ರಾಜ್ಯಮಟ್ಟದ ದಾಸ ಸಾಹಿತ್ಯ ವಿಚಾರ ಸಂಕಿರಣ ಇಂದು

<ಡಾ.ಲಕ್ಷ್ಮಿಕಾಂತ ಮೊಹರೀರ ಮಾಹಿತಿ>

ರಾಯಚೂರು: ನಗರದ ಸಾವಿತ್ರಿ ಕಾಲನಿಯಲ್ಲಿರುವ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ದಾಸ ಸಾಹಿತ್ಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ದಾಸೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಪತರು ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಡಾ.ಲಕ್ಷ್ಮಿಕಾಂತ ಮೊಹರೀರ ತಿಳಿಸಿದರು.

ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ನಿಟ್ಟಿನಲ್ಲಿ ಶ್ರೀ ಸಮೀರ ಸಾಂಸ್ಕೃತಿಕ ಸೇವಾ ವಿಶ್ವಸ್ಥ ಮಂಡಳಿಯ ಉದ್ಘಾಟನೆ ಕಾರ್ಯಕ್ರಮವೂ ನಡೆಯಲಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ವಿವಿ ಪ್ರಾಧ್ಯಾಪಕ ಡಾ.ವಿಠ್ಠಲರಾವ್ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್, ಡಾ.ದಸ್ತಗೀರಸಾಬ್ ದಿನ್ನಿ, ಶ್ರೀನಿವಾಸ ಮೂರ್ತಾಚಾರ್ಯ, ಡಾ.ಶೀಲಾದಾಸ್ ಭಾಗವಹಿಸಲಿದ್ದಾರೆ ಎಂದರು.

ದಾಸ ಸಾಹಿತ್ಯದ ವಿವಿಧ ಆಯಾಮಗಳು ವಿಷಯ ಕುರಿತು ಮೈಸೂರು ವಿವಿ ಪ್ರಸಾರಾಂಗ ವಿಭಾಗದ ಸಹ ನಿರ್ದೇಶಕ ಡಾ.ಅನಿಲಕುಮಾರ ಬೊಮ್ಮಘಟ್ಟ, ದಾಸ ಸಾಹಿತ್ಯ ಮತ್ತು ಮಹಿಳೆಯರ ಸಂವೇದನೆಗಳು ವಿಷಯ ಕುರಿತು ಬೆಂಗಳೂರಿನ ವಿ.ರೇವತಿ ಉಪನ್ಯಾಸ ನೀಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸತ್ಯನಾರಾಯಣ ಮುಜುಮದಾರ್, ಡಾ.ಪ್ರಮೋದ ಕಟ್ಟಿ, ಡಾ.ವೆಂಕಟೇಶ ನವಿ ಅವರಿಗೆ ಕಲ್ಪತರು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ ಹಲವು ಗಣ್ಯರಿಗೆ ಸನ್ಮಾನ ಮತ್ತು ಹಲವು ಕೃತಿಗಳ ಲೋಕಾರ್ಪಣೆ ನಡೆಯಲಿದೆ ಎಂದು ಡಾ.ಲಕ್ಷ್ಮಿಕಾಂತ ಮಾಹಿತಿ ನೀಡಿದರು.

ದಾಸೋತ್ಸವ ಸಮಿತಿ ಅಧ್ಯಕ್ಷ ನರಸಿಂಗರಾವ್ ದೇಶಪಾಂಡೆ, ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಹರಿಶಾಚಾರ್ಯ ಕೊಪ್ಪರ, ಶ್ರೀನಿವಾಸ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ಕೋಪ್ರೇಶ ದೇಸಾಯಿ ಇದ್ದರು.

Leave a Reply

Your email address will not be published. Required fields are marked *