ರಸ್ತೆಯಲ್ಲಿ ಪಾಕ್ ಧ್ವಜ ಚಿತ್ರಿಸಿ ಬೈಕ್ ಓಡಿಸಿದ ಯುವಕರು

ರಾಯಚೂರು: ನಗರದ ಬಸವನಬಾವಿ ವೃತ್ತದಲ್ಲಿ ರಸ್ತೆ ಮೇಲೆ ಪಾಕ್ ಧ್ವಜದ ಚಿತ್ರ ಬಿಡಿಸಿರುವ ಪ್ರಕರಣ ಬಯಲಾಗಿದ್ದು, ಕಾಶ್ಮೀರದಲ್ಲಿ ಸೈನಿಕರ ಹತ್ಯೆ ಖಂಡಿಸಿ ಯುವಕರು ಪಾಕ್ ಧ್ವಜದ ಚಿತ್ರ ಬಿಡಿಸಿ ಆಕ್ರೋಶ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ಪೇಂಟಿಂಗ್‌ನಿಂದ ಪಾಕ್ ಧ್ವಜ ಬಿಡಿಸಿರುವುದು ಬೆಳಕಿಗೆ ಬಂದ ನಂತರದಲ್ಲಿ ಇದೊಂದು ಕಿಡಿಗೇಡಿಗಳ ಕೃತ್ಯ ಎಂದು ಅಂದಾಜಿಸಲಾಗಿತ್ತು. ಆದರೆ, ಯುವಕರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಚಿತ್ರ ಬಿಡಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

ಸಿಸಿ ಕ್ಯಾಮರಾದಲ್ಲಿ ಯುವಕರು ಫೆ.17ರಂದು ರಾತ್ರಿ ಪಾಕ್ ಧ್ವಜ ಚಿತ್ರ ಬಿಡಿಸಿ ಅದರ ಮೇಲೆ ಬೈಕ್‌ಗಳನ್ನು ಓಡಿಸಿ, ಕಾಲಿನಿಂದ ತುಳಿಯುವುದರ ಜತೆಗೆ ಕಸಕಡ್ಡಿ ಹಾಕಿ ಬೆಂಕಿ ಹಚ್ಚಿ ಪುಲ್ವಾಮಾ ಘಟನೆ ಖಂಡಿಸಿ ಘೋಷಣೆ ಕೂಗಿದ್ದಾರೆ.

ಈ ಕುರಿತು ರಾಜಶೇಖರ ಮತ್ತು ಪೇಂಟರ್ ಶಿವಕುಮಾರ ಎಂಬ ಯುವಕರ ವಿಚಾರಣೆ ನಡೆಸಿದಾಗ ಪುಲ್ವಾಮಾ ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಡಿವೈಎಸ್‌ಪಿ ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.