ನಾರಾಯಣಪುರ ಡ್ಯಾಂಗೆ 95 ಸಾವಿರ ಕ್ಯೂಸೆಕ್ ನೀರು

ಲಿಂಗಸುಗೂರು: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಕಾರಣ ಕೊಯಿನಾ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ನಾರಾಯಣಪುರ ಜಲಾಶಯದ ಗರಿಷ್ಠ ನೀರಿನ ಮಟ್ಟ 492.252 ಮೀಟರ್ (33 ಟಿಎಂಸಿ) ಇದ್ದು, ಮಂಗಳವಾರ ನೀರಿನ ಮಟ್ಟ 490.4 ಕ್ಯೂಸೆಕ್ (25 ಟಿಎಂಸಿ) ನೀರು ಸಂಗ್ರವಾಗಿದೆ. ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆಯಿದ್ದು, ನೀರಿನ ಒಳಹರಿವು ಪ್ರಮಾಣ ಗಮನಿಸಿ ಮಂಗಳವಾರ ಸಂಜೆ 5 ಗಂಟೆ ಬಳಿಕ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಕ್ರಸ್ಟ್ ಗೇಟ್ ಮೂಲಕ ನೀರು ಹರಿ ಬಿಡುವ ಸಾಧ್ಯತೆ ಇರುತ್ತದೆ.

ಬಸವಸಾಗರಕ್ಕೆ 95 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಒಳಹರಿವು ಪ್ರಮಾಣ ಗಮನಿಸಿ ಮಂಗಳವಾರ ಸಂಜೆ 5 ಗಂಟೆ ಬಳಿಕ ಕ್ರಸ್ಟ್ ಗೇಟ್ ಮೂಲಕ ಕೃಷ್ಣಾ ನದಿಗೆ ನೀರು ಹರಿಬಿಡುವ ಸಾಧ್ಯತೆಯಿದೆ. ಕೃಷ್ಣಾ ನದಿ ತೀರದ ಗ್ರಾಮಗಳ ಜನ ಮುನ್ನೆಚ್ಚರಿಕೆ ವಹಿಸಬೇಕು. ಜನ-ಜಾನುವಾರುಗಳು ನದಿ ತೀರಕ್ಕೆ ತೆರಳದಂತೆ ಗಮನ ಹರಿಸಬೇಕು.
– ಆರ್.ಎಲ್.ಹಳ್ಳೂರು ಕೆಬಿಜೆಎನ್‌ಎಲ್‌ನ ಎಇಇ