ರಾಯಚೂರು: ಪೇಜಾವರ ಶ್ರೀಗಳು ತಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂಬ ವಿವಾಧಾತ್ಮಕ ಹೇಳಿಕೆ ನೀಡಿದ್ದು ಖಂಡನೀಯ ಎಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಉಸ್ತುವಾರಿ ಎಂ.ಆರ್.ಭೇರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಶಿವಮೊಗ್ಗದಲ್ಲಿ ನ.11ರಂದು ಒಡನಾಟ ಸಮಿತಿ ಆಯೋಜಿಸಿದ್ದ ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ನಾವು ಎಂಬ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮನ್ನು ಗೌರವಿಸುವ ಸಂವಿಧಾನ ಬೇಕಾಗಿದೆ ಎಂದು ಹೇಳಿಕೆ ನೀಡಿರುವುದು ಸಂವಿಧಾನ ವಿರೋಧಿಯಾಗಿದೆ ಎಂದರು.
ಸಂವಿಧಾನ ಪ್ರತಿಯೊಬ್ಬರಿಗೂ ಸಮಾನವಾದದ್ದು, ಯಾರಿಗೂ ಇಲ್ಲಿ ಮೇಲು ಕೀಳು ಎಂಬ ಭಾವನೆಯಿಲ್ಲ. ಆದರೆ ಪೇಜವರ ಶ್ರೀಗಳು ಸಂವಿಧಾನ ಬಗ್ಗೆ ಹಗೂರವಾಗಿ ಮಾತನಾಡಿರುವುವುದು ಸರಿಯಲ್ಲ ಎಂದು ಅಸಮಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಎಂ.ಬಸವರಾಜ ಭಂಡಾರಿ, ಹನುಮಂತಪ್ಪ ಅತ್ತನೂರು, ಜಿಲ್ಲಾಧ್ಯಕ್ಷ ಜೈಭೀಮ, ಜಿಲ್ಲಾ ಸಂಯೋಜಕ ಬುಡ್ಡಪ್ಪ, ಉಪಾಧ್ಯಕ್ಷ ಹನುಮಂತು, ಸದಸ್ಯ ಸೈಯದ್ ಅಬ್ದುಲ್ ಸೇರಿದಂತೆ ಇತರರಿದ್ದರು.