ಕಸಾಯಿಖಾನೆ ಸಾಗಿಸುತ್ತಿದ್ದ 15 ಗೋವುಗಳ ರಕ್ಷಣೆ

ರಾಯಚೂರು: ನಗರದಲ್ಲಿನ ಬೀಡಾಡಿ ದನಗಳನ್ನು ಟಂಟಂನಲ್ಲಿ ಹಾಕಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಸದರ್ ಬಜಾರ್ ಠಾಣೆ ಪೊಲೀಸರು ದಾಳಿ ನಡೆಸಿ 15 ಜಾನುವಾರುಗಳನ್ನು ಗುರುವಾರ ರಕ್ಷಣೆ ಮಾಡಿದ್ದಾರೆ.

ನಗರದ ಅಶೋಕ ಡಿಪೋ ಹತ್ತಿರ ಟಂಟಂನಲ್ಲಿ ಜಾನುವಾರುಗಳನ್ನು ಹಾಕಿಕೊಂಡು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದಾಗ ಜಿಲ್ಲೆಯ ವಿವಿಧೆಡೆ ರೈತರಿಂದ ಖರೀದಿ ಮಾಡಿ ತರಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ಮೇವು ಹಾಕಿ ರಕ್ಷಣೆ ಮಾಡಿದ್ದು, ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.