ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರೈಲ್ವೆ ಭದ್ರತಾ ದಳ (ಆರ್ಪಿಎ್) 2024-25ರ ಆಥಿರ್ಕ ವರ್ಷದಲ್ಲಿ ಮನೆಯಿಂದ ತಪ್ಪಿಸಿಕೊಂಡಿದ್ದ 583 ಮಕ್ಕಳನ್ನು ರಸುವ ಜತೆಗೆ ಹಲವಾರು ಅಕ್ರಮ ಕಾರ್ಯಗಳಿಗೆ ತಡೆವೊಡ್ಡಿದೆ.

ಪ್ರಮುಖವಾಗಿ ರೈಲುಗಳಲ್ಲಿ ಸಾಗಿಸುತ್ತಿದ್ದ 4.05 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ರೈಲ್ವೆ ಭದ್ರತಾ ದಳ ಸಿಬ್ಬಂದಿ, 441.30 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. 66 ಪ್ರಕರಣಗಳನ್ನು ದಾಖಲಿಸಿ, 25 ಜನರನ್ನು ಬಂಧಿಸಿದ್ದಾರೆ.
ನೈಋತ್ಯ ರೈಲ್ವೆ ವ್ಯಾಪ್ತಿಯ ರೈಲುಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಗೊತ್ತು, ಗುರಿ ಇಲ್ಲದೇ ತಿರುಗುತ್ತಿದ್ದ 583 ಮಕ್ಕಳನ್ನು ಆಪರೇಶನ್ ನನ್ಹೆ ರಿಸ್ತೆ ಯೋಜನೆ ಅಡಿ ಕಾಪಾಡಿದ ಆರ್ಪಿಎ್ ಸಿಬ್ಬಂದಿ, ಅವರ ಪಾಲಕರಿಗೆ ಸುರತವಾಗಿ ಹಸ್ತಾಂತರಿಸಿದ್ದಾರೆ. ಇವರಲ್ಲಿ 480 ಬಾಲಕರು ಹಾಗೂ 103 ಬಾಲಕಿಯರು ಇದ್ದಾರೆ.
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ, 94 ಪ್ರಕರಣ ದಾಖಲಿಸಿದ್ದು, 13.16 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ರೈಲ್ವೆ ಪ್ಲಾಟ್ಾಮ್ರ್ಗಳಲ್ಲಿ ರೈಲು ಏರಲು ಹೋಗಿ ಅಥವಾ ಇಳಿಯುವ ಸಮಯದಲ್ಲಿ ಕಾಲು ಜಾರಿ ಹಳಿಗಳ ಮೇಲೆ ಬೀಳುತ್ತಿದ್ದ ಆರು ಜನ ಪುರುಷರನ್ನು ಕಾಪಾಡಿದ್ದಾರೆ.
ಇದರೊಂದಿಗೆ ಪ್ರಯಾಣಿಕರ ಕಳ್ಳತನವಾದ ವಿವಿಧ ವಸ್ತುಗಳನ್ನು ಪತ್ತೆ ಮಾಡುವಲ್ಲಿ ಆರ್ಪಿಎ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 19.99 ಲಕ್ಷ ರೂ. ಮೌಲ್ಯದ 207 ಮೋಬೈಲ್ ಪೋನ್ಗಳನ್ನು, 8.74 ಲಕ್ಷ ರೂ. ಮೌಲ್ಯದ 61 ಲ್ಯಾಪ್ಟಾಪ್ಗಳನ್ನು, 9.02 ಲಕ್ಷ ರೂ. ಮೌಲ್ಯದ 44 ಚಿನ್ನಾಭರಣಗಳನ್ನು ಪತ್ತೆ ಹಚ್ಚಿ, ಪ್ರಯಾಣಿಕರಿಗೆ ಮರಳಿ ನೀಡಿದ್ದಾರೆ.
58 ಜನ ಪ್ರಯಾಣಿಕರು ಕಳೆದುಕೊಂಡಿದ್ದ 3.73 ಲಕ್ಷ ರೂ.ಗಳನ್ನು ಸಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಕಳ್ಳತನವಾಗಿದ್ದ 7.96 ಲಕ್ಷ ರೂ. ಮೌಲ್ಯದ 290 ಸರಕುಗಳನ್ನು ಪತ್ತೆ ಹಚ್ಚಿ, ಪ್ರಯಾಣಿಕರಿಗೆ ವಾಪಸ್ಸು ನೀಡಿದ್ದಾರೆ.
ಆರ್ಪಿಎ್ನಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಧ್ಯ ಇರುವ ಸಿಬ್ಬಂದಿಯೇ ತುರ್ತು ಕಾರ್ಯಾಚರಣೆ ನಡೆಸಿ, ಅಕ್ರಮ ವ್ಯವಹಾರ ತಡೆಯುವ ಜತೆಗೆ ಪ್ರಯಾಣಿಕರ ಸುರತ ಪ್ರಯಾಣಕ್ಕೆ ಪ್ರಯತ್ನಿಸಿದ್ದಾರೆ ಎಂದು ನೈಋತ್ಯ ರೈಲ್ವೆ ವಲಯದ ಸಿಪಿಆರ್ಒ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.