ರಾಯಚೂರು: ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ನೆರೆ ಸಂತ್ರಸ್ತರಿಗೆ ಪುನರ್ ವಸತಿಯೋಜನೆಯಡಿ ಕಲ್ಪಿಸಿದ ಮನೆಗಳ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಫಲಾನುಭವಿಗಳಿಂದ ನಗರದ ಡಿಸಿ ಕಚೇರಿ ಮುಂದೆ ಕಚೇರಿ ಸ್ಥಾನಿಕ ಅಧಿಕಾರಿ ಪರಶುರಾಮಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಬಾರಿ ಮಳೆಯಿಂದಾಗಿ 2009ರಲ್ಲಿ ನೆರ ಹಾವಳಿ ಉಂಟಾಗಿ, ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ಜನರು ಮನೆಗಳು ಕಳೆದುಕೊಂಡಿದ್ದರು. ಸೂರು ಕಳೆದುಕೊಂಡವರಿಗೆ ಸರ್ಕಾರದಿಂದ ಇದುವರೆಗೂ ಪನರ್ ವಸತಿ ಮನೆಗಳನ್ನು ಹಂಚಿಕೆ ಮಾಡಿಲ್ಲ. ಸರ್ವೆ ಮಾಡಿ ಗುರುತಿಸಿದ ಫಲಾನುಭವಿಗಳನ್ನು ಬಿಟ್ಟು ಹೊಸದಾಗಿ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ನೆರೆ ಸಂತ್ರಸ್ತರ ಮನೆಗಳನ್ನು ಹಂಚಲು ಹುನ್ನಾರ ನಡೆದಿದೆ ಎಂದು ಆರೋಪಿಸಲಾಯಿತು.
ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯಿಂದ ತಯಾರಿಸಲಾದ ಪಟ್ಟಿಯಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ವಿತರಣೆ ಮಾಡುವಂತೆ ಕ್ರಮ ವಹಿಸಬೇಕು, ಸಂಬಂದಪಟ್ಟ ಅಧಿಕಾರಿಗಳು ಕೂಲಕುಂಷವಾಗಿ ಪರಿಶೀಲಿಸಿ ನೈಜ ಫಲಾನುಭವಿಗಳಿಗೆ ಮನೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹನುಮಂತಪ್ಪ ಮನ್ನಾಪೂರ, ದೇವೇಂದ್ರಪ್ಪ, ಬಸವಗೌಡ, ಇಸ್ಮಾಯಿಲ್, ಬಸವರಾಜ, ಸುವರ್ಣಮ್ಮ, ಸಿದ್ದಲಿಂಗಮ್ಮ, ಯಲ್ಲಮ್ಮ, ಆದಪ್ಪ, ರಾಮಣ್ಣ ಸೇರಿದಂತೆ ಇತರರಿದ್ದರು.
