ರೈಲ್ವೆ ಸಿಎಒ ಶರ್ಮಾ ಸನ್ಮಾನ

ಹುಬ್ಬಳ್ಳಿ: ಇಲ್ಲಿಯ ನೈಋತ್ಯ ರೈಲ್ವೆ ವಲಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾಗಿ (ಸಿಎಒ) ನೇಮಕವಾದ ಅಜಯ ಶರ್ಮಾ ಅವರನ್ನು ರೈಲ್ವೆ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪ್ರತಿಷ್ಠಿತ ಹುದ್ದೆ ಅಲಂಕರಿಸಿದ ಶರ್ಮಾ ಅವರು ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿ ಪಡೆದಿದ್ದಾರೆ. 1990ರ ಇಂಡಿಯನ್ ರೈಲ್ವೆ (ಐಆರ್ಎಸ್ಇ) ಬ್ಯಾಚ್‌ ನ ಇವರು 1992ರಲ್ಲಿ ಸೇವೆಗೆ ಸೇರ್ಪಡೆಯಾದರು.

ಅಲ್ಲಿಂದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇವರ ಚಾಕಚಕ್ಯತೆಯ ಕೆಲಸ ಕಾರ್ಯಗಳು ಇಲಾಖೆಯಲ್ಲಿ ಗಮನ ಸೆಳೆದಿವೆ.

ಭೂಪಾಲ್ ಹಾಗೂ ಇಂದೋರ್ನಲ್ಲಿ ಯೋಜನಾ ನಿರ್ದೇಶಕರಾಗಿ, ಉತ್ತರ ರೈಲ್ವೆಯಲ್ಲಿ ಮುಖ್ಯ ಸೇತುವೆ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ರೈಲ್ವೆ ಬೋರ್ಡ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಅಪಾರ ಜ್ಞಾನವುಳ್ಳ ಅಜಯ ಶರ್ಮಾ ಅವರು ನೈಋತ್ಯ ರೈಲ್ವೆಗೆ ಬಂದಿರುವುದು ಗುತ್ತಿಗೆದಾರರಲ್ಲಿ ಅಪಾರ ಸಂತೋಷ ಉಂಟು ಮಾಡಿದೆ. ಬಹು ಆಯಾಮದ ವ್ಯಕ್ತಿತ್ವದ ಅವರೊಂದಿಗೆ ಕೆಲಸ ಮಾಡುವುದು ನಮಗೆ ಒದಗಿರುವ ಸದವಕಾಶ ಎಂದು ಬಣ್ಣಿಸಿದರು.

ಕೆ. ರಮಣ ಮೂರ್ತಿ, ಕೆ. ಪೊನ್ನ ರಾವ್ ಇತರ ಸದಸ್ಯರು ಹಾಜರಿದ್ದರು.

Share This Article

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…