ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ರಾಯಚೂರು: ಪತ್ನಿಯ ಶೀಲ ಶಂಕಿಸಿ, ಆಕೆಯನ್ನು ಕೊಂದು ಅನುಮಾನ ಬಾರದಂತೆ ನೇಣು ಬಿಗುದುಕೊಂಡ ಸ್ಥಿತಿಯಲ್ಲಿರಿಸಿದ ಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ !

ನಗರ ವ್ಯಾಪ್ತಿಯ ರಾಮನಗರ ಕ್ಯಾಂಪ್‌ನ ಇಂದಿರಾ ನಗರದಲ್ಲಿ ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಪತಿ, ಪತ್ನಿ ಜಗಳ ಮಾಡಿಕೊಂಡಿರುವ ಅನುಮಾನಗಳು ವ್ಯಕ್ತವಾಗಿವೆ. ಮೃತಳನ್ನು ಹೈದರಾಬಾದ್ ಮೂಲದ ಹುಲಿಗೆಮ್ಮ (29) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಲಯದ ಸಿಪಿಐ ಪರಿಶೀಲನೆ ನಡೆಸಿ, ಕೊಲೆಗೈದ ಆರೋಪದಡಿ ಪತಿ ಹುಲಿಗೆಪ್ಪನನ್ನು ಬಂಧಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.