೆಗೆ ಈ ರಸ್ತೆಯಲ್ಲಿ ಎಲ್ಲಾ ವಾಹನ ಸಂಚಾರವನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ವಾಹನ ಸವಾರರು ನಾಲ್ಕೇರಿ – ಶ್ರೀಮಂಗಲ ಮೂಲಕ ಸಾಗಬಹುದಾಗಿದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಗೂ ಆಗಮಿಸಿ ಪರಿಶೀಲಿಸಿದ್ದರು.
ಟಿ.ಶೆಟ್ಟಿಗೇರಿ ಸಮೀಪ ನಡೆಯುತ್ತಿದ್ದ ರ‍್ಯಾಫ್ಟಿಂಗ್ ಕ್ರೀಡೆಯನ್ನು ಹೆಚ್ಚು ನೀರು ಮತ್ತು ಹರಿವಿನ ಒತ್ತಡದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಳಾಜಿ, ಹುದಿಕೇರಿ ಮತ್ತು ಟಿ.ಶೆಟ್ಟಗೇರಿಯಲ್ಲಿ ಕಾಳಜಿ ಕೆಂದ್ರಗಳನ್ನು ತೆರೆಯಲಾಗಿತ್ತು. ಸೂಕ್ಷ್ಮ ಪ್ರದೇಶಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಣೆಯ ಲಕ್ಷಣಗಳು ಕಂಡುಬರುತ್ತಿರುವುದರಿAದ ಕಾಳಜಿ ಕೇಂದ್ರದಿAದ ಮತ್ತೆ ಮನೆಗೆ ಮರಳಿದ್ದಾರೆ.
ಗೋಣಿಕೊಪ್ಪ- ಶ್ರೀಮಂಗಲ – ಕುಟ್ಟ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ಇದುವರೆಗೆ 400 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗಿದೆ.
ಶ್ರೀಮಂಗಲ – ಕುಟ್ಟ ವ್ಯಾಪ್ತಿಯಲ್ಲಿ ಲೈನ್‌ಮೆನ್ ಕೊರತೆ ಇದ್ದು ಗುತ್ತಿಗೆ ಆಧಾರದಲ್ಲಿ ಹಾಸನದಿಂದ ನೇಮಕ ಮಾಡಲಾಗಿದ್ದರೂ ಪ್ರತೀ 15 ದಿನಕ್ಕೊಮ್ಮೆ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಸ್ಥಳ ಪರಿಚಯವಿರದ ಹಿನ್ನೆಲೆ ತುರ್ತು ಕೆಲಸಕ್ಕೆ ಅಡ್ಡಿ ಆಗುತ್ತಿದೆ ಎಂದು ಶ್ರೀಮಂಗಲ ಕುಟ್ಟ ವ್ಯಾಪ್ತಿಯ ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಂದ್ರ ಪ್ರಸಾದ್ ಅಸಹಾಯಕತೆ ತೋಡಿಕೊಂಡಿದ್ದಾರೆ. ಹೊಸಬರು ಕೊಡಗಿನಲ್ಲಿ ನಿಯುಕ್ತಿಗೊಂಡರೂ ದಿನಕ್ಕೆ 4 ರಿಂದ 6 ಇಂಚು ಮಳೆ ಸುರಿಯುತ್ತಿರುವದರಿಂದ ತ್ವರಿತ ಕೆಲಸಕ್ಕೆ ಅಡ್ಡಿಯಾಗಿದೆ..

ಕಳೆದ ವರ್ಷ ಗೋಣಿಕೊಪ್ಪದ ಕೀರೆ ಹೊಳೆ ತುಂಬಿ ಪಟ್ಟಣದ ಒಳಗೆ ಮನೆ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈ ಬಾರಿ ಮೊದಲೇ ಎಚ್ಚೆತ್ತುಕೊಂಡ ಗೋಣಿಕೊಪ್ಪ ಗ್ರಾ.ಪಂ ಮಳೆಗಾಲ ಆರಂಭವಾಗುತ್ತಿದ್ದAತೆಯೇ ಕೀರೆಹೊಳೆಯ ಹೂಳು ತೆಗೆದು, ಎರಡೂ ಬದಿಯನ್ನು ಸ್ವಚ್ಛಗೊಳಸಿಸದ ಕಾರಣ ಈ ಬಾರಿ ಪಟ್ಟಣದ ಜನರು ನಿಟ್ಟುಸಿರು ಬಿಡುವಂತಾಗಿತ್ತು.

ಕಳೆದ ಬಾರಿ ಗೋಣಿಕೊಪ್ಪ ಪಟ್ಟಣದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿತ್ತು. ಅದಕ್ಕೆ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದAತೆ ಕೀರೆಹೊಳೆಯ ಹೂಳೆತ್ತುವ ಕಾರ್ಯ ಕೈಗೊಂಡಿದ್ದೆವು. ನದಿಯ ಎರಡೂ ಬದಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ನಿಗಾವಹಿಸಿದ್ದೆವು. ಇದರಿಂದಾಗಿ ಈ ಬಾರಿ ಮಳೆಗಾಲದಲ್ಲಿ ಪಟ್ಟಣದ ಒಳಗೆ ಯಾವುದೇ ಹಾನಿ ಸಂಭವಿಸಿಲ್ಲ.
ಕುಲ್ಲಚAಡ ಪ್ರಮೋದ್ ಗಣಪತಿ, ಗ್ರಾ.ಪಂ. ಅಧ್ಯಕ್ಷ, ಗೋಣಿಕೊಪ್ಪ

ಈ ಬಾರಿ ಮಳೆಯಿಂದ ದಕ್ಷಿಣ ಕೊಡಗಿನ ಭಾಗದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಅನಾಹುತಗಳು ಸಂಭವಿಸಿದೆ ಹೊರತು ದೇವರ ದಯೆಯಿಂದ ಜೀವ ಹಾನಿಯಾಗುವಂತ ಘಟನೆ ನಡೆದಿಲ್ಲ. ಗೋಣಿಕೊಪ್ಪ ಗ್ರಾ.ಪಂ ಮುಂಜಾಗ್ರತಾ ಕ್ರಮದಿಂದ ಪಟ್ಟಣದ ಜನ ನೆಮ್ಮದಿಯಿಂದ ಮಳೆಗಾಲ ಕಳೆದಿದ್ದಾರೆ. ಇನ್ನು ಮುಂದೆಯೂ ಈ ರೀತಿ ಮುಂಜಾಗ್ರತಾ ಕ್ರಮ ವಹಿಸಿದರೆ ಉತ್ತಮ.
ಸಿಂಗಿ ಸತೀಶ್, ಜಿಲ್ಲಾ ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ

ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ ಎಂದು ಮೈಮರೆಯುವಂತಿಲ್ಲ. ಜುಲೈನಲ್ಲಿ ಸುರಿದ ಧಾರಾಕಾರ ಮಳೆಯಿಂದ ನದಿ, ಜಲಾಶಯ, ತೊರೆ, ಹಳ್ಳ-ಕೊಳ್ಳಗಳು ತುಂಬಿ ಹರಿದವು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಆದ್ದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಲಾಗಿದೆ. ಮಳೆ ಹಾನಿ ತಕ್ಷಣದ ಕಾರ್ಯಗಳಿಗೆ ಗ್ರಾ.ಪಂ. ನಿಂದ ಹಣ ಬಿಡುಗಡೆ ಮಾಡಲಾಗುವುದು.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…