ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್)ನಲ್ಲಿ ಖಾಯಂ ಸ್ವರೂಪವುಳ್ಳ ಕಾರ್ಯವನ್ನು ಮಾಡುತ್ತಾ ಬಂದಿರುವ ಗುತ್ತಿಗೆ ಕಾರ್ಮಿಕರು ಶಾಸನಬದ್ಧ ಬೇಡಿಕೆಗಳಿಗನುಸಾರ ಆರ್ಥಿಕ ಸವಲತ್ತು ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕರ ಮಹಾಸಂಘದ ಉಪಾಧ್ಯಕ್ಷ ಎಸ್.ಬಿ ಪಾಟೀಲ್ ಹೇಳಿದರು.
ಇದನ್ನೂ ಓದಿ: ಬೇಡಿಕೆ ಈಡೇರಿಸದ್ದಕ್ಕೆ ವಾಹನಕ್ಕೆ ತಡೆ: ಕಂಪನಿ ಆಡಳಿತ ಮಂಡಳಿ ವಿರುದ್ಧ ಮುಂದುವರಿದ ಕಾರ್ಮಿಕರ ಹೋರಾಟ
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ 25 ವರ್ಷಗಳಿಂದ ತಮ್ಮ ಜೀವವನ್ನು ಪಣಕಿಟ್ಟು ಅತ್ಯಂತ ಉಷ್ಣ ಹಾಗೂ ದೂಳಿನ ಪ್ರದೇಶದಲ್ಲಿ ದಕ್ಷತೆಯಿಮದ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಮತ್ತು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.7ಕ್ಕೆ ಹೋರಾಟಕ್ಕೆ ಮುಂದಾದಾಗ ಹತ್ತಿಕ್ಕುವ ಪ್ರಯತ್ನವನ್ನು ಮಾಡಿರುವುದು ಅತ್ಯಂತ ಖಂಡನೀಯ ಎಂದು ಆರೋಪಿಸಿದರು.
ಇತ್ತೀಚೆಗೆ ಕಾರ್ಮಿಕ ಇಲಾಖೆಯ ಆದೇಶದಂತೆ ಪರಿಷ್ಕೃತ ಶೇ.8ರಷ್ಟು ಹೆಚ್ಚುವರಿ ಬಾಕಿಯೊಂದಿಗೆ ಪಾವತಿಸದೇ ಇರುವುದಕ್ಕೆ ಕೆಮಿಕಲ್ ವಿಭಾಗದ ಕಾರ್ಮಿಕರು ನೀಡಿರುವ ಪತ್ರಕ್ಕೆ ಅಲ್ಲಿರುವ ಅಧಿಕಾರಿಗಳು ಹಾಗೂ ಗುತ್ತಿಗೆ ಸೂಪರ್‌ವೈಸರ್‌ಗಳು ಏಳು ಕಾರ್ಮಿಕರನ್ನು ಎದರಿಸುತ್ತಾ ಸಂಘದ ಒಗ್ಗಟ್ಟನ್ನು ಹದಗೆಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹಾದೇವಪ್ಪ, ವಿಶ್ವನಾಥ, ಖಾಜಾ ಹುಸೇನ್, ರಂಗಾರೆಡ್ಡಿ, ವೆಂಕಟೇಶ್ ಸೇರಿದಂತೆ ಇತರರಿದ್ದರು.