
ಹುಬ್ಬಳ್ಳಿ: ರೈಲ್ವೆ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹರಿಸುವುದು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮನವಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿ- ಅಂಕೋಲಾ ಹೊಸ ರೈಲು ಮಾರ್ಗ ಯೋಜನೆ ತ್ವರಿತಗೊಳಿಸಬೇಕು, ಸಾಪ್ತಾಹಿಕ ವಿಶೇಷ ರೈಲುಗಳನ್ನು ಮುಂದುವರಿಸಬೇಕು ಮತ್ತು ಅವುಗಳನ್ನು ನಿಯಮಿತಗೊಳಿಸಬೇಕು. ಹುಬ್ಬಳ್ಳಿಯಿಂದ ನೇರ ರೈಲುಗಳನ್ನು ಪರಿಚಯಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಶ್ರೀ ಈಡೇರಿಸುವಂತೆ ಕೋರಿದ್ದಾರೆ.
ಹಲವು ರೈಲುಗಳು ಬೆಂಗಳೂರು/ಮೈಸೂರುಗಳಿಂದ ಹೊರಡುತ್ತಿದ್ದು, ಹುಬ್ಬಳ್ಳಿಯಿಂದ ಬರುವ ಪ್ರಯಾಣಿಕರಿಗೆ ಕಾಯ್ದಿರಿಸುವಿಕೆ ಕಷ್ಟವಾಗುತ್ತದೆ. ಹಾಗಾಗಿ ಅವುಗಳನ್ನು ಹುಬ್ಬಳ್ಳಿಯಿಂದ ಹೊರಡುವಂತೆ ಮಾಡಬೇಕು. ಕೆಲವು ರೈಲುಗಳ ಬೋಗಿಗಳನ್ನು ಹೆಚ್ಚಿಸಬೇಕು. ರೈಲೊಂದಕ್ಕೆ ನಾಕೋಡ್ ರೈಲು ಎಂದು ನಾಮಕರಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ, ತಮಿಳುನಾಡು ರಾಜಸ್ತಾನ ಜನರಿರುವದರಿಂದ ಕೇರಳ, ಮದ್ರಾಸ ಚೆನ್ನೈಗೂ ಕೂಡ ವಿಶೇಷ ರೈಲುಗಳನ್ನು ಪರಿಚಯಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಮಹಾಪ್ರಭಂಧಕ ಕೆ.ಎಸ್. ಜೈನ, ವಿಭಾಗೀಯ ರೇಲ್ವೆ ವ್ಯವಸ್ಥಾಪಕರಾದ ಮೀನಾ ಬೇಲಾ, ಇತರರು ಉಪಸ್ಥಿತರಿದ್ದರು.