ರಾಯಚೂರು: ವಿದ್ಯಾರ್ಥಿಯ ಜೀವನ ಅಮೂಲ್ಯ ವಾಗಿದೆ. ಉತ್ತಮವಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನ ಪಡೆಯಿರಿ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯೆ ಕಲ್ಪನಾ ಬಿರಾದರ್ ಹೇಳಿದರು.
ನಗರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಶುಕ್ರವಾರ 25ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟ ಗಳಿಗೆ ಬಲಿಯಾಗಬಾರದು ಎಂದರು. ಶಾಲೆಯ ಪ್ರಾಚಾರ್ಯೆ ದೀಪಾಶ್ರೀ ವಾರ್ಷಿಕ ವರದಿಯನ್ನು ವಿದ್ಯಾರ್ಥಿ ಗಳಿಗೆ ನೀಡಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ನಂತರ 1 ರಿಂದ 7 ನೇ ತರಗತಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಶಿಕ್ಷಕರಾದ ವೈ.ಎಂ.ಕಾವ್ಯ, ರಾಮಚಂದ್ರ, ಪಾರಸ್ ಪಾಂಡೆ, ಶ್ಯಾಮಲಾ, ಸಾಗರ್, ಆದಯ್ಯ ಹಿರೇಮಠ, ದಿನೇಶ ಇತರರಿದ್ದರು.