More

    ಭಗವಂತನ ಸ್ಮರಣೆಗೆ ಮುಂದಾಗಿ; ಉತ್ತಾರಾದಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರ ಸಲಹೆ

    ಮಹಾನ್ ಜ್ಞಾನ ಸತ್ರ ಕಾರ್ಯಕ್ರಮಕ್ಕೆ ಚಾಲನೆ

    ರಾಯಚೂರು: ಭಗವಂತನ ಸ್ಮರಣೆಯನ್ನು ಸರಿಯಾಗಿ ಮಾಡಿ, ಆಚರಿಸುವ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಲು ಮಹಾನ್ ಜ್ಞಾನಸತ್ರ ಸಹಕಾರಿಯಾಗಲಿದೆ ಎಂದು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಉತ್ತಾರಾದಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

    ನಗರದ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಟಿಟಿಡಿ ದಾಸ ಸಾಹಿತ್ಯ ಪಾಜೆಕ್ಟ್, ಗುರುರಾಜ ಭಜನಾ ಮಂಡಳಿ ಆಶ್ರಯದಲ್ಲಿ ಭಜನಾ ಮಂಡಳಿಯ 52ನೇ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಮಹಾನ್ ಜ್ಞಾನಸತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಅನಾದಿಕಾಲದಿಂದ ಭಗವಂತನ ನಾಮ ಸ್ಮರಣೆ ನಿರಂತರವಾಗಿ ಸಾಗಿ ಬಂದಿದೆ. ಯಾವುದೇ ಧ್ವೇಷ, ಕಲ್ಮಶ ಇಲ್ಲದೆ ಭಗವಂತನ ಆರಾಧನೆಯ ಜತೆ ನಾವು ಆಚರಿಸಬೇಕಾದ ಸಂಪ್ರದಾಯ, ಕಲಿತುಕೊಳ್ಳಬೇಕಾದ ಸಂಸ್ಕಾರಗಳನ್ನು ಹಲವು ಪಂಡಿತರು, ಮಠಾಧೀಶರು ತಿಳಿಸಿಕೊಡಲು ಉತ್ತಮ ವೇದಿಕೆ ಇದಾಗಿದೆ ಎಂದರು.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಗರ ಬ್ರಾಹ್ಮಣರ ಸಂಘದಿಂದ ಘೋಷಿಸಿದ ವಿಪ್ರೋತ್ತಮ ಪ್ರಶಸ್ತಿಯನ್ನು ಸಮುದಾಯದ ಹಿರಿಯರಾದ ಬಿ.ನರಸಿಂಗರಾವ್‌ಗೆ ಶ್ರೀ ಸತ್ಯಾತ್ಮ ತೀರ್ಥರು ಪ್ರದಾನ ಮಾಡಿದರು. ಜಿಲ್ಲಾಧ್ಯಕ್ಷ ಜಗನ್ನಾಥ ಕುಲಕರ್ಣಿಯನ್ನು ಸನ್ಮಾನಿಸಲಾಯಿತು. ನಗರಾಧ್ಯಕ್ಷ ಗುರುರಾಜ ಆಚಾರ್ಯ ತಾಳಿಕೋಟೆ, ಗುರುರಾಜ ಭಜನಾ ಮಂಡಳಿ ಪ್ರ.ಕಾ. ಗುರುರಾಜ್‌ರಾವ್ ಗೋರ್ಕಲ್, ಜಯತೀರ್ಥ ಗಬ್ಬೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts