ಮಂಗಳೂರು-ಹಾಸನ ರೈಲು ಸಂಚಾರ ಇಂದು ರಾತ್ರಿಯಿಂದ ಪುನರಾರಂಭ

<< ರೈಲು ಹಳಿಗಳ ಮೇಲೆ ಕುಸಿದಿದ್ದ ಗುಡ್ಡದ ಅವಶೇಷ ತೆರವು >>

ಹಾಸನ: ನಿರಂತರ ಮಳೆಯಿಂದಾಗಿ ಹಾಸನ ಮತ್ತು ‌ಯಡಕುಮರಿ ಬಳಿ‌ ರೈಲು ಹಳಿಯ ಮೇಲೆ ಕುಸಿದಿದ್ದ ಗುಡ್ಡದ ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ಮಂಗಳೂರು-ಹಾಸನ ನಡುವಿನ ರೈಲು ಸಂಚಾರ ಇಂದು (ಜೂ.12) ರಾತ್ರಿಯಿಂದ ಆರಂಭವಾಗಲಿದೆ.

ಸೋಮವಾರ ಮುಂಜಾನೆ ಸಕಲೇಶಪುರ ತಾಲೂಕಿನ ಯಡಕುಮರಿ ಬಳಿ ರೈಲ್ವೆ ಹಳಿಗಳ ಮೇಲೆ‌ ಗುಡ್ಡ ಕುಸಿತ ಉಂಟಾಗಿತ್ತು. ಹೀಗಾಗಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ ರೈಲ್ವೆ ಸಿಬ್ಬಂದಿ ಗುಡ್ಡದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಇಂದು ರಾತ್ರಿ ‌9-30 ಕ್ಕೆ ಮಂಗಳೂರು-ಹಾಸನ ನಡುವಿನ ರೈಲು ಮಾರ್ಗ

ಸಂಚಾರಕ್ಕೆ ಮುಕ್ತವಾಗಲಿದೆ. ಇಂದು ರಾತ್ರಿ ಯಶವಂತಪುರ-ಕಾರವಾರ ರೈಲು ಇದೇ ಮಾರ್ಗವಾಗಿ ತೆರಳಲಿದೆ.

Leave a Reply

Your email address will not be published. Required fields are marked *