More

    ಪುಣ್ಯಸ್ನಾನ ಮಾಡಿ ಸಂಕ್ರಾಂತಿ ಹಬ್ಬ ಆಚರಣೆ

    ರಾಯಚೂರು : ಸಂಕ್ರಾತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಹಿಳೆಯರು ಮನೆ ಮುಂದೆ ಬಣ್ಣ, ಬಣ್ಣದ ರಂಗೋಲಿ ಹಾಕಿದರೆ, ಇನ್ನೂ ಕೆಲವರು ಸಮೀಪದ ತುಂಗಭದ್ರಾ ಹಾಗೂ ಕೃಷ್ಣಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    ನಗರ ಸೇರಿ ಗ್ರಾಮೀಣ ಭಾಗದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬುಧವಾರ ಬೆಳಗ್ಗೆ ಮಹಿಳೆಯರು ಮನೆಯಂಗಳದಲ್ಲಿ ಎರಕ ಹೋಯ್ದು, ಅಂಧವಾದ ಬಗೆ, ಬಗೆಯ ರಂಗೋಲಿಗಳನ್ನು ಹಾಕುತ್ತಿರುವುದು ಕಂಡು ಬಂತು. ಗಜ್ಜರಿ, ಗೆಣಸು ಇಟ್ಟು ಕೊಂತೆಮ್ಮನ ಸ್ಮರಣೆ ಮಾಡಿದರು.

    ಕೆಲವರು ತಾಲೂಕಿನ ದೇವಸುಗೂರು ಹತ್ತಿರದ ಕೃಷ್ಣಾ ನದಿ ತೀರದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ಸಂಕ್ರಾಂತಿಯ ವಿಶೇಷ ಎಳ್ಳು, ಬೆಲ್ಲ ,ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ  , ತರಕಾರಿ ಮಿಶ್ರಿತ ಬರ್ತಾದ ಭೋಜನವನ್ನು ಕುಟುಂಬದ ಸಮೇತರಾಗಿ ಸವಿದು ವಿಶೇಷವಾಗಿ ಆಚರಿಸಿದರು.

    ಪುಣ್ಯಸ್ನಾನ ಮಾಡಿ ಸಂಕ್ರಾಂತಿ ಹಬ್ಬ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts